Sunday, September 8, 2024
Google search engine
Homeಇ-ಪತ್ರಿಕೆಕೈಗಾರಿಕಾ ನಗರದಲ್ಲಿ ಸಾಂಸ್ಕೃತಿಕ ಸದಾಭಿರುಚಿ ಮೂಡಿಸಿದ ಎಂ.ಜಿ.ಈಶ್ವರಪ್ಪ: ಕುಂ.ವೀರಭದ್ರಪ್ಪ ಅಭಿಮತ

ಕೈಗಾರಿಕಾ ನಗರದಲ್ಲಿ ಸಾಂಸ್ಕೃತಿಕ ಸದಾಭಿರುಚಿ ಮೂಡಿಸಿದ ಎಂ.ಜಿ.ಈಶ್ವರಪ್ಪ: ಕುಂ.ವೀರಭದ್ರಪ್ಪ ಅಭಿಮತ

ದಾವಣಗೆರೆ : ಒಂದು ಕಾಲಕ್ಕೆ ದಾವಣಗೆರೆ ಕೈಗಾರಿಕಾ ನಗರವಾಗಿತ್ತು. ಆ ಕಾಲದಲ್ಲಿ ಕಲೆ ಸಾಹಿತ್ಯದ ಸಂಸ್ಕøತಿಯ ಸದಾಭಿರುಚಿ ಮೂಡಿಸಿದ ಕೀರ್ತಿ ಎಂ.ಜಿ.ಈಶ್ವರಪ್ಪರಿಗೆ ಸಲ್ಲುತ್ತದೆ. ಅಂತಹ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡು ಜಿಲ್ಲೆ ಬಡವಾಗಿದೆ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ವಿμÁಧ ವ್ಯಕ್ತಪಡಿಸಿದರು.

ಪ್ರತಿಮಾ ಸಭಾದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಡಾ. ಎಂ.ಜಿ.ಈಶ್ವರಪ್ಪ ಅವರಿಗೆ ಆಯೋಜಿಸಿದ್ದ ನುಡಿನಮನದಲ್ಲಿ ಮಾತನಾಡಿದ ಅವರು, ಎಂಜಿಈ ಅವರು ಮೂಲತಃ ಈ ಊರಿನವರಲ್ಲ. ಶಿವಮೊಗ್ಗ ಜಿಲ್ಲೆ ಹಾಡೇನಹಳ್ಳಿಯವರು. ಸುಮಾರು 4 ದಶಕಗಳ ಕಾಲ ಇಲ್ಲೇ ನೆಲೆಗೊಂಡಿದ್ದರು. ಹಳ್ಳ, ನದಿಗಳು ಎಲ್ಲೋ ಹುಟ್ಟಿ ಮುಂದೆಲ್ಲೋ ಹರಿದು ಸಸ್ಯಶ್ಯಾಮಲೆಯನ್ನು ಶ್ರೀಮಂತಗೊಳಿಸಿದಂತೆ ಈ ನೆಲದ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ ಮುಂತಾದ ಸಾಂಸ್ಕøತಿಕ ಸಂಪತ್ತನ್ನು ಹೆಚ್ಚಿಸಿದವರು ಈಶ್ವರಪ್ಪ ಎಂದು ಸ್ಮರಿಸಿದರು.

ʻಸಾಯಬೇಕಾದವರು ಬದುಕಿದ್ದಾರೆ, ಬದುಕಬೇಕಾಗಿದ್ದವರು ಸಾಯುತ್ತಿದ್ದಾರೆʼ ಎಂದು ಮಾರ್ಮಿಕ ಮಾತುಗಳನ್ನಾಡತ್ತಾ, ಎಂಜಿಈ ಅವರು ಅಚಾನಕ್ ಆಗಿ ನಿರ್ಗಮಿಸಿದ್ದು, ಅತೀವ ಬೇಸರ ತಂದಿದೆ. ಆಪ್ತರ ಮರಣದ ಸುದ್ದಿ ಅರಗಿಸಿ ಕೊಳ್ಳುವುದು ಕಷ್ಟ. ಎಂಜಿಈ ಅವರ ಸ್ಥಾನ ತುಂಬುವುದು ಕಷ್ಟ. ಸಮಾದಿಗಳೇ ನಿಜವಾದ ಪ್ರೇಕ್ಷಣೀಯ ಸ್ಥಳಗಳು. ಸಾಂಸ್ಕøತಿಕ ನಗರಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಮೂಲಕ ಅವರ ಆಶಯ ಈಡೇರಿಸಬೇಕು ಎಂದು ಸಲಹೆ ಇತ್ತರು.

