ವೀರಶೈವ ಸಮಾಜದ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿ

ಶಿವಮೊಗ್ಗ : ವೀರಶೈವ ಸಮಾಜ ರಾಜ್ಯದಲ್ಲಿ ಬಹುದೊಡ್ಡ ಸಮಾಜ ವಾಗಿದ್ದು, ಒಳ ಜಾತಿಗಳಲ್ಲಿನ ತಿಕ್ಕಾಟ ದಿಂದಾಗಿ ಸಾಮರಸ್ಯ ಇಲ್ಲವಾಗಿದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ರಾಜ ದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಕುವೆಂಪು ನಗರ ಬಡಾ ವಣೆಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾಘಟಕದ ಮೂರಂತಸ್ತಿನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಬಹುದೊಡ್ಡ ಸಮಾಜದಲ್ಲಿ ಇಂದು ಸಾಮರಸ್ಯ ಇಲ್ಲವಾಗಿದೆ. ಇದ ರಿಂದಾಗಿ ನಮ್ಮ ಸಮಾಜದ ಪ್ರಗತಿಗೆ ಅಡ್ಡಿಯಾಗಿದೆ ಎಂದರು.
ಕೆಲವು ಸಣ್ಣ ಸಣ್ಣ ಸಮಾಜಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಇದ ರಿಂದಾಗಿ ಆ ಸಮಾಜದವರು ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಅಲ್ಲದೆ, ಸರ್ಕಾರದಿಂದ ಸಾಕಷ್ಟು ಸವಲತ್ತುಗಳನ್ನೂ ಕೂಡಾ ಪಡೆದು ಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದ ಅನೇಕ ಸೌಲಭ್ಯಗಳಿಂದ ವಂಚಿತರಾ ಗಿದ್ದೇವೆ ಎಂದರು.
ಮುಂಬರುವ ದಿನಗಳಲ್ಲಿ ನಾವು ನಮ್ಮ ಸಮಾಜದಲ್ಲಿನ ಒಳಪಗಂಡ ಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿ ಸಬೇಕಿದೆ. ಇದು ಆಗದೇ ಹೋದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದ ಅವರು, ವೀರಶೈವ ಸಮಾಜದ ಅಡಿ ಯಲ್ಲಿ ಎಲ್ಲರೂ ಒಟ್ಟಾಗಿ ಒಗ್ಗಟ್ಟು ಪ್ರದರ್ಶಿಸಿದರೆ ನಮ್ಮನ್ನು ಮೀರಿಸು ವವರೂ ಯಾರೂ ಇಲ್ಲದಂತಾ ಗುತ್ತದೆ ಎಂದರು.
ಕಳೆದ ಆರೇಳು ತಿಂಗಳಿನಿಂದ ರಾಜ್ಯದಲ್ಲಿ ವೀರಶೈವ, ಲಿಂಗಾಯತ ಹೆಸರಿನಲ್ಲಿ ಅನೇಕ ಹೋರಾಟಗಳು ನಡೆಯುತ್ತಿವೆ. ಇದು ಒಳ್ಳೆಯ ಬೆಳವ ಣಿಗೆಯಲ್ಲ. ಇದನ್ನು ನೋಡಿದಾಗ ದೊಡ್ಡ ದೊಡ್ಡ ಮಠಾಧೀಶರರಿಗೆ ಖೇದ ಎನಿಸುತ್ತದೆ. ಮುಂದಿನ ದಿನ ಗಳಲ್ಲಾದರೂ ನಮ್ಮ ವೈಮನಸ್ಸು ಗಳನ್ನು ಬದಿಗಿಟ್ಟು ಎಲ್ಲರೂ ಒಟ್ಟಾದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಅದ್ಭುತ ಕಟ್ಟಡ ತಲೆ ಎತ್ತಿದ್ದು, ಇದಕ್ಕೆ ಈ ಹಿಂದೆ ಜಿಲ್ಲೆ ಯವರೇ ಆದ ವ್ಯಕ್ತಿ ಯೋರ್ವರು ಮುಖ್ಯಮಂತ್ರಿಯಾದ ಸಂದರ್ಭ ದಲ್ಲಿ ಸಾಕಷ್ಟು ನೆರವು ನೀಡಿದ್ದಾರೆ. ಇದನ್ನು ನಾವು ಸ್ಮರಿಸಿಕೊಳ್ಳಲೇಬೇಕಾಗಿದೆ ಎಂದ ಅವರು, ಈ ಕಟ್ಟಡದ ನಿರ್ಮಾಣಕ್ಕೆ ಮಹಾಸಭಾದ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಅವರ ಸಹಕಾರವನ್ನೂ ಕೂಡಾ ಸ್ಮರಿಸಬೇಕಾಗಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಮಹಾಸಭಾ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಅಡಿಗಲ್ಲು ಹಾಕಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಕೆಲವೇ ದಿನಗಳಲ್ಲಿ ಕಟ್ಟಡ ಪ್ರಾರಂಭೋತ್ಸವ ಪಡೆಯುವಂತಾಗಲಿ ಎಂದು ಆಶೀಸಿದರು.
ಕಾರ್ಯಕ್ರಮದಲ್ಲಿ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ, ತೊಗರ್ಸಿಯ ಮಹಾಂತ ದೇಶೀ ಕೇಂದ್ರ ಸ್ವಾಮೀಜಿ, ರುದ್ರಮುನಿ ಸಜ್ಜನ್ ಮೊದಲಾದವರಿದ್ದರು.

SHARE
Previous article29 MAR 2018
Next article02-04-2018

LEAVE A REPLY

Please enter your comment!
Please enter your name here