Sunday, October 13, 2024
Google search engine
Homeಇ-ಪತ್ರಿಕೆಭಾರತ್ ರೈಸ್ ರದ್ದು ಖಂಡನೀಯ: ಕಲ್ಲೂರು ಮೇಘರಾಜ್

ಭಾರತ್ ರೈಸ್ ರದ್ದು ಖಂಡನೀಯ: ಕಲ್ಲೂರು ಮೇಘರಾಜ್

ಶಿವಮೊಗ್ಗ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಸರ್ಕಾರ ಆರಂಭಿಸಿದ್ದ ಭಾರತ್ ರೈಸ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಬಡವರ ಅನ್ನದ ಜೊತೆಗೆ ಆಟವಾಡಿದ್ದಂತಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶ್ರೀ ಸಾಮಾನ್ಯನಿಗೂ ಅಗ್ಗದ ದರದಲ್ಲಿ ಅಕ್ಕಿ ಸಿಗಬೇಕೆಂಬ ಉದ್ದೇಶದಿಂದ ಭಾರತ್ ರೈಸ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಈ ಯೋಜನೆಯನ್ನು ಜು.1ರಿಂದಲೇ ರದ್ದು ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾದ್ದದ್ದು, ಕೂಡಲೇ ಎನ್‌ಡಿಎ ಅಂಗಪಕ್ಷಗಳ ಮುಖಂಡರಾದ ಚಂದ್ರಬಾಬು ನಾಯ್ಡು, ನಿತೀಶ್‌ಕುಮಾರ್, ಕುಮಾರಸ್ವಾಮಿ ಮುಂತಾದವರು ಪ್ರಧಾನ ಮಂತ್ರಿ ಮೋದಿಯವರ ಮೇಲೆ ಒತ್ತಡ ತಂದು ಯೋಜನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ಬೇಳೆ, ಗೋದಿ, ಹಿಟ್ಟಿನ ಮರಾಟವನ್ನು ಕೂಡ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗಿತ್ತು. ಬಿಪಿಎಲ್ ಎಪಿಎಲ್ ಇಲ್ಲದ ಕುಟುಂಬಗಳಿಗೆ ಇದು ಸಹಾಯಕವಾಗುತ್ತಿತ್ತು. ಅಕ್ಕಿ ಮತ್ತು ಇತರೆ ದಿನಸುಗಳನ್ನು ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುವುದನ್ನು ಬಿಟ್ಟು ಮಾಲ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದು ಸರಿಯಲ್ಲ, ಮೋದಿಯವರು ಚುನಾವಣಾ ಸಂದರ್ಭದಲ್ಲಿ ಘೋಷಿಸಿ ಗೆದ್ದ ಮೇಲೆ ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಡವರನ್ನು ಭ್ರಮನಿರಸನಗೊಳಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಬಿಜೆಪಿ ಮುಖಂಡರು ಈ ಬಗ್ಗೆ ಮೌನವಾಗಿದ್ದಾರೆ. ಆದಷ್ಟು ಬೇಗ ಈ ಯೋಜನೆಯನ್ನು ಜಾರಿಗೊಳಿಸಬೇಕು. ಇದರ ಜೊತೆಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಕೂಡ ಸರಿಯಾದ ರೀತಿಯಲ್ಲಿ ಬಡವರನ್ನು ತಲುಪುತ್ತಿಲ್ಲ. ಅಂತ್ಯ ಸಂಸ್ಕಾರ ಯೋಜನೆಯಡಿ ಬಡವರು ಮೃತರಾದರೆ ತಕ್ಷಣ ಐದು ಸಾವಿರ ನೀಡುತ್ತಿದ್ದರು. ಅದನ್ನು ಕೂಡ ನಿಲ್ಲಿಸಿದ್ದಾರೆ. ಅದು ಕೂಡ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲಾ ಪ್ರಕರಣಗಳನ್ನು ಬಿಜೆಪಿಯ ವರು ಸಿಬಿಐಗೆ ಒಪ್ಪಿಸುವಂತ್ತೆ ಒತ್ತಾಯಿಸುತ್ತಿದ್ದಾರೆ. ಇವರಿಗೆ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲವೇ, ಪ್ರತಿಯೊಂದಕ್ಕು ಸಿಬಿಐ ಎಂದು ಬಿಜೆಪಿಯವರು ಹೇಳುತ್ತಿರುವುದನ್ನು ನೋಡಿದರೆ, ಸಿಬಿಐ ಇವರ ಅತ್ತೆಯ ಮನೆಯ ಎಂದು ಸಂಶಯ ಬರುತ್ತದೆ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ವಿ.ರಾಜಮ್ಮ, ನರಸಿಂಹಮೂರ್ತಿ, ಶಂಕರನಾಯ್ಕ, ಎಲ್. ಆದಿಶೇಷ, ಕೃಷ್ಣಪ್ಪ ಟಿ.ಆರ್. ಇದ್ದರು.

RELATED ARTICLES
- Advertisment -
Google search engine

Most Popular

Recent Comments