ಸೊರಬ: ಭಾವೈಕ್ಯತೆ, ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಪಟ್ಟಣ ಸೇರಿ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಹೊಸ ಬಟ್ಟೆ ಧರಿಸಿ ಮುಂಜಾನೆ ಮಸೀದಿಗೆ ತೆರಳಿ ನಮಾಜ್ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ಕೋರಿ ಸಿಹಿ ತಿಂಡಿ ಹಂಚಿ ನಂತರ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಈದ್ಗಾ ಮೈದಾನದ ವರೆಗೆ ಮೆರೆವಣಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಮುಕ್ತಿಯಾರ್ ಬಾಷಾ, ಕಾಂಗ್ರೆಸ್ ಪಕ್ಷದ ಟೌನ್ ಘಟಕದ ಅಧ್ಯಕ್ಷ ಅಬ್ದುಲ್ ರಶೀದ್ ಹಿರೇಕೌಂಶಿ, ಅಯೂಬ್ ಖಾನ್, ಹಿದಾಯತ್ ಉಲ್ಲಾ, ಶಫಿ ಉಲ್ಲಾ, ಗಪಾರ್ ಸಾಬ್, ಇಂತಕಾಬ್, ಅಬ್ದುಲ್ ಖಾದರ್, ಖಾಸಿಂ, ಬಷೀರ್ ಅಹ್ಮದ್, ಶಬ್ಬೀರ್, ಮೆಹಬೂಬ್ ಭಾಷಾ , ನಿಸ್ಸಾರ್,ಐಸಾನ್, ಮುಕ್ತಿಯಾರ್ , ಹಜರತ್ ಸೇರಿದಂತೆ ಮುಸ್ಲಿಮ್ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.