Thursday, September 19, 2024
Google search engine
Homeಅಂಕಣಗಳುಲೇಖನಗಳುಚರಣ್‌ಸಿಂಗ್‌ರು ನೈಜ ಕಾಳಜಿ ಹೊಂದಿದ್ದ ಧೀಮಂತ ನಾಯಕ : ಡಾ. ಮಂಜುನಾಥ್

ಚರಣ್‌ಸಿಂಗ್‌ರು ನೈಜ ಕಾಳಜಿ ಹೊಂದಿದ್ದ ಧೀಮಂತ ನಾಯಕ : ಡಾ. ಮಂಜುನಾಥ್

ಶಿವಮೊಗ್ಗ : ಭಾರತ ದೇಶದ ಐದನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್‌ರವರ ಜನ್ಮ ದಿನದ ಪ್ರಯುಕ್ತ ರೈತ ದಿನಾಚರu ಯನ್ನು ದೇಶದಾದ್ಯಂತ ಆಚರಿಸುತ್ತಿರು ವುದು ಸಂತೋಷದ ವಿಷಯ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾ ಲಯದ ಪ್ರಭಾರ ಡೀನ್ ಡಾ.ಎಂ. ಮಂಜುನಾಥ್ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾ ಲಯ, ಶಿವಮೊಗ್ಗ ಮತ್ತು ಚೈತನ್ಯ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಭಾರತ ದೇಶದ ಐದನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್‌ರವರ ಜನ್ಮದಿನದ ಪ್ರಯುಕ್ತ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಧಾನಿಯಾಗಿದ್ದಾಗ ರೈತರ ಜೀವನವನ್ನು ಸುಧಾರಿಸಲು ಅವರು ಅನೇಕ ಬದಲಾವಣೆಗಳನ್ನು ಮಾಡಿದರು. ಇವರು ರೈತ ಕುಟುಂ ಬಕ್ಕೆ ಸೇರಿದವರಾಗಿದ್ದರಿಂದ ರೈತರ ಸಮಸ್ಯೆಗಳಿಗೆ ತಾವೇ ಸ್ವತಃ ಸ್ಪಂದಿಸಲು ಸಾಧ್ಯವಾಯಿತು. ರೈತರನ್ನು ಬೆಂಬಲಿ ಸಲು ಅವರು ಅತ್ಯುತ್ತಮವಾದ ಕೆಲಸ ಮಾಡಿದರು. ಇಂತಹ ಮಹಾನ್ ವ್ಯಕ್ತಿಯ ಸ್ಮರಣೆ ಅವಶ್ಯಕ ಎಂದು ಹೇಳಿದರು.
ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಅಕಾ ಲಿಕ ಮಳೆ, ಬೆಳೆಗೆ ಅನಿರ್ಧಿಷ್ಟ ಬೆಲೆ, ನಷ್ಟ ಇವುಗಳನ್ನು ಎದುರಿಸುವುದರ ಜೊತೆಗೆ, ತಮ್ಮ ಕುಟುಂಬ ನಿರ್ವ ಹಣೆಯ ಜವಾಬ್ದಾರಿಯೂ ಸಹ ರೈತನಿಗಿದೆ. ತಾನು ಹಾಕಿದ ಬಂಡ ವಾಳಕ್ಕೆ ಲಾಭ ಬಂದೇ ಬರುತ್ತದೆ ಎಂಬ ಯಾವುದೇ ಖಾತರಿ ಇಲ್ಲ. ಇದರ ಮಧ್ಯೆ ಮಧ್ಯವರ್ತಿಗಳ ಹಾವಳಿ, ರೈತ ಬೆಳೆದ ಬೆಳೆಗೆ ಲಾಭ ಈ ಮಧ್ಯವರ್ತಿಗಳ ಪಾಲು. ಇದನ್ನು ತಪ್ಪಿಸಲು, ಹಾಗೂ ರೈತರು ತಾವು ಬೆಳೆದ ಬೆಳೆಗೆ ಒಳ್ಳೆ ಬೆಲೆ ಸಿಗಲು ರೈತರು ಸಂಘಟಿತರಾಗಬೇಕಿದೆ ಎಂದರು.
ಕೃಷಿ ವಿವಿಯ ಪ್ರಾಧ್ಯಾಪಕ ಡಾ. ನಾರಾಯಣ್ ಮಾತನಾಡಿ, ವರ್ಷಕ್ಕೆ ಒಮ್ಮೆಯಾದರೂ ನಮಗೆ ಅನ್ನ ನೀಡುವ ಅನ್ನದಾತನನ್ನು ಸ್ಮರಿಸುವುದು ನಮ್ಮೆಲ್ಲರ ಧರ್ಮ. ಈ ಅವಕಾಶವನ್ನು ಕಲ್ಪಿಸಿದ್ದು ಚೌಧರಿ ಚರಣ್ ಸಿಂಗ್. ಅವರ ಈ ಒಂದು ಚಿಂತನೆಗೆ ಹಾಗೂ ಅವರು ರೈತ ಸಮುದಾಯಕ್ಕೆ ಕೊಟ್ಟಂತ ಕೊಡುಗೆಗೆ ನಾವುಗಳು ಅಭಾರಿಯಾಗಬೇಕಿದೆ ಎಂದು ಅಭಿಪ್ರಾಯಿಸಿದರು.
ಸಂಶೋಧನಾ ನಿರ್ದೇಶಕ ಡಾ. ಎಂ.ಕೆ.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಬಿ.ಟಿ.ಭದ್ರೀಶ್, ಯಲವಟ್ಟಿ ಮಲ್ಲಿಕಾರ್ಜುನ್, ಕು|| ಸ್ಮಿತ, ಜಿ.ಬಿ., ಡಾ.ಸೋಮಶೇಖರಪ್ಪ ಪಿ.ಆರ್. ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments