ಶಿವಮೊಗ್ಗ: ವಿಧಾನಪರಿಷತ್ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ತಮ್ಮ ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷದ ಅಭ್ಯರ್ಥಿಯೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ ಎಂದು ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ದಿನೇಶ್ ಅವರು ಜೆಡಿಎಸ್ ಪಕ್ಷದ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬೋಜೇಗೌಡರೊಂದಿಗೆ ಆಂತರಿಕ ಮೈತ್ರಿ ಮಾಡಿಕೊಂಡು ಒಟ್ಟಾಗಿ ಮತ ಕೇಳುವ ಮೂಲಕ ತಮ್ಮ ಪಕ್ಷದ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಎಲ್ಲೆಡೆ ಪದವಿಧರ ಕ್ಷೇತ್ರಕ್ಕೆ ಕಾಂಗ್ರೆಸ್‌ನ ದಿನೇಶ್‌ಗೆ ಮತ ಹಾಕಿ, ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಬೋಜೇಗೌಡರಿಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಕೊಡಗಿನಲ್ಲಿ ಈ ಮೈತ್ರಿಯವರೇ ಮತದಾರರಿಗೆ ಹಣ ಹಂಚುವಾಗ ಸಿಕ್ಕಿಬಿದ್ದಿದ್ದಾರೆ. ದಿನೇಶ್ ದ್ರೋಹವನ್ನು ಸಹಿಸದೆ ಇವರನ್ನು ಚುನಾವಣಾಕಾರಿಗಳ ಮೂಲಕ ಹಿಡಿಸಿದ್ದು ಕಾಂಗ್ರೆಸ್‌ನ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯೇ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು, ಅವುಗಳೆಲ್ಲ ಸತ್ಯಕ್ಕೆ ದೂರವಾಗಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನಾನು ಸಂಸದನಾಗಿದ್ದಾಗ ಕಾಲೇಜುಗಳ ಮಂಜೂರಾತಿ, ಶಿಕ್ಷಕರ ಸಮಸ್ಯೆ, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅದೇ ದಿನೇಶ್ ಅವರು ಏನು ಮಾಡಿದ್ದಾರೆ ಎಂದು ಒಂದೆರಡು ಉದಾಹರಣೆ ಕೊಡಲಿ ಸಾಕು ಎಂದು ಸವಾಲು ಹಾಕಿದರು.
ದಿನೇಶ್ ಅವರ ಕರಪತ್ರದಲ್ಲಿ ತಾವು ಯಾವುದಕ್ಕೆ ಹೋರಾಟ ಮಾಡಿದ್ದೇನೆ, ಎಂದು ಎಲ್ಲೂ ಹೇಳಿಕೊಂಡಿಲ್ಲ. ೫ ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗಲೂ ಪದವಿಧರರ, ನೌಕರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಳಸವಾಗಿಲ್ಲ ಎಂದು ದೂರಿದರು.
ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಕ್ಷೇತ್ರವ್ಯಾಪ್ತಿಯ ೨೭ ಬಿಜೆಪಿ ಶಾಸಕರು ಹಾಗೂ ೫ ಸಂಸದರು ಪಕ್ಷದ ಪರ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಯಡಿಯೂರಪ್ಪನವರೂ ಪ್ರಚಾರ ಕೈಗೊಂಡಿದ್ದಾರೆ.
ಪದವಿಧರ ಕ್ಷೇತ್ರದಲ್ಲಿ ಡಿ.ಹೆಚ್. ಶಂಕರಮೂರ್ತಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ಶಿಕ್ಷಣ ಸಚಿವರಾದಗ ೧೯೧ ಕಾಲೇಜು ಮಂಜೂರು ಮಾಡಿದ್ದಾರೆ. ಉಪನ್ಯಾಸಕರ ನೇಮಕ ಮಾಡಿದ್ದಾರೆ ಎಂದರು. ಈ ಕ್ಷೇತ್ರದ ವಿದ್ಯಾವಂತರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾ ಯವಿದೆ. ಈ ಎಲ್ಲಾ ಅಂಶಗಳು ಬಿಜೆಪಿ ಗೆಲ್ಲಲು ಪೂರಕವಾಗಿವೆ ಎಂದರು.
ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪಕ್ಷದ ಸಂಘಟನೆಯ ಶ್ರಮದಿಂದಾಗಿ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರು ಕಳೆದ ಶಿವಮೊಗ್ಗ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಪರ ಪ್ರಚಾರ ಕೈಗೊಳ್ಳುವ ಮೂಲಕಪಕ್ಷ ವಿರೋ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ, ಶಾಸಕ ಅಶೋಕ್‌ನಾಯ್ಕ, ಪ್ರಮುಖರಾದ ಎನ್.ಜೆ. ರಾಜಶೇಖರ್, ಎಸ್. ದತ್ತಾತ್ರಿ, ಡಿ.ಎಸ್. ಅರುಣ್, ಶಿವರಾಜ್, ಪವಿತ್ರರಾಮಯ್ಯ, ಅನಿತಾ ರವಿಶಂಕರ್, ಮಧುಸೂದನ್ ಮತ್ತಿತರರಿದ್ದರು.