ಶಿವಮೊಗ್ಗ : ನಗರದ ಆಯ್ದ ಬಡಾವಣೆಗಳು ಬಹುದಿನಗಳಿಂದ ಸ್ಚಚ್ಚಗೊಳ್ಳದೇ ಕಸದ ರಾಶಿಯಿಂದ ತುಂಬಿಹೋಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಕಾರಣವಾಗಿವೆ ಆದ್ದರಿಂದ ಅವುಗಳನ್ನು ತ್ವರಿತಗತಿಯಲ್ಲಿ ಸ್ವಚ್ಚ ಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಸ್ಥಳೀಯ ಶಾಂತಿನಗರದ ಬೀದಿಗಳಿಗೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ನಗರ ಸ್ವಚ್ಚತಾಕಾರ್ಯಗಳ ಕುರಿತು ಪರಿಶೀಲಿಸಿದರು. ಶಾಂತಿನಗರ ಬಡಾವಣೆಯಲ್ಲಿ ಟೈರ್ ವ್ಯಾಪಾರಿ ಯೊಬ್ಬರು ಬಹುವಿಶಾಲವಾದ ಜಾಗದಲ್ಲಿ ಹಳೆಯ ಟೈರು-ಟೂಬುಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದುದನ್ನು ಖುದ್ದಾಗಿ ಗಮನಿಸಿದ ಜಿಲ್ಲಾಧಿಕಾರಿಗಳು ಈ ಟೈರಿನಲ್ಲಿ ಮಳೆಯ ನೀರು ಸಂಗ್ರಹಗೊಂಡು ಲಾರ್ವಾ, ಸೊಳ್ಳೆಗಳು ಬಹುಸಂಖ್ಯೆಯಲ್ಲಿ ಉಲ್ಬಣಗೊಂಡು ಸಾಂಕ್ರಾ ಮಿಕ ರೋಗಗಳು ಹರಡುವ ಸಂಭವವನ್ನು ಅರಿತು ಕೂಡಲೇ ಟೈರುಗಳನ್ನು ವಿಲೇಮಾಡುವಂತೆ ಸೂಚಿಸಿದರು.
ಶರಾವತಿ ನಗರ ಸೇರಿದಂತೆ ನಗರದ ಬೇರೆ-ಬೇರೆ ಭಾಗಗಳಲ್ಲಿಯೂ ಇದೇ ರೀತಿಯ ವಾತಾವರಣ ಇರಬಹುದಾದ ಸಂದರ್ಭ ವಿದ್ದು, ಅವುಗಳನ್ನು ಪಾಲಿಕೆ ಅಕಾರಿಗಳು ಕೂಡಲೇ ಸ್ವಚ್ಚಗೊಳಿಸಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಸಿ, ಸಹಕಾರ ಪಡೆದು, ಸ್ಚಚ್ಚತೆಯ ನಂತರ ಸೊಳ್ಳೆಗಳು ಹರಡದಂತೆ ಔಷಧ ಸಿಂಪರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಚತಾಕಾರ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಮಾಲಿನ್ಯ ಉಂಟುಮಾಡಿಕೊಳ್ಳುವುದರಿಂದಾ ಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಸೊಳ್ಳೆಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿ ಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೇಯರ್ ಏಳು ಮಲೈ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ಹನುಮಂತಪ್ಪ, ಪಾಲಿಕೆಯ ವೇಣುಗೋಪಾಲ, ಪಾಲಿಕೆ ಸದಸ್ಯೆ ಅರ್ಚನಾ ಬಳ್ಳೆಕೆರೆ, ಡಾ.ಕಾಂತರಾಜ್ ಮುಂತಾದವರು ಉಪಸ್ಥಿತರಿದ್ದರು.