ನಿರಂತರ ಯೋಗಭ್ಯಾಸದಿಂದ ಆತ್ಮವಿಶ್ವಾಸ ವೃದ್ಧಿ: ಜಿಲ್ಲಾಧಿಕಾರಿ

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಒತ್ತಡಯುಕ್ತ ಜೀವನ ವನ್ನು ಪ್ರತಿಯೊಬ್ಬರೂ ನಡೆಸುವಂತಾಗಿದೆ. ನಿರಂತರ ಯೋಗಾಭ್ಯಾಸದಿಂದ ಆತ್ಮವಿಶ್ವಾಸ ವೃದ್ಧಿ ಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಆಯುಷ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗದ ಸರ್ವ ಯೋಗ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ಧ ೩ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಯೋಗ ಎಂದರೆ ಕೇವಲ ಆಸನ, ಪ್ರಾಣಯಾಮ ಅಷ್ಟೇ ಅಲ್ಲ. ಯೋಗದಿಂದ ಮನಸ್ಸು ಹಾಗೂ ದೇಹವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಿದೆ ಎಂದ ಅವರು, ಯೋಗ ವಿಶ್ವಕ್ಕೆ ಭಾರತ ನೀಡಿರುವ ವಿಶಿಷ್ಟ ಕೊಡುಗೆಯಾಗಿದೆ. ಅನೇಕ ದೇಶಗಳು ಇಂದು ಯೋಗವನ್ನು ಅವಡಿಸಿಕೊಂಡಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಹರ್ಷ ಪುತ್ರಾಯ.ಎನ್., ಜಿ.ಪಂ. ಉಪಕಾರ್ಯದರ್ಶಿ ಕೆ.ಎಸ್.ಮಣಿ, ಡಿಡಿಪಿಐ ಮಚ್ಛಾಡೋ, ಯುವಜನ ಸೇವಾ ಇಲಾಖೆ ಜಿಲ್ಲಾ ಅಧಿಕಾರಿ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.