ಶಿವಮೊಗ್ಗ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಆರೋಗ್ಯದಿಂದ ಇರಲು ಶುದ್ಧ ಕುಡಿಯುವ ನೀರು ತುಂಬಾ ಅತ್ಯಗತ್ಯ ಇಂದು ಕಲುಷಿತ ನೀರಿನಿಂದ ಸಾಕಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಶಾಲೆಯಲ್ಲಿ ಮಕ್ಕಳಿಗೆ ಪ್ರತಿ ಹಂತದಲ್ಲೂ ಶುದ್ಧ ಕುಡಿಯುವ ನೀರಿನ ಅಗತ್ಯತೆ ಇದೆ.ನೀರಿನಿಂದಲೇ ಸಾಕಷ್ಟು ಸಮಸ್ಯೆಗಳು ನಮ್ಮನ್ನ ಕಾಡುತ್ತವೆ ಆದ್ದರಿಂದ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಧನಂಜಯ್ ಸರ್ಜಿ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ವಿನಾಯಕ ನಗರದ ರೋಟರಿ ಮಿಡ್ ಟೌನ್ ರೋಟರಿ ಸಭಾಂಗಣದಲ್ಲಿ ಮುತ್ತೂಟ್ ಫೈನಾನ್ಸ್ ವತಿಯಿಂದ ಹಾಗೂ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3282 ರ ಸಹಭಾಗಿತ್ವದಲ್ಲಿ ಆಯ್ದ ಆರ್ಥಿಕವಾಗಿ ಹಿಂದುಳಿದ 20 ಸರ್ಕಾರಿ ಶಾಲೆಗಳಿಗೆ. “ಜೀವ ಜಲ ” ಶುದ್ಧ ಕುಡಿಯುವ ನೀರಿನ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿದರು.
ಮುತ್ತೂಟ್ ಫೈನಾನ್ಸ್ ನವರು ತಮ್ಮ ವೃತ್ತಿಯ ಜೊತೆಗೆ ನೂರಾರು ಸಮಾಜಮುಖಿ ಹಾಗೂ ಮಾನವಿಯ ಸೇವೆಗಳನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಇಂತಹ ಅಮೂಲ್ಯ ಸೇವೆ ಮಾಡುತ್ತಿರುವುದು ತುಂಬಾ ಒಳ್ಳೆಯ ಕಾರ್ಯವಾಗಿದೆ ಹಾಗೆ ದಾನ ಪಡೆದ ಶಾಲೆಯವರು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಅದರ ವ್ಯವಸ್ಥೆಯನ್ನು ಸಹ ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದು ಸಹ ಅವರ ಕರ್ತವ್ಯವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗೌರ್ನರ್ ಬಿಸಿ ಗೀತಾ, ಮುತ್ತೂಟ್ ಫೈನಾನ್ಸಿನ ರೀಜನಲ್ ಮ್ಯಾನೇಜರ್ ಪ್ರಶಾಂತ್ ಲಕ್ಷ್ಮಣ್ ನಾಯಕ, ಸಂಸ್ಥೆಯ ಲಿಂಗರಾಜ್ ಲಟಗಿ. ಅಶೋಕ್. ರೋಟರಿ ಸಹಾಯಕ ಗೌರ್ನರ್ ರಾಜೇಂದ್ರ ಪ್ರಸಾದ್. ರವಿ ಕೂಟೊಜಿ. ಎಲಿಸಾ ಎಂವಿ ಪ್ರದೀಪ್ ಕೆ. ಮನೋಜ್ ಕೆ ಪಿ. ಶ್ರೀ ಹರ್ಷ ಹಾಗೂ ರೋಟರಿ ಬಂಧುಗಳು ಮತ್ತು ಮುತ್ತೂಟ್ ಫೈನಾನ್ಸಿನ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು