ಆ.೧೩: ಶಾಂತವೇರಿಯಿಂದ ಪಾದಯಾತ್ರೆ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್‌ಎಂಎಂ

ಶಿವಮೊಗ್ಗ: ಶಾಂತವೇರಿ ಗೋಪಾಲಗೌಡರ ಹೋರಾಟದ ನೆನಪಿಗಾಗಿ ಬಗರ್ ಹುಕುಂ ರೈತರ ಪರವಾಗಿ ಹಾಗೂ ಕಸ್ತೂರಿ ರಂಗನ್ ವರದಿಯನ್ನು ವಿರೋಸಿ ತೀರ್ಥ ಹಳ್ಳಿ ತಾಲೂಕು ಜೆಡಿಎಸ್ ವತಿ ಯಿಂದ ಆ.೧೩ರಂದು ಶಾಂತವೇರಿ ಯಿಂದ ತೀರ್ಥಹಳ್ಳಿ ತಾಲೂಕು ಕಛೇರಿ ವರೆಗೆ ಪಾದಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಮಲೆನಾಡಿ ತೀರ್ಥಹಳ್ಳಿ ಸೇರಿದಂತೆ ಹಲವು ತಾಲೂಕುಗಳಿಗೆ ತೂಗುಗತ್ತಿ ಯಾಗಿದೆ. ರೈತ ಹಿಂದಿನಿಂದಲೂ ಮಾಡುತ್ತಿರುವ ಜಮೀನನ್ನು ಉಳುಮೆ ಮಾಡುವುದಿರಲಿ ಅರಣ್ಯ ಪ್ರವೇಶಿಸುವುದೇ ಕಷ್ಟಕರವಾಗಿದೆ. ಇಂತಹ ವರದಿ ಜಾರಿ ಮಾಡದೆ ರೈತರಿಗೆ ಅನುಕೂಲವಾಗುವಂತೆ ಅಗತ್ಯಮಾರ್ಪಾಡು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ತೀರ್ಥಹಳ್ಳಿ ಭಾಗದ ಬಗರ್ ಹುಕುಂ ರೈತರು ಅನೇಕ ವರ್ಷ ಗಳಿಂದ ಅಡಿಕೆ ತೋಟಗಳನ್ನು ಮಾಡಿದ್ದು, ಅಂತವರ ತೋಟ ಗಳಿಗೂ ಈ ವರದಿ ಜಾರಿಯಿಂದ ತೊಂದರೆ ಆಗುತ್ತಿದೆ.
ಈ ವರದಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಕೆಲ ಮಾರ್ಪಾಡು ಮಾಡಲು ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ಆ.೨೫ರ ವರೆಗೆ ಮಾತ್ರ ಅವಕಾಶವಿದೆ. ಕೇರಳದಲ್ಲಿ ಕೆಲ ಮಾರ್ಪಾಡು ಮಾಡಿಕೊಂಡು ವರದಿ ಜಾರಿಗೆ ಒಪ್ಪಲಾಗಿದೆ. ಅದರಂತೆ ಕರ್ನಾಟಕ ದಲ್ಲೂ ಕೆಲ ಬದಲಾವಣೆ ಮಾಡ ಬೇಕು, ಬಗರ್ ಹುಕುಂ ರೈತರನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಇಡೀ ರಾಜ್ಯಕ್ಕೆ ಸಂಬಂಸಿದ ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ಕೇಂದ್ರಕ್ಕೆ ನಿಯೋಗ ಹೋಗುವ ಅಗತ್ಯವಿದೆ. ಇಲ್ಲವಾದಲ್ಲಿ ಕಸ್ತೂರಿ ರಂಗನ್ ವರದಿ ಯತಾವತ್ ಜಾರಿಯಾ ದಲ್ಲಿ ಮಲೆನಾಡಿನ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.
ಪಾದಯಾತ್ರೆ: ಆ.೧೩ರ ಬೆಳಿಗ್ಗೆ ೯ ಗಂಟೆಗೆ ಶಾಂತವೇರಿಯಿಂದ ಪಾದಯಾತ್ರೆ ಹೊರಟು ಸುಮಾರು ೧೨.೩೦ಕ್ಕೆ ತೀರ್ಥಹಳ್ಳಿ ತಾಲೂಕು ಕಛೇರಿಗೆ ಆಗಮಿಸಿ ಜಿಲ್ಲಾ ಸಚಿವ ಡಿ.ಸಿ. ತಮ್ಮಣ್ಣ ಹಾಗೂ ತಹ ಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್‌ನ ರಾಮಕೃಷ್ಣ, ತ್ಯಾಗರಾಜ್, ದುಗ್ಗಪ್ಪಗೌಡ, ಸುಂದರೇಶ್, ಕೆ.ಎಲ್. ಜಗದೀಶ್ ಮತ್ತಿತರರಿದ್ದರು.