Tuesday, November 5, 2024
Google search engine
Homeಇ-ಪತ್ರಿಕೆದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಭೀಮ’ ಅಗಸ್ಟ್ 9ಕ್ಕೆ ಬಿಡುಗಡೆ

ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಭೀಮ’ ಅಗಸ್ಟ್ 9ಕ್ಕೆ ಬಿಡುಗಡೆ

ದುನಿಯಾ ವಿಜಯ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ಭೀಮ’ ಚಿತ್ರ  ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸದ್ಯ ಸ್ಟಾರ್ ನಟರ ಚಿತ್ರಗಳಿಲ್ಲದೇ ಸೊರಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಭೀಮ ಚಿತ್ರ ಬಲತುಂಬುವ ನಿರೀಕ್ಷೆ ಮೂಡಿದೆ.

ಆಗಸ್ಟ್ 9ರಂದು’ಭೀಮ’ ಚಿತ್ರ   ತೆರೆಗೆ ಬರಲಿದೆ.  ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗ್ತಿದ್ದಂತೆ ದುನಿಯಾ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ್ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ.

ಅಚ್ಯುತ್ ಕುಮಾರ್, ಕಲ್ಯಾಣಿ ರಾಜು, ಗಿರಿಜಾ, ಬ್ಲಾಕ್ ಡ್ರ್ಯಾಗನ್ ಮಂಜು, ರಂಗಾಯಣ ರಘು, ಉಳಿದ ತಾರಾ ಬಳಗದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ, ಶಿವಸೇನಾ ಛಾಯಾಗ್ರಹಣವಿದೆ.

RELATED ARTICLES
- Advertisment -
Google search engine

Most Popular

Recent Comments