ಡಿ.೨೭ರಿಂದ ೨೯ರವರೆಗೆ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ : ಬಿ.ವೈ.ರಾಘವೇಂದ್ರ

ಶಿವಮೊಗ್ಗ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ಯಾತ್ರೆ ಡಿ.೨೭ರಂದು ಜಿಲ್ಲೆಗೆ ಪ್ರವೇಶಿಸಲಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಾಗಲಿದೆ ಎಂದು ಶಾಸಕ ಬಿ.ವೈ. ರಾಘ ವೇಂದ್ರ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧೆಡೆ ಸಮಾವೇಶಗಳ ಮೂಲಕ ಜಿಲ್ಲೆ ಸುಮಾರು ೨ ಲಕ್ಷ ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳನ್ನು ಈ ಯಾತ್ರೆ ನೇರವಾಗಿ ತಲುಪಲಿದೆ. ರಾಜ್ಯದಲ್ಲಿ ಯಶಸ್ವಿಯಾಗಿ ಸಾಗುತ್ತಿ ರುವ ಪರಿವರ್ತನಾ ಯಾತ್ರೆ ಡಿ.೨೭ ರಂದು ಶಿಕಾರಿಪುರಕ್ಕೆ ಆಗಮಿಸಲಿದ್ದು, ಅಂದು ಮಧ್ಯಾಹ್ನ ೩ ಗಂಟೆಗೆ ಸಮಾವೇಶ ಜರುಗಲಿದೆ. ಅಂದು ಸಂಜೆ ಯಾತ್ರೆಯು ಸೊರಬಕ್ಕೆ ಸಾಗಲಿದ್ದು, ೬ ಗಂಟೆಗೆ ಇಲ್ಲಿನ ಬಸ್‌ಸ್ಟಾಂಡ್ ಬಳಿಯ ಮೈದಾನ ದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಡಿ.೨೮ರ ಬೆಳಿಗ್ಗೆ ೧೧ ಗಂಟೆಗೆ ಸಾಗ ರಕ್ಕೆ ಯಾತ್ರೆ ಸಾಗಲಿದ್ದು, ಇಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳ ಲಾಗಿದೆ. ಅಂದು ಮಧ್ಯಾಹ್ನ ೩ ಗಂಟೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹರಮಘಟ್ಟದಲ್ಲಿ ಪಕ್ಷದ ಸಮಾವೇಶ ನಡೆಯುವುದು. ಅಂದು ಸಂಜೆ ೬ ಗಂಟೆಗೆ ಶಿವಮೊಗ್ಗಕ್ಕೆ ಯಾತ್ರೆ ಆಗಮಿಸಲಿದ್ದು, ಎನ್‌ಇಎಸ್ ಮೈದಾನದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನವರ ನೇತೃತ್ವದಲ್ಲಿ ಸಮಾವೇಶ ನಡೆಯುವುದು ಎಂದರು.
ಡಿ.೨೯ರ ಬೆಳಿಗ್ಗೆ ೧೧ ಗಂಟೆಗೆ ಪರಿವರ್ತನಾ ಯಾತ್ರೆ ತೀರ್ಥಹಳ್ಳಿ ತಲುಪಲಿದ್ದು, ಇಲ್ಲಿನ ಕ್ರೀಡಾಂಗಣ ದಲ್ಲಿ ಸಮಾವೇಶ ಇರುವುದು. ಜ.೨ರ ಮಧ್ಯಾಹ್ನ ೩ ಗಂಟೆಗೆ ಯಾತ್ರೆಯು ಭದ್ರಾವತಿಗೆ ಆಗಮಿಸಲಿದ್ದು, ಇಲ್ಲಿನ ಕನಕ ಮಂಟಪದಲ್ಲಿ ಬಿಜೆಪಿ ಸಮಾವೇಶ ನಡೆಯುವುದಾಗಿ ತಿಳಿಸಿದರು.
ನ.೨ರಿಂದ ಪ್ರಾರಂಭವಾದ ಈ ಯಾತ್ರೆ ಈಗಾಗಲೇ ೧೨೩ ವಿಧಾನ ಸಭಾ ಕ್ಷೇತ್ರಗಳನ್ನು ತಲುಪಿದೆ. ಜ. ೨೭ಕ್ಕೆ ರಾಜ್ಯದ ಎಲ್ಲಾ ೨೨೪ ಕ್ಷೇತ್ರಗಳ ಪ್ರವಾಸ ಪೂರೈಸಲಿದ್ದು, ಸಮಾ ರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಪರಿವರ್ತನಾ ಯಾತ್ರೆ ಬಗ್ಗೆ ವಿವರಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಮ್ಮೆ ದೇಶದ ೧೭ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇತ್ತು. ಈಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ದೇಶದ ೧೯ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹೊಂದುವ ಮೂಲಕ ದಾಖಲೆ ನಿರ್ಮಿಸಿದೆ. ಈ ವಿಜಯಯಾತ್ರೆ ಕರ್ನಾಟಕಕ್ಕೂ ಮುಂದುವರೆಯ ಲಿದ್ದು, ರೈತ ವಿರೋಧಿ ಸಿದ್ದರಾ ಮಯ್ಯ ಸರ್ಕಾರವನ್ನು ಕೆಳಕ್ಕಿಳಿಸಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಎಸ್. ದತ್ತಾತ್ರಿ, ಡಿ.ಎಸ್. ಅರುಣ್, ಕೆ.ಜಿ. ಕುಮಾರ ಸ್ವಾಮಿ, ಎಂ. ಶಂಕರ್, ಮಧು ಸೂದನ್, ಚನ್ನಬಸಪ್ಪ, eನೇಶ್ವರ್, ಬಿಳಕಿ ಕೃಷ್ಣಮೂರ್ತಿ ಮತ್ತಿತರರಿದ್ದರು.