ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸಹಕಾರಿ

ಶಿವಮೊಗ್ಗ : ಯುವಕರಲ್ಲಿ ಪ್ರತಿಭೆಯನ್ನು ಹೊರತೆಗೆಯಲು ಯುವಜನೋತ್ಸವಗಳು ಸಹಕಾರಿ ಎಂದು ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಹೇಳಿದರು.
ಇಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ವತಿಯಿಂದ ಆಯೋಜಿ ಸಲಾಗಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಮಾತನಾ ಡಿದ ಅವರು, ಇಂತಹ ಉತ್ಸವಗಳಲ್ಲಿ ನಮ್ಮ ನಾಡು, ನುಡಿಯ ಸಂಸ್ಕೃತಿಗಳು ಅನಾವರಣಗೊಳ್ಳುತ್ತವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಿರುವಂತಹ ಸ್ಪರ್ಧಿಗಳು ಈ ಮೇಳದಲ್ಲಿ ತಮ್ಮಲ್ಲಿರುವ ಪ್ರತಿಭೆ ಯನ್ನು ಪ್ರದರ್ಶಿಸಲಿದ್ದಾರೆ. ಇದು ಒಂದು ಉತ್ತಮ ವೇದಿಕೆ ಯಾಗಿದೆ ಎಂದ ಅವರು, ಎಲ್ಲಾ ಯುವಕ, ಯುವತಿಯರಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತೆಗೆ ಯಲು ವೇದಿಕೆಯ ಅಗತ್ಯವಿರುತ್ತದೆ. ಇಂತಹ ವೇದಿಕೆಯನ್ನು ಪ್ರತಿಯೊ ಬ್ಬರೂ ಸದ್ಬಳಕೆ ಮಾಡಿ ಕೊಳ್ಳಬೇಕೆಂದರು.
ನಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿಯ ನಡುವೆ ಅನೇಕ ಕಲೆಗಳು ಇವೆ. ಅವುಗಳನ್ನು ಹೊರಹಾಕ ಬೇಕಾದರೆ ಇಂತಹ ಕಾರ್ಯಕ್ರಮ ಗಳ ಅವಶ್ಯಕತೆ ಇರುತ್ತದೆ. ನಾಡು, ನುಡಿಯ ಸಂಸ್ಕೃತಿ, ಗ್ರಾಮೀಣ ಭಾಗದ ಕಲೆಗಳನ್ನು ಪ್ರದರ್ಶಿಸ ಬೇಕಾದರೆ ಯುವಜನೋತ್ಸವ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್ ಮಾತನಾಡಿ, ಯುವಜನೋತ್ಸವ ಉತ್ತಮ ಕಾರ್ಯಕ್ರಮವಾಗಿದ್ದು, ಇದನ್ನು ಯುವಕ, ಯುವತಿಯರು ಬಳಸಿಕೊ ಳ್ಳಬೇಕು. ಆ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾ ಯಕ ನಿರ್ದೇಶಕ ರಮೇಶ್ ಸೇರಿ ದಂತೆ ಹಲವರು ಉಪಸ್ಥಿತರಿದ್ದರು.