ತೀರ್ಥಹಳ್ಳಿ : ಧಾರಾಕಾರಾವಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು ಕೆಲವರು ನದಿಪಾತ್ರದಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಕಂಡು ಬರುತ್ತಿದೆ, ಸಾರ್ವಜನಿಕರು ಅಂತಹ ಹುಚ್ಚಾಟಕ್ಕೆ ಮುಂದಾಗಿ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ತಿಳಿಸಿದ್ದಾರೆ.
ಸಾಮಾಜಿಕ ಮಾದ್ಯಮ ಮೂಲಕ ಮಾತನಾಡಿರುವ ಅವರು, ತುಂಗಾ ನದಿ ಅಪಾಯ ಮಟ್ಟ ತಲುಪುತ್ತಿದೆ. ನದಿಪಾತ್ರದಲ್ಲಿ ಹೆಚ್ಚಿನ ನೀರಿನ ಹರಿವು ಇರುವುದರಿಂದ ಅಪಾಯಕ್ಕೆ ಆಸ್ಪದವಿರುತ್ತದೆ ಸಾರ್ವಜನಿಕರು ನೀರಿಗೆ ಇಳಿಯುವುದು ಸೆಲ್ಪೀ ತೆಗೆಯುವಂತ ಹುಚ್ಚಾಟಕ್ಕೆ ಮುಂದಾಗಬಾರದು. ಒಂದುವೇಳೆ ನದಿ ತಟದಲ್ಲಿ ಪೊಲೀಸ್ ಸೇವೆ ಅವಶ್ಯಕವೆನಿಸಿದರೆ ಹತ್ತಿರದ ಪೊಲೀಸ್ ಠಾಣೆ ಅಥವಾ 112ಸಂಖ್ಯೆಗೆ ಕರೆಮಾಡಬೇಕು ಎಂದು ಮಾಹಿತಿ ನೀಡಿದರು