Sunday, October 13, 2024
Google search engine
Homeಅಂಕಣಗಳುಲೇಖನಗಳುಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕಾರ್ಯಾದೇಶ ನೀಡದ ಆಯುಕ್ತರ ವಿರುದ್ಧ ಆಕ್ರೋಶ

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕಾರ್ಯಾದೇಶ ನೀಡದ ಆಯುಕ್ತರ ವಿರುದ್ಧ ಆಕ್ರೋಶ

ಶಿವಮೊಗ್ಗ : ೯೪ ಲಕ್ಷರೂ. ಮೊತ್ತದ ಎಲ್‌ಇಡಿ ಲೈಟ್ ಟೆಂಡ ರ್‌ಗೆ ಕಾರ್ಯಾದೇಶವನ್ನು ಪಾಲಿಕೆ ಆಯುಕ್ತರು ನೀಡದಿರುವ ಬಗ್ಗೆ ಇಂದು ಜರುಗಿದ ಪಾಲಿಕೆ ಸಭೆಯಲ್ಲಿ ಕೆಲವು ಸದಸ್ಯರಿಂದ ಭಾರಿ ಆಕ್ರೋಶ ವ್ಯಕ್ತವಾಯಿತು.
ಮೇಯರ್ ಏಳುಮಲೈ ಅಧ್ಯಕ್ಷತೆ ಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಈಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಎಚ್.ಸಿ. ಯೋಗೇಶ್ ಮತ್ತು ಎಸ್. ರಾಜಶೇಖರ್ ಈ ಕಾರ್ಯಾದೇಶ ನೀಡದಿರುವ ಬಗ್ಗೆ ಆಯುಕ್ತರನ್ನು ಒಂದೇ ಸಮನೆ ತರಾಟೆಗೆ ತೆಗೆದು ಕೊಂಡರು. ಇದರಿಂದ ಸಭೆಯಲ್ಲಿ ಭಾರಿ ಗೊಂದಲದ ವಾತಾವರಣ ಮತ್ತು ಕೆಲವೊಮ್ಮೆ ತೀವ್ರ ವಾಗ್ವಾದ ಸಹಾ ನಡೆಯಿತು.
ಬೀದಿ ದೀಪ ನಿರ್ವಹಣೆಯಲ್ಲಿ ಪಾಲಿಕೆ ಸಂಪೂರ್ಣವಾಗಿ ವಿಫಲವಾ ಗಿರುವ ಬಗ್ಗೆ ಮೇಯರ್ ಹಾಗೂ ಆಯುಕ್ತರನ್ನು ತರಾಟೆಗೆ ತೆಗೆದು ಕೊಂಡರು. ಸರಗಳ್ಳತನ ಮತ್ತು ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಆಯುಕ್ತರು ಮತ್ತು ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳ ವಿರುದ್ಧ ಇನ್ನು ಮುಂದೇ ಕೇಸು ದಾಖಲಿಸುವ ಎಚ್ಚರಿಕೆ ಯೋಗೀಶ್ ನೀಡಿದರು.
ಎಂಆರ್‌ಎಸ್‌ನಿಂದ ಮಲವ ಗೊಪ್ಪದವರೆಗೆ ಸುಮಾರು ೮೩ ಅಪ ಘಾತಗಳು ಈವರೆಗೆ ಸಂಭವಿಸಿದ್ದು, ೨೪ ಜನರು ಪ್ರಾಣಕಳೆದು ಕೊಂಡಿ ದ್ದಾರೆ. ನಗರದ ಸಮಸ್ಯೆ ಆಯುಕ್ತರಿಗೆ ಆರ್ಥವಾಗುತ್ತಿಲ್ಲ. ಟೆಂಡರ್ ಆದರೂ ಸಹಾ ಕಾರ್ಯಾದೇಶ ನೀಡದೆ ವಿನಾಕಾರಣ ತಡೆಹಿಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಆಗುತ್ತಿ ರುವ ತೊಂದರೆ ಅವರಿಗೆ ಲೆಕ್ಕಕ್ಕಿಲ್ಲ. ಎಲ್‌ಇಡಿ ಲೈಟ್‌ಗಳನ್ನು ಹಾಕಲು ಕೂಡಲೇ ಸೂಚಿಸಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿ ಆಯುಕ್ತ ಮುಲ್ಲೈಮುಹಿಲನ್ ಈ ಟೆಂಡರ್‌ನಲ್ಲಿ ಎಸ್‌ಆರ್ ದರಕ್ಕಿಂತ ಮಾರ್ಕೆಟ್ ದರ ಕಡಿಮೆ ಇದೆ. ಈ ದರವನ್ನು ಪರಿಶೀಲನೆ ಮಾಡಲಾಗಿದೆ. ಮಾರ್ಕೆಟ್ ದರ ಕಡಿಮೆ ಇರುವುದರಿಂದ ಕಾರ್ಯಾದೇಶ ನೀಡಿದರೆ ಪಾಲಿಕೆಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಆದ್ದರಿಂದ ಕಾರ್ಯಾದೇಶ ನೀಡಿಲ್ಲ ಎಂದು ಸಮರ್ಥಿಸಿದರು.
ಇದನ್ನು ವಿರೋಧಿಸಿದ ಇನ್ನೊಬ್ಬ ಸದಸ್ಯ ರಾಜಶೇಖರ್ ಈ ಹಿಂದೆ ಕೆಲವು ಇದೇ ರೀತಿಯ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದೀರಿ. ಆದರೆ ಈ ಕಾಮಗಾರಿಗೆ ಮಾತ್ರ ಕಾರ್ಯಾದೇಶ ಏಕೆ ನೀಡುತ್ತಿಲ್ಲ ಎಂದು ಮರು ಪ್ರಶ್ನಿಸಿದರು.
ಸರ್ಕಾರದ ನಿಯಮದ ಪ್ರಕಾರ ಕಾರ್ಯಾದೇಶ ನೀಡಲು ಸಾಧ್ಯವಿಲ್ಲ ಎಂದು ಮತ್ತೆ ಆಯುಕ್ತರು ಸ್ಪಷ್ಟಪಡಿಸಿದರು. ತೀವ್ರ ವಾಗ್ವಾದ ನಡೆಯಿತು. ಮಾತು ಮುಂದುವರಿಸಿದ ಆಯುಕ್ತರು ಎಲ್‌ಇಡಿ ದೀಪ ಹಾಕಿ ಅದರ ನಿರ್ವಹಣೆಯನ್ನು ೧೦ ವರ್ಷ ನಿರ್ವಹಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಇದರಲ್ಲಿ ಬ್ರಾಂಡ್ ಮತ್ತು ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಗರದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಿದ್ದರೂ ಸಹಾ ಒಂದೇ ರೀತಿಯ ವಿದ್ಯುತ್ ಬೇಕಾಗುವುದರಿಂದ ಅವು ಸರಿಯಾಗಿ ಉರಿಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಉಪಮೇಯರ್ ರೂಪಾಲಕ್ಷ್ಮಣ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments