ಗರ್ಭಿಣಿ- ಬಾಣಂತಿಯರಿಗೆ ಪೌಷ್ಠಿಕ ಊಟ ಮಾತೃಪೂರ್ಣ ಯೋಜನೆಗೆ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ

ಶಿವಮೊಗ್ಗ : ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವಂತಹ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಟಾನಗೊಳಿಸುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ಶೇಷಾದ್ರಿಪುರ ಅಂಗನವಾಡಿ ಆವರಣದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂ ತಿಯರಿಗೆ ಊಟವನ್ನು ಬಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅವರ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಪೌಷ್ಟಿಕ ಆಹಾರ ನೀಡುವುದು ಈ ಯೋಜನೆಯ ಗುರಿಯಾಗಿದೆ ಎಂದರು.
ತಾಯಿ ಮತ್ತು ಮಗು ಆರೋಗ್ಯ ಪೂರ್ಣವಾಗಿರಬೇಕು ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಮಾತ್ರವಲ್ಲದೆ ಬಾಣಂತಿ ಯರಿಗೂ ಆರು ತಿಂಗಳ ಕಾಲ ಅನ್ನ, ಸಾಂಬಾರು, ಪಲ್ಯ, ಬೇಯಿಸಿದ ಮೊಟ್ಟೆ, ಕಬ್ಬಿಣಾಂಶವುಳ್ಳ ಚಿಕ್ಕಿಯನ್ನು ತಿಂಗಳಿಗೆ ೨೫ದಿನ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳೆಕೆ ಬರಿಸಿದ ಕಾಳನ್ನು ನೀಡಲಾಗುವುದು. ಇದರೊಂದಿಗೆ ಕಬ್ಬಿ ಣಾಂಶದ ಮಾತ್ರೆಯನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ತಾಯಿಂದಲೇ ಸಮಾಜ ನಿರ್ಮಾಣ ವಾಗಿದ್ದು, ಅಂತಹ ತಾಯಿ ಆರೋಗ್ಯ ಪೂರ್ಣವಾಗಿದ್ದರೆ ಮಾತ್ರ ಸಮಾಜ ಆರೋಗ್ಯ ಪೂರ್ಣವಾಗಿರಲು ಸಾಧ್ಯ. ಸಂತು ಲಿತ ಆಹಾರದ ಮೂಲಕ ತಾಯಿ ಮಗುವಿಗೆ ಪೌಷ್ಟಿಕ ಆಹಾರ ದೊರಕಲಿದೆ. ಇದರ ಪ್ರಯೋಜನ ಎಲ್ಲಾ ಅರ್ಹರಿಗೂ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯನ್ನು ೨೪೩೯ಅಂಗನವಾಡಿಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಅಂಗನ ವಾಡಿ ಕೇಂದ್ರಗಳಲ್ಲಿ ನಮೂದಿಸಲಾಗಿರುವ ೧೩೭೪೧ಗರ್ಭಿಣಿಯರು ಹಾಗೂ ೧೨೫೪೯ ಬಾಣಂತಿಯರು ಸೇರಿ ಒಟ್ಟು ೨೬೨೯೦ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ಊಟಕ್ಕೆ ಒಟ್ಟು ೨೧ರೂ. ವೆಚ್ಚ ಬೀಳಲಿದೆ ಎಂದರು
ಈ ಸಂದರ್ಭದಲ್ಲಿ ಶಾಸಕರುಗಳು ಸೂಡಾಧ್ಯಕ್ಷ ಇಸ್ಮಾಯಿಲ್ ಖಾನ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.