ನಾಟಕಕಾರ, ಸಂಸ್ಕøತಿ ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಾಂಸ್ಕøತಿ ಕ್ರಾಂತಿಯೇ ನಡೆದಿದೆ. ಕೇವಲ ಕಾಟನ್ ಮಿಲ್, ಶೈಕ್ಷಣೀಕ ಕ್ಷೇತ್ರ ಮಾತ್ರವಲ್ಲದೇ ವೃತ್ತಿ ರಂಗಭೂಮಿಗೂ ಹೆಸರುವಾಸಿಯಾಗಿದೆ. ನಾಡಿಗೆ ಹಲವಾರು ಬರಹಗಾರರನ್ನು ನೀಡಿದ ಕೀರ್ತಿ ಜಿಲ್ಲೆಗೆ ಸಲ್ಲುತ್ತದೆ. ಇಲ್ಲಿನ ಸಾಂಸ್ಕøತಿ ವಲಯವನ್ನು ಬೆಳೆಸುವಲ್ಲಿ ಪ್ರತಿಮಾ ಸಭಾ ಮತ್ತು ಎಂಜಿಈಯವರ ಕೊಡುಗೆ ಬಹಳಷ್ಟಿದೆ ಎಂದರು.

ಸಂಸ್ಥಾಪಕ ನಿರ್ದೇಶಕ ಜಿ.ಎನ್.ಸತ್ಯಮೂರ್ತಿ, ಪ್ರತಿಮಾ ಸಭಾದ ಅಧ್ಯಕ್ಷ ಎಸ್.ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಬಾಮ ಬಸವರಾಜಯ್ಯ ವೇದಿಕೆಯಲ್ಲಿ ಮಾತನಾಡಿದರು. ಎಂ.ಜಿ.ಈಶ್ವರಪ್ಪ ಅವರ ಪುತ್ರ, ಪುತ್ರಿ ಹಾಗೂ ಕುಟುಂಬವರ್ಗದವರು ಬಂಧು ಮಿತ್ರರರು, ಒಡನಾಡಿಗಳು, ಅಭಿಮಾನಿಗಳು ಹಾಗೂ ದಾವಣಗೆರೆಯ ವಿವಿಧ ಸಂಘಸಂಸ್ಥೆಗಳ ಮುಖಂಡರು ನುಡಿನಮನದಲ್ಲಿ ಭಾಗವಹಿಸಿದ್ದರು. ಗಾನಲಹರಿ ಸಂಗೀತ ವಿದ್ಯಾಲಯದ ಕಲಾವಿದರು ರಂಗಗೀತೆಗಳನ್ನು ಹಾಡಿದರು. ಯುಗಧರ್ಮ ರಾಮಣ್ಣ ಲಾವಣಿ, ಪರಮೇಶ್ವರ ಕತ್ತಿಗೆ ತತ್ವಪದ, ಪ್ರಕಾಶ್ ವಚನಗೀತೆಗಳನ್ನು ಹಾಡಿದರು.

…………………………
ಎಂ.ಜಿ.ಈಶ್ವರಪ್ಪ ಅವರು ಕೇವಲ ದಾವಣಗೆರೆಗೆ ಸಿಮೀತವಾಗದೇ ನಾಡಿನ ಆಸ್ತಿಯಾಗಿದ್ದರು, ಅವರ ಆಗಲಿಕೆಯಿಂದ ಸಾಂಸ್ಕøತಿಕ ಕ್ಷೇತ್ರಕ್ಕೆ ಶೂನ್ಯ ಆವರಿಸಿದಂತೆ ಆಗಿದೆ. ಅವರ ಸ್ಥಾನ ತುಂಬುವುದು ಕಷ್ಟ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮತ್ತು ಪ್ರತಿ ವರ್ಷ ನಾಟಕೋತ್ಸವ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ.
– ಬಿ.ಎನ್.ಮಲ್ಲೇಶ್, ಪ್ರತಿಮಾ ಸಭಾದ ಕೋಶಾಧ್ಯಕ್ಷ

RELATED ARTICLES
- Advertisment -
Google search engine

Most Popular

Recent Comments