ಸಂತ್ರಸ್ತರೇ ನಿಮ್ಮೊಂದಿಗೆ ನಾವಿದ್ದೇವೆ… ತವರಿನಲ್ಲಿ ಅತಿವೃಷ್ಟಿಯಿಂದ ನೊಂದವರಿಗೆ ಮುಖ್ಯಮಂತ್ರಿ ಬಿಎಸ್‌ವೈ ಅಭಯ

ಶಿವಮೊಗ್ಗ : ಜಿಲ್ಲೆಯಲ್ಲಿ ಅತಿವೃಷ್ಟಿ ಯಿಂದ ಉಂಟಾಗಿರುವ ಹಾನಿ ಬಗ್ಗೆ ಜನಸಾಮಾನ್ಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಇಂದು ಜಿಲ್ಲೆಯ ತೀರ್ಥಹಳ್ಳಿ, ಶಿವಮೊಗ್ಗ ನಗರ ಸೇರಿದಂತೆ ಇತರೆಡೆ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿ ಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಹಾನಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾ ಗುವುದು. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿರಾಶ್ರಿತ ರೊಂದಿಗೆ ರಾಜ್ಯ ಸರ್ಕಾರವಿದೆ ಎಂದು ಅಭಯ ನೀಡಿದರು.
ನಗರದ ರಾಜೀವ್ ಗಾಂಧಿ ಬಡಾ ವಣೆಗೆ ಭೇಟಿ ನೀಡಿದ ವೇಳೆ,  ಮಹಿಳೆ ಯರು ಸಿಎಂ ಕಾಲಿಗೆ ಬಿದ್ದು ನಾವು ರಸ್ತೆಗೆ ಬಿದ್ದೀದ್ದೇವೆ, ನಮ್ಮನ್ನ ಕಾಪಾಡಿ ಎಂದು ಅಳಲು ತೋಡಿಕೊಂಡರು. ಈ ಸಮಯದಲ್ಲಿ ನಿಮ್ಮ ಜತೆ ನಾವಿದ್ದೇವೆ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ರಾಜೀವ್‌ಗಾಂಧಿ ಬಡಾವಣೆಯಲ್ಲಿ ನೆರೆ ಹಾವಳಿಯಿಂದ ಮನೆ ಕಳೆದು ಕೊಂಡ ಸಂತ್ರಸ್ತರಿಗೆ ಹಾಗೂ ಇತರೇ ಬಡಾವಣೆಯಲ್ಲಿ ಮನೆ ಕಳೆದು ಕೊಂಡವರಿಗೆ ಮಂಗಳೂರು ಮಾದರಿ ಯಲ್ಲಿ ಮನೆಯನ್ನು ನಿರ್ಮಿಸಿಕೊಡಲಾ ಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜೀವ್‌ಗಾಂಧಿ ಬಡಾವಣೆಯಲ್ಲಿ ಯಾರ ಖಾತೆಯಲ್ಲಿ ಯಾರು ವಾಸ ವಾಗಿದ್ದಾರೆ ಎಂಬುದೇ ದಾಖಲಾತಿ ಯಿಲ್ಲ. ಈ ಬಗ್ಗೆ ಸರ್ವೆ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದೇನೆ. ೧೫ ದಿನದೊಳಗೆ  ಈ ಸರ್ವೆ ಕಾರ್ಯ ನಡೆಯಲಿದೆ.  ಅಗತ್ಯ ಬಿದ್ದರೆ ಈ ಬಡಾ ವಣೆಗೆ ತುಂಗಾ ನದಿಯಿಂದ ಯಾವುದೇ ಅನಾಹುತವಾಗದಂತೆ ತಡೆಗೋಡೆ ಯನ್ನು ನಿರ್ಮಿಸಲಾಗುವುದು ಎಂದರು.
ಶಿವಮೊಗ್ಗಕ್ಕೆ ವಿಶೇಷ ಪ್ಯಾಕೇಜ್:  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದಿದ್ದು, ಅಪಾರ ಪ್ರಮಾಣದ ತೋಟದ ಬೆಳೆ ನಷ್ಟವಾಗಿದೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿದ ಬಳಿಕ ವರದಿ ನೀಡ ಲಿದ್ದು, ನಂತರ ಪರಿಹಾರ ವಿತರಿಸ ಲಾಗುವುದು. ಯಾವುದೇ ರೈತರು, ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಇಂದು ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳು ಇನ್ನು ನಾಲ್ಕೈದು ದಿನಗಳಲ್ಲಿ ಸ್ಥಳ ವೀಕ್ಷಣೆ ಮಾಡಿ ಹಾನಿಗೊಳಗಾದ ಜಮೀನಿನಲ್ಲಿ ಎಷ್ಟು ಅರಣ್ಯ ಇಲಾಖೆಗೆ ಸೇರಿದೆ ಮತ್ತು ಎಷ್ಟು ರೈತರಿಗೆ ಸೇರಿದೆ ಎಂಬುದನ್ನು ಅಂದಾಜಿಸಲಿದ್ದಾರೆ. ಅವರು ವರದಿ ಕೊಟ್ಟ ನಂತರ ಪರಿಹಾರ ವಿತರಿಸ ಲಾಗುವುದು. ಯಾರು ಕೂಡ ಕಂಗಾಲಾ ಗುವ ಅಗತ್ಯವಿಲ್ಲ ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಉಂಟಾಗಿರುವ ಹಾನಿಯ ಬಗ್ಗೆ ಒನ್ನೊಂದು ವಾರದಲ್ಲಿ ವರದಿ ಸಿಗಲಿದ್ದು, ಬಳಿಕ ವಿಶೇಷ ಪ್ಯಾಕೇಜ್ ಘೋಷಿಸ ಲಾಗುವುದು. ಇಂದು ಸಂಜೆ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗು ವುದು ಎಂದು ಅವರು ತಿಳಿಸಿದರು.
ಇದೇ ವೇಳೆ ಪ್ರವಾಹದಿಂದ ಜಾನುವಾರುಗಳನ್ನು ಕಳೆದುಕೊಂಡು ಕೆಲವು ರೈತರಿಗೆ ಮುಖ್ಯಮಂತ್ರಿ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಎನ್.ರವಿ ಕುಮಾರ್, ಶಾಸಕ ಜ್ಞಾನೇಂದ್ರ, ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಡಿ.ಎಸ್. ಅರುಣ್ ಮತ್ತಿತರರು ಹಾಜರಿದ್ದರು.