Saturday, October 12, 2024
Google search engine
Homeಇ-ಪತ್ರಿಕೆಸರ್ಜಿ ಕನ್‌ವೇಷನ್ ಹಾಲ್ ಮುಂಭಾಗ ಚಿರತೆ ಪ್ರತ್ಯಕ್ಷ?

ಸರ್ಜಿ ಕನ್‌ವೇಷನ್ ಹಾಲ್ ಮುಂಭಾಗ ಚಿರತೆ ಪ್ರತ್ಯಕ್ಷ?

ಶಿವಮೊಗ್ಗ: ನಗರದ ಸರ್ಜಿ ಕನ್‌ವೇಷನ್ ಹಾಲ್ ಮುಂಭಾಗದಲ್ಲಿ, ಗ್ಯಾಸ್ ಗೋಡನ್ ಬಳಿ ಮತ್ತು ಕುವೆಂಪು ನಗರದಲ್ಲಿ ನೆನ್ನೆ ರಾತ್ರಿ ಚಿರತೆ ಕಂಡುಬಂದಿದೆ.

ಸ್ಥಳೀಯರೊಬ್ಬರ ಮನೆಯ ಸಿಸಿ ಕ್ಯಾಮಾರಾದಲ್ಲಿ 2-3 ಬಾರಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಾಗಿಗುಡ್ಡ, ಕುವೆಂಪು ನಗರ ಕೊನೆಯ ಭಾಗ, ಜೆಎನ್‌ಸಿ ಬಳಿ ತಂಬಾಕು ಗೋಡನ್ ಬಳಿ, ಚೆನ್ನಮುಂಬಾಪುರದ ಬಳಿ ಮತ್ತು ಬಾಪೂಜಿ ಆರ್ಯುವೇದಿಕ್ ಕಾಲೇಜು ಹಿಂಭಾಗ ಚಿರತೆ ಓಡಾಡುವುದನ್ನು ಸ್ಥಳೀಯರು ನೋಡಿದ್ದಾರೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, 3 ತಿಂಗಳ ಹಿಂದೆ ಕೂಡ ಇದೇ ರೀತಿ ಚಿರತೆ ಓಡಾಟದ ವೀಡಿಯೋ ವೈರಲ್ ಆಗಿತ್ತು. ಈಗ ಮತ್ತೆ ಚಿರತೆ ಕಂಡು ಬಂದಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments