ದಾವಣಗೆರೆ ಪತ್ರಿಕೆಗಳ ಮೇಲೆ ಅಮಾನತ್ತು ಮಾಡಿರುವ ಆದೇಶ ರದ್ದು

ದಾವಣಗೆರೆ: ಇಲ್ಲಿನ 18 ಸ್ಥಳಿಯ ಹಾಗೂ ಪ್ರದೇಶಿಕ ಪತ್ರಿಕೆಗಳ ಮೇಲೆ ಏರಿರುವ ತಾತ್ಕಲೀಕ ಅಮಾನತು ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಗಿ, ಕೂಡಲೆ ಸರ್ಕಾರದ ಸ್ಪಂಧನೆಯಿಂದ ಅಮಾನತು ಆದೇಶ ರದ್ದಾಗಿದೆ.

 ದಾವಣಗೆರೆ ಸ್ಥಳಿಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ತಂಡ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದಾ ತಗಡೂರು ಅವರ ನೇತೃತ್ವದ ನಿಯೋಗ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಮಾದ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ರವರ ಮೂಲಕ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಹೊಸದಾಗಿ ಮತ್ತೊಮ್ಮೆ ಮಾಧ್ಯಮ ಸಮಿತಿ ಮುಂದೆ ಎಲ್ಲಾ ಪತ್ರಿಕೆಗಳನ್ನು ಹಾಜರುಪಡಿಸಿ ಅನುಮೋದನೆಯ ಶಿಫಾರಸ್ಸು ಪಡೆಯಬೇಕೆಂದು ಮಾಡಿರುವ ಆದೇಶವನ್ನು ಸಹ ರದ್ದುಪಡಿಸಬೇಕೆಂದು ಮನವಿ ಮಾಡಲಾಯಿತು. ಮನವಿಗೆ ತಕ್ಷಣ ಸ್ಪಂದಿಸಿದ ಕೆ.ವಿ. ಪ್ರಭಾಕರ್ ರವರು ಇವತ್ತು ನಾನು ಮುಖ್ಯಮಂತ್ರಿಗಳಿಂದಲೇ ಆದೇಶವನ್ನು ರದ್ದು
ಮಾಡಿಸಲು ಮುಖ್ಯಮಂತ್ರಿ ಜೊತೆಗೆ ಮಾತುಕತೆ ಮಾಡುತ್ತೇನೆ ಎಂದು ಹೇಳಿ, ಕೂಡಲೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಪತ್ರಕರ್ತರು ಮತ್ತು ಪತ್ರಿಕೆಗಳಿಗೆ ಆಗುತ್ತಿರುವ ಧೋರಣೆಯನ್ನು ಮನವರಿಕೆ ಮಾಡಿ ಕೊಟ್ಟರು.
ಮುಖ್ಯಮಂತ್ರಿಗಳು, ವಾರ್ತಾ ಆಯುಕ್ತರಿಗೆ ದೂರವಾಣಿ ಮೂಲಕ ಆದೇಶವನ್ನು ರದ್ದು ಮಾಡುವಂತೆ ಸೂಚನೆ ನೀಡಿದರು. ಆಯುಕ್ತರು ಅಮಾನತು ಆದೇಶ ರದ್ದು ಮಾಡುವುದಾಗಿ ತಿಳಿಸಿದ್ದಾರೆ.

 ಸಂಪಾದಕರ ನಿಯೋಗದಲ್ಲಿ ರಾಜ್ಯಾಧ್ಯ ಶಿವಾನಂದ ತಗಡೂರು, ದಾವಣಗೆರೆ ವರದಿಗಾರರ ಕೂಟದ ಅದ್ಯಕ್ಷ ಏಕಾಂತಪ್ಪ, ಕನಿಪದ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್‌, ವಿರೇಶ್‌, ದಾವಣಗೆರೆ ಕನ್ನಡಿಗ ರವಿ, ಜೈಮುನಿ ಇತರರು ಇದ್ದರು.