Wednesday, September 18, 2024
Google search engine
Homeಇ-ಪತ್ರಿಕೆನಾಲ್ಕನೇ ಬಾರಿಗೂ ಸಂಸತ್‌ ಪ್ರವೇಶಿಸಿದ ಬಿವೈಆರ್‌

ನಾಲ್ಕನೇ ಬಾರಿಗೂ ಸಂಸತ್‌ ಪ್ರವೇಶಿಸಿದ ಬಿವೈಆರ್‌

ಜನರ ಅಪೇಕ್ಷೆ ತಕ್ಕಂತೆ ಕೆಲಸ ಮಾಡುವೆ

ಶಿವಮೊಗ್ಗ:  ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು  ಭರ್ಜರಿ ಗೆಲುವು ದಾಖಲಿಸಿದ್ದಾರೆ.  ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ವಿರುದ್ದ ೨, ೪೩, ೭೧೫  ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ಅವರು ಸಂಸತ್‌ ಪ್ರವೇಶಿಸಿದ್ದಾರೆ.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಮತ ಎಣಿಕೆ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಬಿಜೆಪಿ ಬಿ.ವೈ. ರಾಘವೇಂದ್ರ ಅವರು,  ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು.

ಬೆಳಗ್ಗೆ ೧೧ ಗಂಟೆಗೆ ೧೧,೩೮೦ ಮತಗಳಿಂದ ಮುಂದಿದ್ದರೆ ೧೨ ಗಂಟೆಗೆ ೧ ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. ೧೨.೨೦ ಕ್ಕೆ ರಾಘವೇಂದ್ರ ಅವರು ಸುಮಾರು ೫ ಲಕ್ಷ ೨೦ ಸಾವಿರ ಮತಗಳನ್ನು ಪಡೆದು ೧.೫೦ ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. ೧ ಗಂಟೆಗೆ ೧.೮೬ ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು.  ಪ್ರತಿ ಸುತ್ತಿನಲ್ಲಿಯೂ ಬಿ.ವೈ. ರಾಘವೇಂದ್ರ ಅವರು ತಮ್ಮ ಸಮೀಪ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಹೆಚ್ಚು ಮತಗಳನ್ನು ಕಾಯ್ದುಕೊಂಡು ೨. ೪೩, ೭೧೫    ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಅವರು ಒಟ್ಟು ೭, ೭೮, ೭೨೧ ಮತಗಳನ್ನು ಪಡೆದರೆ, ಕಾಂಗ್ರೆಸ್‌ ಪಕ್ಷದ ಗೀತಾ ಶಿವರಾಜ್ ಕುಮಾರ್ ಅವರು ೫, ೩೫೦೦೬ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇನ್ನು ಬಿಜೆಪಿಯಿಂದ ಬಂಡಾಯವೆದ್ದು ರಾಷ್ಟ್ರ ಭಕ್ತರ ಬಳಗದಿಂದ ಸ್ಪರ್ಧಿಸಿ ರಾಷ್ಟ್ರದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದರು. ಅವರು ಕೊನೆಗೆ ಕೇವಲ ೩೦೦೫೦ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದು ತೃಪ್ತಿ ಪಡೆಬೇಕಾಯಿತು.

ಕುತೂಹಲದ ಸಂಗತಿ ಅಂದ್ರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲು ಬಿಜೆಪಿ ಲೀಡ್‌ ಪಡೆದುಕೊಂಡಿದೆ. ಶಿವಮೊಗ್ಗ ನಗರದಿಂದ ೫೦ ಸಾವಿರ ಲೀಡ್, ಸೊರಬದಿಂದ ೧೮ ಸಾವಿರ, ಸಾಗರ ೨೦, ಶಿಕಾರಿಪುರ ೧೨ ಸಾವಿರ, ಶಿವಮೊಗ್ಗ ಗ್ರಾಮಾಂತರ ೩೦ ಸಾವಿರ, ತೀರ್ಥಹಳ್ಳಿ ೨೪ ಸಾವಿರ, ಬೈಂದೂರು ೫೧ ಸಾವಿರ, ಭದ್ರಾವತಿಯಲ್ಲಿ ೬ ಸಾವಿರ ಲೀಡ್ ಬಂದಿದೆ. ಇದು ಬಿವೈಆರ್‌ ಅವರ ಭರ್ಜರಿ ಗೆಲುವಿಗೆ ದೊಡ್ಡ ಸಹಕಾರ ನೀಡಿದೆ.

ಸಂಸದ ಬಿ.ವೈ. ರಾಘವೇಂದ್ರ ಅವರು  ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ ೨.೦೯ ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಕುಟುಂಬದ, ಕಾರ್ಯಕರ್ತರು ಪಕ್ಷದ ಬಗ್ಗೆ ಹಗುರ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಾಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟರು.

ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಅಣ್ಣಾಮಲೈ ಸೋತಿರಬಹುದು. ತಮಿಳುನಾಡಿನಲ್ಲಿ ಉತ್ತಮ ಜನಾಭಿಪ್ರಾಯ ಮೂಡಿಸಿದ್ದಾರೆ. ಶಿವಮೊಗ್ಗಕ್ಕೂ ಬಂದು ನಮ್ಮ ಗೆಲುವಿಗೆ ಶಕ್ತಿ ತುಂಬಿದ್ದಾರೆ. ನನಗೆ ಮತ ಹಾಕಲು ಯುವಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾqಡುತ್ತೇನೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ ಎಂದರು.

……………………………….
ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ. ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.
-ಬಿ.ವೈ. ರಾಘವೇಂದ್ರ, ಸಂಸದ
………………….

ಬಿ.ವೈ.ರಾಘವೇಂದ್ರ, ತಾಲೂಕುವಾರು ಮುನ್ನಡೆ

ಭದ್ರಾವತಿ – 84,208

ಶಿವಮೊಗ್ಗ – 1,06,243

ಶಿವಮೊಗ್ಗ ಗ್ರಾಮಾಂತರ – 1,06,269

ಸಾಗರ – 95,209

ಸೊರಬ – 88,170

ಶಿಕಾರಿಪುರ – 87,153

ತೀರ್ಥಹಳ್ಳಿ – 92,993

ಬೈಂದೂರು – 1,15,486

ಅಂಚೆಮತಗಳು – 2,990
………………………………………………
ಒಟ್ಟು ಮತಗಳು –  7,78,721

RELATED ARTICLES
- Advertisment -
Google search engine

Most Popular

Recent Comments