ಶಿವಮೊಗ್ಗ : ಸೇವಾ ಮನೋ ಭಾವವನ್ನು ವಿದ್ಯಾರ್ಥಿ ಜೀವನದ ಲ್ಲಿಯೇ ಬೆಳೆಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಹೇಳಿದರು.
ನಗರದ ಸಹ್ಯಾದ್ರಿ ಕಲಾ ಕಾಲೇಜು ಹಮ್ಮಿಕೊಂಡಿದ್ದ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟನೆ ಹಾಗೂ ಉಪ ನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋ ಭಾವನೆ ಬೆಳೆಸಿಕೊಳ್ಳಬೇಕು. ಇದು ಸಮಾಜದ ಉನ್ನತಿಗೆ ಅನುಕೂಲ ವಾಗುತ್ತದೆ ಎಂದರು.
ಅಶಕ್ತರು, ಅಂಗವಿಕಲರು ಹಾಗೂ ಅಸಹಾಯಕರಿಗೆ ಸಹಾಯ ಮಾಡು ವುದರಿಂದ ಅವರುಗಳಿಗೆ ಸಮಾಜ ದಲ್ಲಿ ಎಲ್ಲರಂತೆ ಬದುಕಲು ಅನುಕೂಲ ವಾಗುತ್ತದೆ. ಇದನ್ನು ಅರಿತಾಗ ಮಾತ್ರ ಸೇವಾ ಮನೋಭಾವ ಬರಲು ಸಾಧ್ಯವಾಗುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಕಾಲೇಜು ವ್ಯವಸ್ಥೆ ಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಪರಿಕಲ್ಪನೆಯನ್ನು ಬೆಳೆಸಬೇಕೆಂದರು.
ಯಾವುದೇ ಒಂದು ಸೇವೆಯನ್ನು ಮಾಡಲು ಅಧಿಕಾರ, ಹಣ, ಸ್ಥಾನ ಬೇಕು ಎಂಬ ಕಲ್ಪನೆ ಹಲವರಲ್ಲಿದೆ. ಇದು ತಪ್ಪು. ಇದು ಯಾವುದು ಇಲ್ಲ ದಿದ್ದರೂ ಸಮಾಜದ ಸೇವೆಯನ್ನು ಮಾಡಬಹುದಾಗಿದೆ ಎಂದ ಅವರು, ನಮ್ಮ ಸಮಾಜದಲ್ಲಿ ಪ್ರತಿನಿತ್ಯವೂ ಸಹ ಹಲವಾರು ಸಮಸ್ಯೆಗಳನ್ನು ನೋಡುತ್ತೇವೆ. ಅದರ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.
ಎನ್‌ಸಿಸಿ, ಎನ್‌ಎಸ್‌ಎಸ್ ಇವು ಗಳಿಂದ ಮಕ್ಕಳಲ್ಲಿ ಶಿಸ್ತು ಬರುತ್ತದೆ. ಅಲ್ಲದೆ, ಸಮಾಜದಲ್ಲಿನ ಮತ್ತು ಸಮಸ್ಯೆಗಳ ವಿರುದ್ಧ ಹೋರಾ ಡುವಂತಹ ಮನೋಭಾವ ಬರುತ್ತದೆ ಎಂದ ಅವರು, ಇಂತಹ ಸಂಸ್ಥೆಗಳಲ್ಲಿ ಸೇರುವ ಮೂಲಕ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪಾಂಡು ರಂಗಪ್ಪ, ಪ್ರೊ. ಮಹಾದೇವಪ್ಪ, ಪ್ರೊ. ಪ್ರಸನ್ನಕುಮಾರ್, ಡಿ.ಎಂ. ಚಂದ್ರ ಶೇಖರ್ ಮೊದಲಾದವರಿದ್ದರು.