Sunday, November 10, 2024
Google search engine
Homeಅಂಕಣಗಳುಲೇಖನಗಳುಹೆಚ್ಚುತ್ತಿರುವ ಡೇಂಗ್ಯೂ-ಚಿಕೂನ್‌ಗುನ್ಯಾ ತಡೆಗಟ್ಟಲು ಸ್ವಚ್ಛತೆ ಅನಿವಾರ್ಯ

ಹೆಚ್ಚುತ್ತಿರುವ ಡೇಂಗ್ಯೂ-ಚಿಕೂನ್‌ಗುನ್ಯಾ ತಡೆಗಟ್ಟಲು ಸ್ವಚ್ಛತೆ ಅನಿವಾರ್ಯ

ಶಿವಮೊಗ್ಗ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ಮಹಾಮಾರಿ ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿಯೂ ಸಹ ಡೇಂಗ್ಯೂ, ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿದೆ.
ಈ ರೋಗಗಳು ವ್ಯಾಪಕವಾಗಿ ಹರಡಲು ಅನೈರ್ಮಲ್ಯ ಹಾಗೂ ಸೊಳ್ಳೆಗಳ ಹಾವಳಿಯೇ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮಹಾನಗರಪಾಲಿಕೆ ಮುಂದಾ ಗಬೇಕಿದೆ.
ಶಿವಮೊಗ್ಗ ನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಇಂತಹ ನಗರದಲ್ಲಿಯೇ ಡೇಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣ ಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕಕಾರಿ ಯಾಗಿದ್ದು, ಸ್ಮಾರ್ಟ್ ಸಿಟಿಯ ಮೂಲ ಯೋಜನೆಗೇ ಇದು ಕುತ್ತಾ ಗುತ್ತದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಶಿವವಗ್ಗ ನಗರದ ಹೃದಯಭಾಗದಲ್ಲಿರುವ ೧೦೦ ಅಡಿ ರಸ್ತೆಯ ಬ್ಲಡ್‌ಬ್ಯಾಂಕ್ ಸಮೀಪವೇ ನೀರು ನಿಂತಿದೆ. ನಿಂತಿರುವ ನೀರು ಸೊಳ್ಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದ ಸ್ಥಳ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು. ಆದರೆ ನಗರದ ಹೃದಯಭಾಗದಲ್ಲಿಯೇ ಇಂತಹ ದೃಶ್ಯ ಕಂಡುಬರುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಕೊಡದಿರುವುದು ಅವರುಗಳಿಗೆ ನಗರದ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ ಎಂದರೆ ತಪ್ಪಾಗಲಾರದು.
ಈ ರೋಗಗಳ ತಡೆಗಟ್ಟುವಿಕೆಗೆ ಮಹಾನಗರಪಾಲಿಕೆ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಪ್ರತಿನಿತ್ಯವೂ ಸಹ ನಗರದ ಎಲ್ಲಾ ಬಡಾವಣೆಗಳಲ್ಲಿ ನೀರು ನಿಲ್ಲುವಂತಹ ಸ್ಥಳಗಳನ್ನು ಪರಿಶೀಲಿಸಿ ನೀರು ನಿಲ್ಲದ ಹಾಗೆ ಕ್ರಮಕೈಗೊಳ್ಳಬೇಕು. ಅಲ್ಲದೆ, ನಿಂತಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪಾದನೆ ಯಾಗದ ಹಾಗೆ ಕ್ರಿಮಿನಾಶಕವನ್ನು ಸಿಂಪಡಿಸು ವಂತಹ ಕಾರ್ಯ ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ಅಗತ್ಯವಾಗಿ ಆಗಬೇಕಿದೆ. ಇಲ್ಲದಿ ದ್ದರೆ ನಗರದಲ್ಲಿ ಡೇಂಗ್ಯೂ, ಚಿಕೂನ್ ಗುನ್ಯಾ ಮಲೇರಿಯಾದಂತಹ ರೋಗಗಳು ವ್ಯಾಪಕ ವಾಗಿ ಹರಡುವುದಲ್ಲದೆ, ನಾಗರೀಕರ ಆರೋ ಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾರದಲ್ಲಿ ಎರಡು ಬಾರಿಯಾದರೂ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಆ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಿ, ಸ್ವಚ್ಛತೆಯನ್ನು ಕಾಪಾಡಿ, ಡೇಂಗ್ಯೂಗೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಒತ್ತಾಯವಾಗಿದೆ.
ಈ ನಿಟ್ಟಿನಲ್ಲಿ ಮಹಾನಗರಪಾಲಿಕೆ ಅಗತ್ಯ ಕ್ರಮಕೈಗೊಳ್ಳಬೇಕಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮುಲ್ಲೈ ಮುಹಿಲ್, ಆಯುಕ್ತ. : ನಗರದ ಸ್ವಚ್ಛತೆಗೆ ಪಾಲಿಕೆ ಅಗತ್ಯ ಕ್ರಮಕೈಗೊಂಡಿದೆ. ಸ್ವಚ್ಛತಾ ಕಾರ್ಯ ಮಾಡುವ ಎರಡು ತಂಡಗಳನ್ನು ರಚಿಸಲಾಗಿದ್ದು, ರಾತ್ರಿ ವೇಳೆಯೇ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಬೆಳಗಿನ ವೇಳೆ ಇನ್ನೊಂದು ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತದೆ. ಎಲ್ಲಿಯಾದರೂ ನೀರು ನಿಂತ್ತಿದ್ದರೆ ಅದನ್ನು ತೆರವುಗೊಳಿಸುವಂತಹ ಕಾರ್ಯ ಮಾಡಲಾಗುತ್ತದೆ. ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ೧೦೦ ಅಡಿ ರಸ್ತೆಯಲ್ಲಿ ಡ್ರೈನೇಜ್ ಕ್ರಾಸ್ ಆಗಿದ್ದು, ಅದನ್ನು ನೇರಗೊಳಿಸಿ ಮುಖ್ಯ ಕಾಲುವೆಗೆ ಸಂಪರ್ಕ ಕಲ್ಪಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯುವುದು.

RELATED ARTICLES
- Advertisment -
Google search engine

Most Popular

Recent Comments