ಸುದ್ಧಿಗೋಷ್ಠಿಯಲ್ಲಿ ಸಿಐಟಿಯುನ ಮುಖಂಡ ಕೆ.ಹೆಚ್ ಆನಂದರಾಜು ಹೇಳಿಕೆ
ದಾವಣಗೆರೆ: ಸರಣಿ ಅತ್ಯಾಚಾರಗಳ ಅರೋಪಿ ಪ್ರಜ್ವಲ್ ರೇವಣ್ಣ ನನ್ನು ಬಂಧಿಸಬೇಕು.ಸಂತ್ರಸ್ತ ಹೆಣ್ಣುಮಕ್ಕಳ ಘನತೆ ಕಾಪಾಡಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ
ಒಕ್ಕೂಟದಿಂದ ಇದೇ ಮೇ 30ಕ್ಕೆ “ನಮ್ಮೆಲ್ಲರ ನಡಿಗೆ ಹಾಸನದ ಕಡೆಗೆ” ಹಾಸನ ಚಲೋʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯುನ ಕೆ.ಹೆಚ್ ಆನಂದರಾಜುಹೇಳಿದರು.
ರಾಜ್ಯದಲ್ಲಿರುವ ವಿವಿಧ ಪ್ರಗತಿಪರ, ಎಡಪಂಥಿಯ ಸಂಘಟನೆಗಳು ಒಕ್ಕೂಟ ರಚಿಸಿಕೊಂಡು ಪ್ರಮುಖವಾಗಿ ಪ್ರಜ್ವಲ್ ರೇವಣ್ಣ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆಗಳನ್ನು ಖಂಡಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಅತ್ಯಾಚಾರದ ಆರೋಪಿ ಪ್ರಜ್ವಲ್ ರೇವಣ್ಣ ಸುಮಾರು 2,900 ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ವಿವಿಧ ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ, ಮಾನಭಂಗ, ಅತ್ಯಾಚಾರದ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸಿ, ಪೆನ್ ಡ್ರೈವ್‌ನಿಂದ ಸಾಮಾಜಿಕ ಜಾಲತಾಣದಿಂದ ಟ್ರೋಲ್ ಮಾಡಲಾಗಿದೆ. ವಿವಿಧ ರಾಜಕೀಯ ಪಕ್ಷಗಳು, ಹಾಗೂ ರಾಜಕಾರಣಿಗಳು ಪೆನ್ ಡ್ರೈವ್ ವಿತರಣೆಯಾದ ಬಗ್ಗೆ ಹೇಳಿಕೆ ಪ್ರತಿ ಹೇಳಿಕೆ ಕೊಡುತ್ತಿದ್ದಾರೆ ಹೊರೆತು, ಇಡೀ ದೇಶವೇ ತಲೆತಗ್ಗಿಸುವಂತಹ ಕುಕೃತ್ಯವೆಸಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ಪರಾರಿಯಾದ ಆರೋಪಿಯನ್ನು ಬಂಧಿಸಿ ರಾಜ್ಯಕ್ಕೆ ಕರೆತಂದು ಶಿಕ್ಷೆ ವಿಧಿಸುವ ಬಗ್ಗೆ ಮಾತಾಡುತ್ತಿಲ್ಲ ಒಂದು ತಿಂಗಳಾದರೂ ಆತನನ್ನು ಬಂಧಿಸಿ ರಾಜ್ಯಕ್ಕೆ ಕರೆತರಲಾದ ರಣಹೇಡಿ ಸರ್ಕಾರಗಳಿವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಾಗ ದೇಶದಲ್ಲಿ ವಿಚಿತ್ರ ವಿದ್ಯಮಾನ ಕಾಣುತ್ತಿದೆ. ಅತ್ಯಾಚಾರಿಗಳು ಬಡವರು ಅಥವಾ ರೈತಾಪಿ ಹಿನ್ನಲೆಯವರಾಗಿದ್ದರೆ ಪೊಲೀಸರು ಅಂತವರನ್ನು ಬಂಧಿಸಿ ಜೈಲಿಗೆ ಹಟ್ಟುವ ಕನಿಷ್ಠ ಕೆಲಸವನ್ನು ಮಾಡುತ್ತಾರೆ. ಆದರೆ, ಬಲಾಡ್ಯ ಅಥವಾ ಶ್ರೀಮಂತ ಕುಟುಂಬಗಳ ಹಿನ್ನಲೆಯವರು ಸರಣಿ ಕೊಲೆಗಳನ್ನು ಮಾಡಿ ಶಿಕ್ಷೆ ಇರಲಿ ಬಂಧನ ಕೂಡ ಆಗದಿರುವ ಎಷ್ಟೋ ಪ್ರಕರಣಗಳು ಇವೆ. ಇನ್ನ ಪ್ರಜ್ವಲ್ ರೇವಣ್ಣ ನಂತಹ ರಾಜಕೀಯ ಪ್ರಭಾವಿ ಕುಟುಂಬದ ವ್ಯಕ್ತಿಗಳನ್ನು ಪೊಲೀಸರು ಮುಟ್ಟಲು ಹೆದರುತ್ತಿದ್ದಾರೆ. ಆಳುವ ಕಾಂಗ್ರೆಸ್ ಸರ್ಕಾರ ನಾಮ ಮಾತ್ರ ಹೇಳಿಕೆ ನೀಡಿ ಎಸ್ ಐಟಿ ರಚಿಸಿ ಸುಮ್ಮನೆ ಕೂತಿದೆ. ಇನ್ನ ಬಿಜೆಪಿ -ಜೆಡಿಎಸ್ ಮೈತ್ರಿ ಪಕ್ಷಗಳು ಆರೋಪಿಯ ಅಪರಾಧಗಳನ್ನು ನಿರ್ಲಜ್ಜದಿಂದ ಬಹಿರಂಗವಾಗಿ ರಕ್ಷಿಸುವ ಇಲ್ಲವೇ ಉತ್ತೇಜಿಸುವ ಸಂಗತಿ ಕಾಣುತ್ತಿದೆ. ಅಪರಾಧ ಎಸಗಿದ ಆರೋಪಿಗಳಿಗೆ ಶಿಕ್ಷೆಯಾಗದೇ ತಪ್ಪಿಕೊಂಡು ತಿರುಗುತ್ತಿರುವುದರಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿಯೂ ಪಾರಾಗಬಹುದು ಎಂಬ ವಿಚಾರ ಜನರಲ್ಲಿದೆ. ಇದು ಅಪಾಯಕಾರಿ ಮಾತ್ರವಲ್ಲ ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.
ಮೇ 29ರ ರಾತ್ರಿ ದಾವಣಗೆರೆಯಿಂದ ಹಾಸನಕ್ಕೆ ಹೋಗಿ ಮೇ.30 ರಂದು ಬೆಳಿಗ್ಗೆ 10.30ಕ್ಕೆ ಅಲ್ಲಿನ ಮಹಾರಾಜ ಪಾರ್ಕ್ ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆದು ಅಲ್ಲೇ ಬೃಹತ್ ಬಹಿರಂಗ ಸಭೆ ನಡೆಲಿದೆ. ಸಭೆಯಲ್ಲಿ ಸಾಹಿತಿ ಬಿ.ಟಿ. ಲಲಿತನಾಯ್ಕ, ವಿಜಯಮ್ಮ, ರೂಪ ಹಾಸನ್, ಕೆ.ಎಸ್.ವಿಮಲ ಸೇರಿ ಇತರ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಷಣ ಮಾಡಲಿದ್ದಾರೆ. ಸುಮಾರು 10 ಸಾವಿರಕ್ಕು ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು. ಜಿಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಧು ತೊಗಲೇರಿ, ಮಮತ, ಪವಿತ್ರ, ಸತೀಶ್ ಅರವಿಂದ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ರಾಜ್ಯ ಸರ್ಕಾರ ರಾಜಕೀಯ ಕಬೂಲಿಗೆ, ಲಾಭಿಗೆ ಅವಕಾಶ ನೀಡದಂತೆ ಪ್ರಕರಣದ ಸೂಕ್ತ ತನಿಖೆ ನಡೆಸಿ, ತ್ವರಿತಗತಿ ವಿಚಾರಣೆ ನಡೆಸಬೇಕು. ಬದುಕು ಛಿದ್ರಗೊಂಡಿರುವ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮಹಿಳಾ ಆಯೋಗ ಮತ್ತು ಸರ್ಕಾರ ವಿಶ್ವಾಸಪೂರ್ಣ ಹೆಜ್ಜೆಗಳನ್ನು ಇಡಬೇಕು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರ ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಿ, ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತವಾಗಬೇಕು
ಎಂದು ಸರ್ಕಾರಗಳಿಗೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲು ಎಂದು ಈ ಪ್ರತಿಭಟನೆ ಮೂಲಕ ನಿರ್ಧರಿಸಿದ್ದೇವೆ.
– ಮಧು ತೋಗಲೇರಿ, ಜಿಲ್ಲಾ ಪ್ರಗತಿಸಂಘಟನೆಗಳ ಒಕ್ಕೂಟದ ಮುಖಂಡ