Sunday, October 13, 2024
Google search engine
Homeಅಂಕಣಗಳುಲೇಖನಗಳುಕೇಂದ್ರದ ಉಜ್ವಲ ಯೋಜನೆ ಮಹತ್ವದ್ದು : ಬಿ.ಎಸ್. ಯಡಿಯೂರಪ್ಪ

ಕೇಂದ್ರದ ಉಜ್ವಲ ಯೋಜನೆ ಮಹತ್ವದ್ದು : ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ: ಭಾರತವನ್ನು ಪರಿವರ್ತನೆಯ ಹಾದಿಯಲ್ಲಿ ಕೊಂಡೊಯ್ಯುವ ಪ್ರಧಾನಿ ಮೋದಿ ಅವರ ವಿಶೇಷ ಕಾರ್ಯಕ್ರಮಗಳಲ್ಲಿ ಉಜ್ವಲ ಯೋಜನೆ ಮಹತ್ವದ್ದು ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಇಂದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಜಿಲ್ಲೆಯ ಬಿಪಿಎಲ್ ಕುಟುಂಬಗಳಿಗೆ ಉಚಿತ ವಾಗಿ ಗ್ಯಾಸ್‌ಸಿಲಿಂಡರ್ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿಯವರ ಸಬ್‌ಕೇ ಸಾಥ್ ಸಬ್‌ಕಾ ವಿಕಾಸ್ ಘೋಷಣೆಯಲ್ಲಿ ಬದ್ಧತೆ ಇದೆ. ಎಲ್ಲಾ ವರ್ಗದವರನ್ನು ತನ್ನ ಎರಡು ಕಣ್ಣುಗಳಂತೆ ಮೋದಿ ನೋಡುತ್ತಿದ್ದಾರೆ. ಅದರಲ್ಲೂ ಮಹಿಳೆಯರ ಸಂಕಷ್ಟಗಳಿಗೆ ಅಂತ್ಯಹಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮೋದಿ, ಮಹಿಳೆಯರು ಹೊಗೆ ರಹಿತ ಜೀವನ ನಡೆಸಲು ಸಹಕಾರಿಯಾಗು ವಂತೆ ೧೮೦೦ರೂ. ಮೌಲ್ಯದ ಉಚಿತ ಗ್ಸಾಸ್ ಸಿಲಿಂಡರ್ ಸಂಪರ್ಕ ನೀಡುವ ಉಜ್ವಲ ಯೋಜನೆ ಜಾರಿ ಮಾಡಿದ್ದಾರೆ ಎಂದರು.
ಈ ಯೋಜನೆಗೆ ದೇಶದಲ್ಲಿ ೮ ಸಾವಿರಕೋಟಿರೂ. ಖರ್ಚು ಮಾಡಲಾ ಗುತ್ತಿದೆ. ಈಗಾಗಲೇ ೨ ಸಾವಿರಕೋಟಿರೂ ಇದಕ್ಕಾಗಿ ವ್ಯಯಿಸಲಾಗಿದೆ. ರಾಜ್ಯದ ೨.೨೫ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಹೆಣ್ಣು ಮಕ್ಕಳಿಗಾಗಿ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆ ಯೊಂದಿಗೆ ವಿವಿಧ ಯೋಜನೆಗಳನ್ನು ನೀಡಿದ ಪ್ರದಾನಿಗಳು, ಬಡ ಕುಟುಂಬಗಳಿಗೆ ಮುದ್ರಾ ಯೋಜನೆಯಡಿ ಸುಲಭವಾಗಿ ಸಾಲ ಸಿಗುವಂತೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ವಿಶ್ಲೇಷಿಸಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡ, ನಗರ ಪಾಲಿಕೆ ಉಪಮೇಯರ್ ರೂಪ ಲಕ್ಷ್ಮಣ್, ಸದಸ್ಯರಾದ ಸುಭಾಷ್, ರಮೇಶ್, ಭಾರತ್ ಪೆಟ್ರೋಲಿಯಂನ
ಅಧಿಕಾರಿ ನಾರಾಯಣಸ್ವಾಮಿ ಮತ್ತಿತರರಿದ್ದರು

RELATED ARTICLES
- Advertisment -
Google search engine

Most Popular

Recent Comments