Thursday, September 19, 2024
Google search engine
Homeಇ-ಪತ್ರಿಕೆಚುಂಚಾದ್ರಿ ಕಪ್‌ ಪಂದ್ಯಾವಳಿ ಆರಂಭ

ಚುಂಚಾದ್ರಿ ಕಪ್‌ ಪಂದ್ಯಾವಳಿ ಆರಂಭ

ಶಿವಮೊಗ್ಗ : ನಗರದ ಆದಿಚುಂಚನಗರಿ ಶಿಕ್ಷಣ ಟ್ರಸ್ಟ್‌ ಮತ್ತು ಜಿಲ್ಲಾ ವಾಲಿಬಾಲ್‌ ಸಂಸಥೆ ಜಂಟಿಯಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚುಂಚಾದ್ರಿ ಕಪ್‌ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯು ಭಾನುವಾರದಿಂದ ಶುರುವಾಯಿತು.
ಭಾನುವಾರ ಸಂಜೆ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಗೆ ಸಂಸದ ಬಿ.ವೈ;. ರಾಘವೇಂದ್ರ ಅವರು ಚಾಲನೆ ನೀಡಿ ಮಾತನಾಡಿದರು.

ಮಲೆನಾಡ ಭಾಗದಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದ ಹೆಗ್ಗಳಿಕೆ  ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಅವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳನ್ನು ಓದಿನ ಜೊತೆ ಜೊತೆಗೆ ಕ್ರೀಡೆಗೂ ಅಷ್ಟೇ ಆದ್ಯತೆ ನೀಡಿ ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ರೂಪಿಸುವಂತಹ ಕೀರ್ತಿ ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದರು.
ಶಿವಮೊಗ್ಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡಿ, ಆದಿಚುಂನಗಿರಿ ಸಂಸ್ಥೆಯ ಕನಸಿನಂತೆ, ಸರ್ಕಾರವು ಕೆಲಸ ಮಾಡಿದೆ. ಅಂತಹ ಸಾಕಷ್ಟು ಯೋಜನೆಯ ಸದುಪಯೋಗ ಪಡೆಯುವಂತ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕ್ರೀಡಾಪಟುಗಳಲ್ಲಿ ಗೆದ್ದೇಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ  ಜೀವನವನ್ನು ಹಾಗೂ ಕ್ರೀಡೆಯನ್ನು ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

 ಸಮಾರಂಭದಲ್ಲಿ  ಆದಿಚುಂಚನಗಿರಿ ಮಹಾಸಂಸ್ಥಾನದ  ಶ್ರೀ ಸಾಯಿನಾಥ ಸ್ವಾಮೀಜಿ, ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದರ ಚೆನ್ನಯ್ಯ ಬಸವಮೂರ್ತಿ ಸ್ವಾಮೀಜಿ,  ಶಾಸಕ ಎಸ್.‌ ಎನ್.‌ ಚನ್ನಬಸಪ್ಪ,  ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ , ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ  ಭಾಸ್ಕರ್ ಜಿ.ಕಾಮತ್, ಕಾರ್ಯದರ್ಶಿ ಶಶಿ  ಹಾಜರಿದ್ದರು.

RELATED ARTICLES
- Advertisment -
Google search engine

Most Popular

Recent Comments