ಗ್ರಾಮಾಂತರ :ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ

ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಇದರಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಅಪೇಕ್ಷೆ ಇರುವ ಆಕಾಂಕ್ಷಿಗಳು ಈಗಾಗಲೇ ಟಿಕೆಟ್‌ಗಾಗಿ ತಮ್ಮ ತಮ್ಮ ಪಕ್ಷಗಳಲ್ಲಿ ಕಸರತ್ತು ಆರಂಭಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕೈ ಪಕ್ಷದಲ್ಲಿ ಆಕಾಂಕ್ಷಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ಕೆಲವರು ಟಿಕೆಟ್‌ನ್ನು ತಮ್ಮದಾಗಿಸಿ ಕೊಳ್ಳಲು ಪಕ್ಷದಲ್ಲಿ ಲಾಭಿ ನಡೆಸಲಾರಂಭಿಸಿದ್ದಾರೆ.
ಈ ನಡುವೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ನಾನಾ ಕಸರತ್ತುಗಳು ನಡೆ ಯುತ್ತಿದ್ದು, ಎಲ್ಲರನ್ನೂ ಸಮಾಧಾನಿಸಿ ಜಾತಿ ಆಧಾರದ ಲೆಕ್ಕಾ ಚಾರವನ್ನು ಪರಿಗಣಿಸಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡು ವುದು ಪಕ್ಷದ ಪ್ರಮುಖರಿಗೆ ತಲೆ ನೋವಿನ ವಿಚಾರವಾಗಿದೆ.
ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾರ ಹೊಸ ಮಾರ್ಗದ ಸಮೀಕ್ಷೆಯ ತೀರ್ಪು ಅಂತಿಮ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಅಭ್ಯರ್ಥಿಗಳ ಆಯ್ಕೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಅಮಿತ್‌ಷಾ ಅವರ ಸೂಚ ನೆಯಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವನ್ನು ೩ತರಹದ ಗೌಪ್ಯ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಕ್ಷೇತ್ರದ ಮತದಾರರು, ಕ್ಷೇತ್ರದ ಉದ್ದಿಮೆದಾರರು-ಸಂಘ ಸಂ ಸ್ಥೆಗಳು ಹಾಗೂ ಪಕ್ಷದ ಪ್ರಮುಖರನ್ನು ೩ಹಂತ ದಲ್ಲಿ ಪ್ರತ್ಯೇಕವಾಗಿ ಭೇಟಿಮಾಡಿ ಮಾಹಿತಿ ಸಂಗ್ರಹಿಸಿ ಕ್ರೂಢಿಕರಣ ಮಾಡಿ ಅಭ್ಯರ್ಥಿ ಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪಕ್ಷದ ಕೆಲ ಮೂಲಗಳು ತಿಳಿಸಿವೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ಜನ ವ್ಯಾಪಕ ಪ್ರಯತ್ನ ನಡೆಸುತ್ತಿದ್ದು, ಸ್ಥಳೀ ಯರು ಹಾಗೂ ಕ್ಷೇತ್ರದಲ್ಲಿ ಅತಿ ಹೆಚ್ಚು ಜನರಿರುವ ಜಾತಿಗೆ
ಆದ್ಯ ತೆ ನೀಡಬೇಕೆಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಮೀಸಲಾತಿ ಕ್ಷೇತ್ರವಾಗಿರುವುದರಿಂದ ವೀರಶೈವ ಲಿಂಗಾಯತ ಅಭ್ಯರ್ಥಿ ಸ್ಪರ್ಧೆ ಅಸಾಧ್ಯ ಉಳಿದಂತೆ ಭೋವಿ ಎ.ಕೆ., ಬಣಜಾರ, ಜನಾಂಗದ ಮತಗಳ ಸಂಖ್ಯೆ ಗಣನೀಯ ವಾಗಿದ್ದು, ಅಲ್ಲಿಂದ ಅಭ್ಯರ್ಥಿಯ ಆಯ್ಕೆ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯ ತಂಡ ಸಕ್ರಿಯವಾಗಿದೆ ಎನ್ನಲಾಗಿದೆ.
ಮಾಜಿ ಶಾಸಕ ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿ ಭೋವಿ ಜನಾಂಗದ
ಪ್ರಮುಖರಿಗೆ ಟಿಕೆಟ್ ನೀಡಬೇಕೆಂದು ಸಮಾಜದ ಪ್ರಮುಖರು ಪಕ್ಷದ ರಾಜ್ಯಾಧ್ಯಕ್ಷ ರಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದು, ಭೋವಿ ಜನಾಂಗದಲ್ಲಿ ತಾಲ್ಲೂಕು ಬಿಜೆಪಿ ಪ್ರ ಧಾನಕಾರ್ಯದರ್ಶಿ ಧೀರರಾಜ್ ಹೊನ್ನವಿಲೆ ಹಾಗೂ ಜಿ.ಪಂ. ಸದಸ್ಯರಾದ ವೀರಭದ್ರಪೂಜಾರಿ ಹಾಗೂ ಅಶೋಕ್ ನಾಯ್ಕ್ ಮಧ್ಯ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಸ್ಥಳೀಯರಿಗೆ ಟಿಕೆಟ್ ನೀಡುವುದು ಎನ್ನುವುದಾದರೇ ಧೀರರಾಜ್ ಶಿವಮೊಗ್ಗ ಗ್ರಾಮಾ ಂತರ ಕ್ಷೇತ್ರದ ನಿವಾಸಿಯಾಗಿ ದ್ದಾರೆ. ಅಂತೆಯೇ ಸ್ಥಳೀಯ ಆದ್ಯತೆಯಲ್ಲಿ ಕಂಡು ಬರುವ ಮತ್ತೊಬ್ಬ ಅಭ್ಯರ್ಥಿಎಂದರೆ ಎ.ಕೆ.ಮಹದೇವಪ್ಪ. ಇಲ್ಲಿ ಧೀರರಾಜ್ ಹಾಗೂ ಮಹಾದೇವಪ್ಪ ಮಧ್ಯ ಪೈಪೋಟಿ ನಡೆಯುತ್ತಿದೆ. ವೀರಭದ್ರಪೂಜಾರಿ ಶಿಕಾರಿಪುರದ ಮೂಲದವರಾಗಿದ್ದು, ಟಿಕೆಟ್ ನೀಡಿ ಎಂಬ ದೊಡ್ಡ ಮಟ್ಟದ ಒತ್ತಡ ತಂದಿರುವ ಮಾಜಿ ಜಿ.ಪಂ.ಸದಸ್ಯ ಪೂಜಾರಿ ಬಣಜಾರ ಜನಾಂಗಕ್ಕೆ ಸೇರಿದ್ದು, ಮೂಲತಃ ಅವರು ಚನ್ನಗಿರಿ ಮೂಲದವರು.
ಈ ಹಿಂದೆ ಹೊಳೆಹೊ ನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕರಿಯುಣ್ಣ ಹಾಗೂ ಬಸವಣ್ಣಪ್ಪ ಶಾಸಕರಾಗಿದ್ದಂತಹವರು. ಕರಿಯಣ್ಣ ಎರಡು ಬಾರಿ ಮಾತ್ರ ಶಾಸಕರಾಗಿದ್ದರೆ, ಭೋವಿ ಜನಾಂಗದ ಬಸವಣ್ಣಪ್ಪ ನಾಲ್ಕು ಬಾರಿ ಶಾಸಕರಾಗಿ ಸಚಿವರು ಆಗಿದ್ದರು. ಇದೇ ಭೋವಿ ಸಮಾಜದಡಿ ಚುನಾವಣೆಗೆ ಸ್ಪರ್ಧಿಸಿದ್ದ ಕೆ.ಜಿ.ಕುಮಾರಸ್ವಾಮಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಇವರೂ ಕೂಡಾ ಸ್ಪರ್ಧೆಯಲ್ಲಿದ್ದಾರೆ.
ಪ್ರಸ್ತುತ ಶಾಸಕರಾಗಿರುವ ಜೆಡಿಎಸ್‌ನ ಶಾರದಾಪೂರ‍್ಯಾ ನಾಯ್ಕ್ ಬಣಜಾರ ಸಮುದಾ ಯದವರಾಗಿದ್ದು, ಅವರು ಕಳೆದ ೪ವರ್ಷಗಳಿಂದ ಶಾಸಕರಾಗಿ ಇಡೀ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ ಹಾಗೂ ಜನ ಸ್ಪಂದನೆಗೆ ವಿಶೇಷ ಆದ್ಯತೆ ನೀಡಿರುವುದು ಇತರ ಪಕ್ಷಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಳವಳ ಹಾಗೂ ಆತಂಕವನ್ನು ಸೃಷ್ಠಿಸಿರುವುದಂತೂ ಸತ್ಯ.
ಅಂತೆಯೇ ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಕರಿಯಣ್ಣ ಅವರು ಸತತ ಮೂರು ಚುನಾವಣೆಗಳಲ್ಲಿ ಸೋಲು ಕಂಡಿದ್ದು, ವಯೋ ಮಾನದ ಆಧಾರದಲ್ಲಿ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಕೆ.ಪಿ.ಸಿ.ಸಿ ಹಾಗೂ ಎಐಸಿ ಸಿ ಯಲ್ಲಿ ಹಿಡಿತಹೊಂದಿರುವ ಕರಿಯಣ್ಣ ಟಿಕೆಟ್ ತರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ನಡುವೆ ನಿವೃತ್ತ ಅಧಿಕಾರಿ ಬಲದೇವಕೃಷ್ಣ, ಎಸ್. ರವಿಕುಮಾರ್, ಮಧುಸೂದನ್ ಮತ್ತು ಪಲ್ಲವಿ ಇವರುಗಳು ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್‌ನ ಹೈಕಮಾಂಡ್ ಪವರ್ ಲೆಕ್ಕಾಚಾರ ನಡೆಯುವು ದರಿಂದ ಟಿಕೆಟ್ ಡಾ.ಶ್ರೀನಿವಾಸ್ ಅಥವಾ ಬಲದೇವ ಕೃಷ್ಣ ಅವರ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಒಟ್ಟಾರೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದು, ಯಾವ ಪಕ್ಷದಿಂದ ಯಾರು ಸ್ಫರ್ಧಿಸುತ್ತಾರೆಂಬುದು ಕುತೂಹಲದ ಸಂಗತಿಯಾಗಿದೆ.