Monday, July 22, 2024
Google search engine
Homeಇ-ಪತ್ರಿಕೆಪರಿಸರ ನಾಶದ ಜೊತೆ ಮನುಷ್ಯನ ಅವನತಿ: ಅಂಕಣಕಾರ ಬಿ. ಚಂದ್ರೇಗೌಡ

ಪರಿಸರ ನಾಶದ ಜೊತೆ ಮನುಷ್ಯನ ಅವನತಿ: ಅಂಕಣಕಾರ ಬಿ. ಚಂದ್ರೇಗೌಡ

ಭದ್ರಾವತಿ: ಮನುಷ್ಯ ಪರಿಸರ ನಾಶಮಾಡುತ್ತಿದ್ದಾನೆ, ಹಿಂದೂ ಮಾಡಿದ್ದ, ಮುಂದೆಯೂ ಮಾಡುತ್ತಾನೆ. ಅರವತ್ತು ಸಾವಿರ ವರ್ಷಗಳಲ್ಲಿ ವಿಕಾಸಗೊಂಡು ಬದುಕು ಕಟ್ಟಿದ್ದಾನೆ. ಕೈಗಾರಿಕಾ ಕ್ರಾಂತಿಯಿಂದ ಮನುಷ್ಯ ಯಂತ್ರಗಳ ಮೇಲೆ ಅವಲಂಬಿಸಿದ. ಕೇವಲ ಎರಡು ನೂರು ವರ್ಷಗಳ ವ್ಯಾಪ್ತಿಯಲ್ಲಿ ಗುಡ್ಡ, ಬೆಟ್ಟ, ಹೆದ್ದಾರಿ, ಕಾಡು, ನದಿ, ಆಣೆಕಟ್ಟೆ ಎಲ್ಲವನ್ನೂ ನಿರ್ಮಿಸಿದ ಪರಿಣಾಮ ಲಕ್ಷಾಂತರ ಮರಗಳ ಮಾರಣ ಹೋಮ ಮಾಡಿದ್ದರ ಪರಿಣಾಮ ಪರಿಸರ ನಾಶವಾಯಿತು. ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳು ಅಪಾಯದ ಅಂಚಿನಲ್ಲಿವೆ ಎಂದು ಸಾಹಿತಿಗಳು, ಅಂಕಣಕಾರರಾದ ಬಿ. ಚಂದ್ರೇಗೌಡರು ಹೇಳಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ಭದ್ರಾವತಿ ಬೊಮ್ಮನಕಟ್ಟೆಯಲ್ಲಿರುವ ಸರ್.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜು ಸಹಯೋಗದಲ್ಲಿ ಗೋಣಿಬೀಡು ಶ್ರೀ ರಾಮಮಂದಿರ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಸಂಜೆ ವ್ಯವಸ್ಥೆ ಮಾಡಿದ್ದ ದತ್ತಿ ನಿಧಿ ಕಾರ್ಯಕ್ರಮ ದಲ್ಲಿ ಪರಿಸರದ ಮೇಲಿನ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು.

ಪರಿಸರದಲ್ಲಿರುವ ಮರ ಕಡಿದರೆ ನೆರಳು ಮಾತ್ರ ಮಾಯವಾಗುವುದಿಲ್ಲ. ಆ ಮರದಲ್ಲಿ ಹಕ್ಕಿ, ಪಕ್ಷಿಗಳು, ಕೀಟಗಳು ಎಲ್ಲವೂ ಅವಲಂಬಿಸಿರುತ್ತವೆ. ಅವೂ ನಾಶ ವಾಗುತ್ತವೆ. ಪರಿಸರವಿಲ್ಲದೆ ವಾತಾವರಣ ಬಿಸಿಯಾಗುತ್ತಿದೆ. ಯಾವ ದೇಶವೂ ನಾವು ಬದುಕಲು ಪರಿಸರ ಬೇಕು ಎಂದು ಯೋಚಿಸುತ್ತಿಲ್ಲ. ನಿಸರ್ಗದ ಮೇಲೆ ಒತ್ತಡ ಹೆಚ್ಚಿ ನಾಶದತ್ತ ಸಾಗುತ್ತಿರುವುದು ಗಮನಿಸಬೇಕು. ನೂರನಲವತ್ತು ಕೋಟಿ ಜನಸಂಖ್ಯೆ ಹೆಚ್ಚಾಯಿತು. ಇಲ್ಲಿ ನಾವು ಯಾರನ್ನೂ ಸುಖವಾಗಿಡಲು ಆಗುತ್ತಿಲ್ಲ. ಹೈಟೆಕ್ ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಮನುಷ್ಯನ ಭವಿಷ್ಯ ಆತಂಕದಲ್ಲಿದೆ ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ದತ್ತಿ ದಾನಿ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಕೆ. ಸುರೇಶ್ ಕುಮಾರ್ ಅವರು ತಮ್ಮ ತಂದೆ ಎಂ. ಆರ್. ಕೃಷ್ಣಶೆಟ್ಟಿ ಅವರ ಸ್ಮರಣಾರ್ಥ ಸ್ಥಾಪಿಸಿದ ದತ್ತಿ. ಅವರ ಆಶಯ ಪರಿಸರದ ಮೇಲಾಗುತ್ತಿರುವ ಆಕ್ರಮಣ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಈ ಭೂಮಿಯಲ್ಲಿರುವ ಎಲ್ಲಾ ಚರಾ ಚರ ಜೀವಿಗಳಿಗೂ ಬದುಕಲು ಹಕ್ಕಿದೆ ಎನ್ನುವುದನ್ನು ಮರೆಯಬಾರದು. ಕಾಡಿದ್ದರೆ ಮಳೆ. ಕಾಡು ಕಡಿದಿದ್ದರ ಪರಿಣಾಮ ಮಳೆ ಬಾರದ ಸ್ಥಿತಿಯಾಗಿದೆ ಎಂದು ವಿವರಿಸಿದರು.

‌ಸಾಹಿತಿಗಳು, ಉಪನ್ಯಾಸಕರಾದ ಡಾ. ಎಸ್. ಎಂ. ಮುತ್ತಯ್ಯ, ರಂಗಕರ್ಮಿ ಡಾ. ಜಿ.ಆರ್. ಲವ, ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಡಾ. ಅರಸಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ ಉಪಸ್ಥಿತರಿದ್ದರು.

ಕುಮಾರಿ ನಿವೇದಿತಾ ಸ್ವಾಗತಿಸಿದರು. ನಿರೂಪಣೆ ಕು. ಸಿಂಧು, ಕು. ಗಾನಶ್ರೀ ವಂದಿಸಿದರು.

RELATED ARTICLES
- Advertisment -
Google search engine

Most Popular

Recent Comments