Saturday, November 9, 2024
Google search engine
Homeಅಂಕಣಗಳುಲೇಖನಗಳುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು : ಪ್ರೊ.ರಾಜೇಂದ್ರಚೆನ್ನಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು : ಪ್ರೊ.ರಾಜೇಂದ್ರಚೆನ್ನಿ

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನದಲ್ಲಿ ಹೇಳಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ತಾವು ಪ್ರಜೆಗಳ ಸೇವಕರು ಅಂದುಕೊಂಡಿಲ್ಲ. ಬದಲಾಗಿ ಮಾಲೀಕರಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕುವೆಂಪು ವಿವಿ ಇಂಗ್ಲೀಷ್ ಪ್ಯಾಧ್ಯಾ ಪಕ ಪ್ರೊ.ರಾಜೇಂದ್ರಚೆನ್ನಿ ಹೇಳಿದರು.
ನಗರದ ಕಮಲಾ ನೆಹರು ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ರಾಜಕೀಯ ವರ್ಗದವರು ಈ ದೇಶದಲ್ಲಿ ತಾವು ದೇವಮಾನವರು ಅನ್ನುವ ಮನೋಭಾವದಲ್ಲಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದರು. ಆದರೆ ಜನಪ್ರತಿನಿಧಿಗಳು ತಾವು ಜನರ ಸೇವಕರು ಎಂಬ ಬದಲಿಗೆ ಮಾಲೀಕರಂತೆ ದಬ್ಬಾಳಿಕೆ ನಡೆಸುತ್ತಾರೆ. ಶಾಸಕರ ವಿಐಪಿ ಸಂಸ್ಕೃತಿ ಹೇಗಿದೆ ಎಂದರೆ ತಾವು ಸಾಗುವ ವಾಹನಗಳ ನಡುವೆ ಮನುಷ್ಯ ಅಥವಾ ಬೇರೆ ವಾಹನಗಳು ಕೂಡ ನುಸುಳಕೂಡದು ಎಂಬ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಹೊಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಗಳ ಪೈಪೋಟಿಯ ನಡುವೆಯೂ ಇಂದು ಪತ್ರಿಕಾ ರಂಗ ತನ್ನ ಛಾಪನ್ನು ಉಳಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ದೃಶ್ಯ ಮಾಧ್ಯಮಗಳ ಪೈಪೋಟಿ ಹೆಚ್ಚಾಗಿದೆ. ಇದರ ನಡುವೆಯೂ ಸಹ ಪತ್ರಿಕಾ ರಂಗ ತನ್ನ ಛಾಪನ್ನು ಉಳಿಸಿಕೊಂಡಿದ್ದು, ದೇಶದ ಪ್ರತಿಯೊಬ್ಬ ಓದಗನೂ ಸಹ ಪ್ರತಿನಿತ್ಯ ದಿನಪತ್ರಿಕೆಯನ್ನು ಓದುವುದರ ಮೂಲಕ ಸಮಾಜದಲ್ಲಿ ನಡೆ ಯುವ ವಿದ್ಯಮಾನಗಳನ್ನು ದೃಢಪಡಿ ಸಿಕೊಳ್ಳುತ್ತಾನೆ ಎಂದರು.
ಪ್ರಸ್ತುತ ವಿದ್ಯಮಾನದಲ್ಲಿ ಕೇವಲ ಪತ್ರಿಕಾ ರಂಗ ಹಾಗೂ ಪತ್ರಕರ್ತ ಅಪಾಯ ವನ್ನು ಎದುರಿಸುತ್ತಿಲ್ಲ. ಸಾಮಾನ್ಯ ಪ್ರಜೆಯೂ ಕೂಡಾ ಅಪಾಯದಲ್ಲಿಯೇ ಬದುಕುತ್ತಿ ದ್ದಾನೆ. ಇಂತದೇ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂಬ ಒತ್ತಾಯ ವನ್ನು ಹೇರು ವಂತಹ ಸ್ಥಿತಿ ಬಂದಿದೆ ಎಂದು ಹೇಳಿದರು.
ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಎನ್‌ಇಎಸ್ ಶಿಕ್ಷಣ ಸಂಸ್ಥೆ ಖಜಾಂಚಿ ಎಸ್.ಎಂ. ನಾಗರಾಜ್ ಮಾತನಾಡಿ, ಮಾಧ್ಯಮ ಇಂದು ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಆದರೆ ಮಾಧ್ಯಮ ಗಳಿಗೆ ಬಾಹ್ಯ ಅಥವಾ ಆಂತರಿಕ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ರಾಷ್ಟ್ರೀಯ ಮಂಡಳಿ ಸದಸ್ಯ ಕೆ.ವಿ.ಶಿವಕುಮಾರ್, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಹಿತಕರ್ ಜೈನ್, ಕಾಲೇಜಿನ ಪ್ರಾಂಶುಪಾಲ ಹೆಚ್.ವಿ.ರಾಮಪ್ಪಗೌಡ, ಮೊದಲಾ ದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಮಲಾ ನೆಹರೂ ಕಾಲೇಜಿನ ಉಪನ್ಯಾಸಕ ಪ್ರೊ. ನಾಗಭೂಷಣ್ ಸ್ವಾಗತಿಸಿ, ಪತ್ರಕರ್ತ ಜಗದೀಶ್ ಸಂಪಳ್ಳಿ ವಂದಿಸಿ, ಉಪನ್ಯಾಸಕಿ ಬಿಂದು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಲತಾ ರಂಗ ಸ್ವಾಮಿ, ಸಿ.ವಿ.ರಾಘವೇಂದ್ರರಾವ್, ಛಾಯಾಗ್ರಾಹಕರಾದ ಆರ್.ಸೋಮ ನಾಥ್, ಶಿವಮೊಗ್ಗ ಯೋಗರಾಜ್ ಇವರುಗಳನ್ನು ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular

Recent Comments