ನೂರು ಜನ್ಮ ಎತ್ತಿದರೂ ಬಿಎಸ್‌ವೈ ಸೋಲಿಸಲು ಸಾಧ್ಯವಿಲ್ಲ

ಶಿವಮೊಗ್ಗ: ನೂರು ಜನ್ಮ ಎತ್ತಿಬಂದರೂ ಯಡ್ಡಿಯೂರಪ್ಪ ಅವರನ್ನ ಸೋಲಿಸಲು ಮತ್ತು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ ಎಂದು ಬಿಜೆಪಿ ಎಸ್.ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ತಿಳಿಸಿದರು.
ನಗರದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಳ್ಳ ಲಾದ ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾ ಘಟ ಕದ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್.ಯಡಿ ಯೂರಪ್ಪ ಅವರು ಅವರ ಕಾರ್ಯಗಳಿಂದ ಗೆದ್ದು ಬರ್ತಾರೆ. ಸಿದ್ದರಾಮಯ್ಯ ಅವರೇ ತಾಕತ್ತಿದ್ದರೆ ನೀವು ಮಾಡಿದ ಕಾರ್ಯಗಳಿಂದ ಗೆದ್ದು ಬಂದು ತೋರಿಸಿ. ಯಡಿಯೂರಪ್ಪನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುವುದನ್ನು ಕೈ ಬಿಡಿ ಎಂದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿಗೆ ಬಂದ ನಂತರ ವಿಶೇಷವಾಗಿ ಬಿಜೆಪಿಯ ಎಸ್.ಟಿ. ಕಾರ್ಯಕರ್ತರು ಜನರಿಗೆ ಕೇಂದ್ರ ಸರ್ಕಾರದ ಯೋಜನೆ, ಕಾಮಗಾರಿಗಳ ಬಗ್ಗೆ ತಿಳುವಳಿಕೆ ನೀಡಲು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು ಎಂದರು.
ಅನ್ನ ಭಾಗ್ಯದಲ್ಲಿ ಕೇಂದ್ರ ಸರ್ಕಾರ ೨೯ರೂ. ಗೆ ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರ ಕೇವಲ ೩ ರೂ. ಈ ಯೋಜನೆಗೆ ನೀಡುತ್ತಿದೆ. ಆದರೂ ಸಹ ಇದನ್ನು ರಾಜ್ಯ ಸರ್ಕಾರ ನಮ್ಮದೇ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಎಸ್‌ಸಿ ಮೋರ್ಚಾ ಜನರಲ್ಲಿ ಜಾಗೃತಿ ಮೂಡಿಸ ಬೇಕು. ಉಜ್ವಲ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. ಇದನ್ನೂ ಸಹ ಮನೆಮನೆಗೆ ತಲುಪಿಸಬೇಕು ಎಂದರು.
ನಾನು ಕಳೆದ ಹಲವು ವಿಧಾನಸಭಾ ಚುನಾಣೆವಲ್ಲಿ ಸಿದ್ದರಾಮಯ್ಯನವರ ವಿರುದ್ದ ಸ್ಪರ್ಧಿಸಿ ಪರಾಭವಗೊಂಡಿದ್ದೇನೆ. ಆದರೆ ಪ್ರತಿಭಾರಿಯೂ ಸಹ ನನ್ನ ಮತಗಳಿಕೆಯ ಪ್ರಮಾಣ ಏರುಮುಖದಲ್ಲಿದೆ. ಈ ಬಾರಿ ಸಿದ್ದರಾಮಯ್ಯನವರು ಗೆದ್ದು ಬಂದು ತೋರಿಸಲಿ, ಅದನ್ನು ಮಾಡದೇ ಯಡಿಯೂರಪ್ಪನವರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್.ಅರುಣ್, ಮಾಜಿ ಶಾಸಕ ಕುಮಾರ ಸ್ವಾಮಿ, ರೇಣುಕಮ್ಮ, ಸುಧಾ ಬೋರೆ ಮೊದಲಾದವರು ಉಪಸ್ಥಿತರಿದ್ದರು.