Tuesday, July 23, 2024
Google search engine
Homeಇ-ಪತ್ರಿಕೆಡೆಂಗ್ಯೂ ನಿಯಂತ್ರಣ ಪರಿಣಾಮಕಾರಿಯಾಗಲಿ: ಅಧಿಕಾರಿಗಳಿಗೆ ಎಸ್.ಎನ್.ಚನ್ನಬಸಪ್ಪ ಸೂಚನೆ

ಡೆಂಗ್ಯೂ ನಿಯಂತ್ರಣ ಪರಿಣಾಮಕಾರಿಯಾಗಲಿ: ಅಧಿಕಾರಿಗಳಿಗೆ ಎಸ್.ಎನ್.ಚನ್ನಬಸಪ್ಪ ಸೂಚನೆ

ಶಿವಮೊಗ್ಗ : ಡೆಂಗ್ಯೂ ಪ್ರಕರಣಗಳು ಪ್ರತಿನಿತ್ಯ ಉಲ್ಬಣಗೊಳ್ಳುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಿಸಲು ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಡೆಂಗ್ಯೂ ನಿಯಂತ್ರಣದ ಕುರಿತಾದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರ ಜಿಲ್ಲೆಯ ಮುಖ್ಯಕೇಂದ್ರವಾಗಿದ್ದು ನಗರದಲ್ಲಿ ಡೆಂಗ್ಯೂ ಪ್ರರಕಣಗಳು ಹೆಚ್ಚಾಗದಂತೆ ಕಟೆಚ್ಚರ ವಹಿಸಿ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಈ ವೇಳೆ ಡಿಹೆಚ್‍ಓ ಡಾ. ನಟರಾಜ್ ಮಾತನಾಡಿ, ಶಿವಮೊಗ್ಗ ನಗರ ಪ್ರದೇಶದಲ್ಲಿ 471 ಜನರಿಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು 54 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರತಿ ವಾರ್ಡ್‍ಗಳಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ಶುಕ್ರವಾರ ಡ್ರೈಡೇ ಆಚರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆರು, ಸ್ಥಳೀಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರ್ವೆ ಕಾರ್ಯ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಎಲ್ಲಾ ಇಲಾಖೆಗಳನ್ನು ಬಳಸಿಕೊಳ್ಳಲಾಗಿದೆ. ಗಪ್ಪಿಮೀನು, ಪಾಸಿಟಿವ್ ಕೇಸ್ ಇರುವ ಕಡೆಗಳಲ್ಲಿ ಸೊಳ್ಳೆಯನ್ನು ನಿಯಂತ್ರಿಸುವ ಹೊಗೆಗಳ ಸಿಂಪಣೆ ಮಾಡಲಾಗುತ್ತಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರು ಕಾಯಿಲೆಯ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಮನೆಮನೆಗಳಿಗೆ ತೆರಳಿ ಲಾರ್ವಾ ಸರ್ವೆ ಮಾಡಲು ಸ್ವಯಂ ಸೇವಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಚಿಂತನೆ ಮಾಡಿದ್ದು, ಈ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವುದು. ಮಹಿಳಾ ಸಂಘ, ಕನ್ನಡ ಯುವಕ ಸಂಘ, ಗಣಪತಿ ಸಂಘಟನೆಗಳು, ಸಂಘಸಂಸ್ಥೆಗಳ ಸಭೆ ಕರೆದು ಸಹಕಾರ ಕೋರಿ ಈ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು. ಅಧಿಕಾರಿಗಳು ಪ್ರತಿ ವಾರ್ಡ್‍ಗಳಲ್ಲಿಯೂ ಸರಿಯಾದ ಪ್ರವಾಸ ಮಾಡಿ ಗಂಭೀರವಾಗಿ ತೆಗೆದುಕೊಂಡು ವ್ಯವಸ್ಥಿತವಾಗಿ ಕಾರ್ಯ ಮಾಡಿದ್ದಾರೆ ಡೆಂಗ್ಯೂ ತೊಲಗಿಸಲು ಸಾಧ್ಯ ಎಂದರು.

ಈ ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಡಾ. ಕವಿತ ಯೋಗಪ್ಪನವರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿದ್ದನ ಗೌಡ ಪಾಟಿಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್,ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments