ಅಕ್ಷರ ಜ್ಞಾನಕ್ಕಿಂತ ವ್ಯವಹಾರ ಜ್ಞಾನ ಅಗತ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಶಿವಮೊಗ್ಗ: ಅಕ್ಷರ ಗೊತ್ತಿರು ವುದೇ eನವಲ್ಲ, ವ್ಯವಹಾರ ಗೊತ್ತಿರುವುದೇ ನಿಜವಾದ eನ. ಇದರಿಂದ ಮಾತ್ರ ಪ್ರತಿಯೊಬ್ಬರ ಪ್ರಗತಿ ಸಾಧ್ಯ ಎಂದು ಧರ್ಮ ಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ವತಿಯಿಂದ ನಗರದ ಎನ್‌ಇಎಸ್ ಮೈದಾ ನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಕಾರ್ಯ ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆತ್ಮ ವಿಶ್ವಾಸದ ಕೊರತೆಯಿಂದಾಗಿ ಮಹಿಳೆ ಹಿಂದುಳಿದಿದ್ದಳು, ಇದ ರಿಂದಾಗಿ ಹಿಂದೆ ಪಂಚಾಯ್ತಿ ಗಳು ಸೇರಿದಂತೆ ವಿವಿಧೆಡೆ ಮಹಿಳೆ ಯರಿಗೆ ಅಧಿಕಾರ ಸಿಕ್ಕಲ್ಲಿ ಪುರುಷರು ಅವರ ಹೆಸರಿನಲ್ಲಿ ಚಲಾಯಿಸು ತ್ತಿದ್ದರು. ಆದರೆ ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಅವರೇ ಆಡಳಿತ ನಡೆಸುತ್ತಿದ್ದಾರೆ ಎಂದರು.
ಪ್ರಗತಿ ಹಾಗೂ ಬದಲಾವಣೆ ಪ್ರತಿಯೊಬ್ಬ ಮಹಿಳೆಗೂ ಬೇಕು. ಇದಕ್ಕೆ ಅವಕಾಶವನ್ನು ಧರ್ಮಸ್ಥಳ ಸಂಘ ಕಲ್ಪಿಸಿಕೊಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದ ಅವರು, ಗ್ರಾಮೀಣ ಮಹಿಳೆಯರು ಮೂಡ ನಂಬಿಕೆಗಳಿಂದ ಹೊರ ಬರಬೇಕು. ಸಾಧನೆಯ ಪರಿಶ್ರಮ, ಪ್ರಗತಿ ಹಂಬಲ ಹೊಂದುವ ಮೂಲಕ ಆರ್ಥಿಕ ಅಭಿವೃದ್ಧಿ ಕಾಣಬೇಕು. ಇದಕ್ಕೆ ಸ್ಪಷ್ಟ ಯೋಚನೆ, ಯೋಜನೆ ಹಾಗೂ ಕಾರ್ಯಕ್ರಮ ಇರಬೇಕು.
ಮಹಿಳೆಯಿಂದ ಮಾತ್ರ ಬದುಕು ಕಟ್ಟಲು ಸಾಧ್ಯ. ಗಂಡನ ಕುಡಿತಂದಹ ದುಶ್ಚಟಗಳ ಬಿಡಿಸಿ, ಮಕ್ಕಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಮಹಿಳೆ ಕಷ್ಟ ಪಡುತ್ತಿದ್ದಾಳೆ. ಇಂತಹ ಮಹಿಳೆಯರು ತನಗೆ ಸರ್ಕಾರ ಹಾಗೂ ಕಾನೂನು ನೀಡಿರುವ ಶಕ್ತಿ, ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಸಮಾವೇಶ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಬದುಕುವ ಕಲೆ ಗೊತ್ತಿಲ್ಲದಿರುವುದರಿಂದ ಹಾಗೂ ನೈತಿಕ ಮೌಲ್ಯ ಅಧಪತನ ವಾಗಿರುವುದರಿಂದ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹದಂತಹ ಪಿಡುಗುಗಳು ಮುಂದುವರೆದಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಅವರು ವಿವಿಧ ಸಮಾಜ ಮುಖಿ ಕೆಲಸಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಭಾರತ ದೇಶದ ಜಿಡಿಪಿ ಇಂದು ಏರಿಕೆಯಾಗಲು ಸ್ತ್ರ್ರೀಶಕ್ತಿ ಸಂಘಗಳ ಉಳಿತಾಯವು ಪ್ರಮುಖವಾಗಿದೆ. ಮಹಿಳೆಯರ ಕೊಡುಗೆ ಇದರಲ್ಲಿ ಮುಖ್ಯ ಎಂದರು.
ಸುರೇಖಾ ಮುರಳಿಧರ್ ಸ್ವಾಗತಿಸಿದರು. ಜಿ.ಪಂ. ಅಧ್ಯಕ್ಷೆ ಜ್ಯೋತಿ ಕುಮಾರ್, ಮೇಯರ್ ತಲಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಪ್ರಮುಖರಾದ ಸುರೇಶ್ ಬಾಳೆಗುಂಡಿ, ವಿಜಯಕುಮಾರ್ ದಿನಕರ್, ರಮೇಶ್, ಪಾಲಿಕೆ ಸದಸ್ಯರಾದ ಸುನೀತಾ ಅಣ್ಣಪ್ಪ, ಹೆಚ್.ಸಿ. ಯೋಗೀಶ್ ಮತ್ತಿತರರಿದ್ದರು.