ಹರಿಹರ : ರೇಣುಕಾ ಸ್ವಾಮಿ ಎಂಬ ಯುವಕನನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಕೊಲೆಗಡುಕ ದರ್ಶನ್ ಮತ್ತು ತಂಡದವರಿಗೆ ಕಾನೂನಿನಲ್ಲಿ ಉಗ್ರ ಶಿಕ್ಷೆಯಾಗಬೇಕು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಹರಿಹರ ತಾಲೂಕು ಅಧ್ಯಕ್ಷ ವೈ.ರಮೇಶ್ ಮಾನೆ ಒತ್ತಾಯಿಸಿದರು.
ಕರವೇ ವತಿಯಿಂದ ಶುಕ್ರವಾರ ದರ್ಶನ್ ವಿರೋಧವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾರ್ ರವರಿಗೆ ಮನವಿ ಅರ್ಪಿಸಿ ಮಾತನಾಡಿದ ಅವರು,
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಚಿತ್ರನಟ ದರ್ಶನ್ ಹಾಗು ಸ್ನೇಹಿತರು ಭಯಂಕರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರಿರುತ್ತಾರೆ ಅವರೆಲ್ಲರಿಗೂ ಕಾನೂನು ಉಗ್ರವಾದ ಶಿಕ್ಷೆಯನ್ನು ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಆಗ್ರಹಿಸುತ್ತದೆ ಎಂದು ತಿಳಿಸಿದರು.
ರೇಣುಕಾಸ್ವಾಮಿಯು ಹರಿಹರದ ಸಹನಾ ಅವರನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು ಈಗ ಅವರು ತುಂಬು ಗರ್ಭಿಣಿಯಾಗಿದ್ದು ಅವರಿಗೆ ದಿಕ್ಕು ತೋಚದಾಗಿದೆ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಾಗೂ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ನಮ್ಮ ವೇದಿಕೆ ಪ್ರತಿಭಟನೆ ನಡೆಸುವ ಮೂಲಕ ತಹಸಿಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ನಗರ ಘಟಕ ಅಧ್ಯಕ್ಷ ಪ್ರೀತಮ್ ಬಾಬು ಮಾತನಾಡಿ ನಮ್ಮ ಹರಿಹರದ ಅಳಿಯನಾದ ರೇಣುಕಾ ಸ್ವಾಮಿಯನ್ನು ದರ್ಶನ್ ಮತ್ತು ಅವರ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸಂದೇಶ ಕಳಿಸಿದೆ ಎನ್ನುವ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ.ಆತನನ್ನು ಕರೆಯಿಸಿ ಎಚ್ಚರಿಕೆ ನೀಡಿ ಕಳಿಸಬಹುದಾಗಿತ್ತು ಇಲ್ಲವೇ ಕಾನೂನು ಕ್ರಮಕ್ಕೆ ಪೊಲೀಸ್ ಕಂಪ್ಲೇಂಟ್ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಬಹು ದಾಗಿತ್ತು ಯಾವುದನ್ನು ಮಾಡದೆ ಅವರನ್ನು ಕೊಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಇವರೊಬ್ಬ ಹೀರೋ ಆಗಿರದೆ ವಿಲನ್ ಆಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯಿಂದ ನೀಡಿದ ಮನವಿಯನ್ನು ತಹಸೀಲ್ದಾರರ ಪರವಾಗಿ ಗ್ರೇಡ್ 2 ತಹಸಿಲ್ದಾರ್ ಶಶಿಧರಯ್ಯ ನವರು ಸ್ವೀಕರಿಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ಕರವೇ ಕಾರ್ಯಕರ್ತರುಗಳಾದ ಅಲಿಅಕ್ಬರ್, ಸಿದ್ದಣ್ಣ, ಶಂಕರ್, ಗಣೇಶ್ ಮಾನೆ, ವೀರಭದ್ರಯ್ಯ, ಸುರೇಶ್ ಸ್ವಾಮಿ, ಶಂಬಣ್ಣ,ರಮೇಶ್, ಸುರೇಶ ಸೇರಿದಂತೆ ರೇಣುಕಾ ಸ್ವಾಮಿ ಯವರ ಪತ್ನಿ ಸಹನಾ ರವರ ಕುಟುಂಬ ವರ್ಗದ ಸದಸ್ಯರುಗಳು ಭಾಗಿಯಾಗಿದ್ದರು.