ಅಕ್ಕಿ ಗಿರಣಿಗಳು ಸಂಕಷ್ಟ ಎದುರಿಸುತ್ತಿವೆ ರಾಜ್ಯಮಟ್ಟದ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ

ಶಿವವಗ್ಗ : ಅಕ್ಕಿ ಗಿರಣಿಗಳು ಪ್ರಸ್ತುತ ದಿನಗಳಲ್ಲಿ ಸಂಕಷ್ಟವನ್ನು ಎದುರಿಸುತ್ತಿವೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಂದು ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಸಿಹಿಮೊಗೆ ಹೆಸರಿನಲ್ಲಿ ನಡೆಯುತ್ತಿರುವ ಅಕ್ಕಿ ಗಿರಣಿ ದಾರರ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಿಗೆ ಹೋಲಿ ಸಿದರೆ ಅಕ್ಕಿ ಗಿರಣಿಗಳು ಇಂದು ಸಂಕಷ್ಟ ವನ್ನು ಎದುರಿಸುತ್ತಿವೆ ಎಂದರು.
ತಾಂತ್ರಿಕತೆಯ ಹಿನ್ನೆಲೆಯಲ್ಲಿ ಮತ್ತು ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿರುವುದು ಅಕ್ಕಿ ಗಿರಣಿ ಗಳು ಸಂಕಷ್ಟ ಎದುರಿಸಲು ಕಾರಣ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಅಕ್ಕಿ ಗಿರಣಿಗಳ ಸಂಖ್ಯೆ ಈ ಎಲ್ಲಾ ಕಾರಣಗಳಿಂದ ಕಡಿಮೆಯಾಗುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ೧೦೦ಕ್ಕೂ ಅಧಿಕ ಅಕ್ಕಿ ಗಿರಣಿಗಳಿದ್ದವು. ಆದರೆ ಇಂದು ಬೆರಳೆಣಿಕೆಯಷ್ಟು ಮಾತ್ರ ಅಕ್ಕಿ ಗಿರಣಿಗಳನ್ನು ಕಾಣುವಂತಾಗಿದೆ ಎಂದ ಅವರು, ಅಕ್ಕಿ ಗಿರಣಿ ಮಾಲೀ ಕರಿಗೆ ಆರ್ಥಿಕ ಬಲವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಅಕ್ಕಿ ಗಿರಣಿಗಳು ಉಳಿಯುವುದು ಕಷ್ಟಸಾಧ್ಯ ವಾಗುತ್ತದೆ ಎಂದರು.
ಭಾರತ ಕೃಷಿ ಪ್ರಧಾನವಾದ ದೇಶ. ವಿಶ್ವದಲ್ಲಿಯೇ ಭಾರತ ಅತೀ ಹೆಚ್ಚು ಭತ್ತವನ್ನು ಹಾಗೂ ಅಕ್ಕಿಯನ್ನು ಉತ್ಪಾ ದನೆ ಮಾಡುವಂತಹ ರಾಷ್ಟ್ರವಾಗಿದೆ. ಕರ್ನಾಟಕ ಸೇರಿದಂತೆ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಭತ್ತ ಬೆಳೆಯ ಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯು ವಂತಹ ಪ್ರದೇಶಗಳು ಕಡಿಮೆ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿವವಗ್ಗ ಜಿಲ್ಲೆ ರಾಜ್ಯಕ್ಕೆ ಭತ್ತದ ಕಣಜವಾಗಿತ್ತು. ಆ ಮಟ್ಟದಲ್ಲಿ ಜಿಲ್ಲೆಯಲ್ಲಿ ರೈತರು ಭತ್ತ ಬೆಳೆಯು ತ್ತಿದ್ದರು. ಆದರೆ ಇಂದು ಭತ್ತ ಬೆಳೆ ಯುವವರ ಸಂಖ್ಯೆ ಕ್ಷೀಣಿಸಿದೆ. ಇದರಿಂದಾಗ ಜಿಲ್ಲೆಯಲ್ಲಿ ಭತ್ತದ ಉತ್ಪಾದನೆ ಕಡಿಮೆಯಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಅಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ. ಆದ್ದ ರಿಂದ ಭತ್ತದ ಬೆಳೆ ಕಡಿಮೆ ಯಾಗಬಾರದು ಎಂದರು.
ನಾನೂ ಸಹ ಒಂದು ಕಾಲದಲ್ಲಿ ರೈಸ್‌ಮಿಲ್ ಮಾಲೀಕನಾಗಿದ್ದೆ. ಅಲ್ಲದೆ ರೈಸಮಿಲ್ ಮಾಲೀಕರ ಸಂಘದ ಅಧ್ಯಕ್ಷನಾಗಿ ಎರಡು ವರ್ಷ ಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. ಇದ ರಿಂದಾಗಿ ರೈಸ್‌ಮಿಲ್ ಮಾಲೀ ಕರ ಸಮಸ್ಯೆಗಳೇನು? ಕಷ್ಟಗಳೇನು ಎಂಬುದನ್ನು ಅರಿತಿದ್ದೇನೆ. ಇಂದು ನಡೆಯುತ್ತಿರುವ ರಾಜ್ಯಮಟ್ಟದ ಈ ಸಮ್ಮೇಳನದಲ್ಲಿ ಅಕ್ಕಿ ಗಿರಣಿ ಮಾಲೀಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳುವಂತಾಗಲಿ ಎಂದರು.
ವಿಧಾನಪರಿಷತ್‌ನ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ಪ್ರಸ್ತುತ ದಿನಮಾನ ಗಳಲ್ಲಿ ಸಣ್ಣ ಸಣ್ಣ ಅಕ್ಕಿ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿದೆ. ಏಕೆಂದರೆ ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಇಂತಹ ಗಿರಣಿಗಳು ನಡೆಸುವುದು ಸಾಧ್ಯವಿಲ್ಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರು ಗಳಾದ ಎಸ್.ರುದ್ರೇಗೌಡ, ಕೆ.ಬಿ. ಆಶೋಕ್‌ನಾಯಕ್, ಮಾಜಿ ಶಾಸಕ ಬಿ.ವೈ.ರಾಘವೇಂದ್ರ, ಅಕ್ಕಿ ಗಿರಣಿ ಮಾಲೀಕರ ಸಂಘದ ಗೌರವಾಧ್ಯಕ್ಷ ಹೆಚ್.ಎಸ್.ರುದ್ರಸ್ವಾಮಿ, ಅಧ್ಯಕ್ಷ ಹೆಚ್.ನಾಗೇಶ್, ಸುನಿಲ್‌ಶೆಟ್ಟಿ, ಗಂಗಾವತಿ ಶಾಸಕ ಪರಣ್ಣಮುನವಳ್ಳಿ ಮೊದಲಾದವರಿದ್ದರು.

SHARE
Previous article06 OCT 2018
Next article08 OCT 2018

LEAVE A REPLY

Please enter your comment!
Please enter your name here