ಶಿವಮೊಗ್ಗ: ನಗರದ ಎಎ ವೃತ್ತದ ಬಳಿ ಗುರುವಾರ ನಂದಿನಿ ವಾಹನದ ಚಾಲಕ ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದಾಗ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಮೋಹನ್ ಹಾಗೂ ಸಿಪಿಸಿ ಕಿರಣ್ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಾಹನಕ್ಕೆ Defective Number plate ಅಳವಡಿಸಿರುವುದು ಮತ್ತು ವಾಹನ ಚಾಲನಾ ಪರವಾನಿಗೆ ಇಲ್ಲದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡುಬಂದಿತ್ತು.
ನಂತರ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ನಂದಿನಿ ಹಾಲಿನ ವಾಹನದ ಮಾಲೀಕ ಟಿಪ್ಪು ನಗರದ ಧನುಷ್ (35) ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
ಆಗ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, ಇಂದು (ಶನಿವಾರ) 4ನೇ ಎಸಿಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯ ವಾದ-ವಿವಾದ ಅಲಿಸಿ ವಾಹನದ ಮಾಲೀಕನಾದ ಧನುಷ್ ನಿಗೆ ರೂ 25,500 ದಂಡ ವಿಧಿಸಿರುತ್ತಾರೆ.