Thursday, September 19, 2024
Google search engine
Homeಇ-ಪತ್ರಿಕೆಕೋಲಾರ: ಕಾರು ಮರಕ್ಕೆ ಡಿಕ್ಕಿ–ಮೂವರು ವಿದ್ಯಾರ್ಥಿಗಳ ಸಾವು

ಕೋಲಾರ: ಕಾರು ಮರಕ್ಕೆ ಡಿಕ್ಕಿ–ಮೂವರು ವಿದ್ಯಾರ್ಥಿಗಳ ಸಾವು

ಕೋಲಾರ: ಮರಕ್ಕೆ ಕಾರು ಡಿಕ್ಕಿಯಾಗಿ ಉಂಟಾದ ಭೀಕರ ಅಪಘಾತಕ್ಕೆ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವು ಘಟನೆ ನಡೆದಿದೆ.

ಈ ದುರಂತ ಘಟನೆಯು ಕೋಲಾರ ಹೊರವಲಯದ ಬಂಗಾರಪೇಟೆ  ಮುಖ್ಯರಸ್ತೆ ಸಹಕಾರ ನಗರದಲ್ಲಿ ಸಂಭವಿಸಿದೆ. ಸಾವನ್ನಪ್ಪಿರುವ ಸಂತ್ರಸ್ತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಇವರು ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ತಿಳಿದುಬಂದಿದೆ. ನತದೃಷ್ಟ ವಿದ್ಯಾರ್ಥಿಗಳು ಬಂಗಾರಪೇಟೆಯ ತಮ್ಮ ಸ್ನೇಹಿತ ಸಾಯಿ ಗಗನ್ ಮನೆಗೆ ಬಂದಿದ್ದರು. ಸ್ನೇಹಿತನ ಮನೆಯಿಂದ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments