ನಗರದಲ್ಲಿ ‘ಮನೆ ಮನೆಗೆ ಕಾಂಗ್ರೆಸ್ ನಡಿಗೆ’

ಶಿವಮೊಗ್ಗ : ಇಂದು ನಗರದ ೧೮ನೇ ವಾರ್ಡ್‌ನ ಹೊಸಮನೆ ಬಡಾ ವಣೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಮುಖಾಂತರ ನಮ್ಮ ಸರ್ಕಾರ ತಂದಂತಹ ಮಹತ್ವಪೂರ್ಣ ಯೋಜನೆಯನ್ನು ಪ್ರತಿ ವಾರ್ಡ್ ಬೂತ್‌ಮಟ್ಟದ ಕಾರ್ಯಕರ್ತರು ಮನೆಮನೆಗೆ ತೆರಳಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ, ಜನಹಿತ, ಜನಪರ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡಿನ ಪಾಲಿಕೆ ಸದಸ್ಯರಾದ ಲಕ್ಷ್ಮಣ್, ಬ್ಲಾಕ್ ಅಧ್ಯಕ್ಷರಾದ ನಾಗರಾಜ್ , ಭದ್ರಾಕಾಡಾ ನಿರ್ದೇಶಕ ಕೆ.ರಂಗನಾಥ್, ವಾರ್ಡ್ ಅಧ್ಯಕ್ಷ ಸ್ಟೆಲ್ಲಾ ಮಾರ್ಟಿನ್, ಪ್ರಮುಖರಾದ ಶ್ಯಾಮ್‌ಸುಂದರ್, ದೀಪಕ್‌ಸಿಂಗ್, ದೀನೇಶ್ ರಾವ್, ರೆಷ್ಮಾ, ಶಿವಮೂರ್ತಿ ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು.