ಮಡಿಕೇರಿಯಲ್ಲಿ ಡಾ. ಧನಂಜಯ್‌ ಸರ್ಜಿ ಮತಯಾಚನೆ: ಗೆಲುವಿಗೆ ಪ್ರಾರ್ಥಿಸಿ, ಓಂಕಾರೇಶ್ವರನಿಗೆ ಮೊರೆ

ಮಡಿಕೇರಿ : ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್‌ ಸರ್ಜಿ ಅವರು ಮಂಗಳವಾರ  ಬೆಳಗ್ಗೆ ಇಲ್ಲಿನ ಫೀಲ್ಡ್ ಮಾರ್ಶಲ್ ಕಾರಿಯಪ್ಪ ಕಾಲೇಜಿಗೆ ಬಿಜೆಪಿಯ ವಿವಿಧ ನಾಯಕರು, ಮುಖಂಡರೊಂದಿಗೆ ತೆರಳಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಲ್ಲಿ ಮತಯಾಚಿಸಿದರು.
ಈ ವೇಳೆ ಪ್ರಾಂಶುಪಾಲರಾದ ಮೇಜರ್ ಡಾ.ರಾಘವ ಬಿ., ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಡಿ.ಎಸ್. ಅರುಣ್, ಮಡಿಕೇರಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷರಾದ ರವಿ ಕಾಳಪ್ಪ, ಜಿಲ್ಲಾ ವಕ್ತಾರ ತಾಲೂರ್ ಕಿಶೋರ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೇನಿ, ಚಲನ್ ಕುಮಾರ್, ವಿ.ಕೆ.ಲೋಕೇಶ್, ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಸಂಚಾಲಕರಾದ ಡಾ.ನವೀನ್, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಾಲತೇಶ್ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರು ಹಾಜರಿದ್ದರು.
ಆನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ  ಅಭ್ಯರ್ಥಿಗಳಾದ  ಡಾ. ಧನಂಜಯ ಸರ್ಜಿ ಹಾಗೂ ಎಸ್. ಎಲ್. ಭೋಜೆಗೌಡ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ  ಡಿ.ಎಸ್.ಅರುಣ್, ಸುಜಾಕುಶಾಲಪ್ಪ ಹಾಗೂ ಮಾಜಿ ಶಾಸಕರುಗಳಾದ ಕೆ. ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಇದ್ದರು.
ಇದಕ್ಕೂ ಉನ್ನಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಚುನಾವಣೆಯಲ್ಲಿ ವಿಜಯಶಾಲಿಯಾಗುವಂತೆ ಪ್ರಾರ್ಥಿಸಿ ವಿವಿಧ ನಾಯಕರು ಹಾಗೂ ಮುಖಂಡರೊಂದಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.