Sunday, October 13, 2024
Google search engine
Homeಅಂಕಣಗಳುಲೇಖನಗಳುಗ್ರಾಪಂ ವ್ಯಾಪ್ತಿಯಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯ

ಗ್ರಾಪಂ ವ್ಯಾಪ್ತಿಯಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯ

ಶಿವಮೊಗ್ಗ : ದೇಶದಲ್ಲಿ ಸುಮಾರು ೧.೫೦ಲಕ್ಷ ಗ್ರಾಮ ಪಂಚಾಯಿತಿ ಗಳಿದ್ದು, ಅವುಗಳಲ್ಲಿ ಸುಮಾರು ೧ಲಕ್ಷ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ವತಿಯಿಂದ ಬ್ರಾಡ್‌ಬ್ಯಾಂಡ್ ಸೌಲಭ್ಯ ಒದಗಿಸ ಲಾಗಿದ್ದು, ಉಳಿದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಸಂವಹನ ಮತ್ತು ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹ ಹೇಳಿದರು.
ಅವರು ಇಂದು ಭಾರತ ಸಂಚಾರ ನಿಗಮವು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸ ಲಾಗಿದ್ದ ರಾಜ್ಯದ ಮೊದಲ ೪ಜಿ ಮೊಬೈಲ್ ಟವರ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಶೀಘ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಈ ೪ಜಿ ಮೊಬೈಲ್ ಟವರ್‌ಗಳನ್ನು ರಾಜ್ಯದ ಆಯ್ದ ೫೪೦ಸ್ಥಳಗಳಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ ಎಂದರು.
೨೦೧೪ರಿಂದೀಚೆಗೆ ದೇಶದ ಪ್ರಗತಿಯ ಗತಿ ಬದಲಾಗಿದೆ. ಡಿಜಿಟಲ್ ಇಂಡಿಯಾದಂತಹ ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿಗೊಂಡು ಜನಪ್ರಿಯತೆ ಗಳಿಸಿವೆ. ಒಂದು ಹಂತದಲ್ಲಿ ವಿಶ್ವದಲ್ಲಿ ಮುಂದುವರೆದಿರುವ ಅಮೇರಿಕಾ, ಚೀನಾದಂತಹ ರಾಷ್ಟ್ರಗಳಲ್ಲಿ ಬಳಸಲಾಗುತ್ತಿರುವ ಮೊಬೈಲ್ ಸೇವೆಗಳನ್ನು ಭಾರತೀಯರು ಬಳಸಲು ಸಾದ್ಯವಾಗಿದೆ. ಖಾಸಗಿ ಟೆಲಿಕಾಂ ಸಂಸ್ಥೆಗಳ ಭಾರೀ ಸ್ಪರ್ಧೆಗಳ ನಡುವೆಯೂ ಭಾರತ ಸಂಚಾರ ನಿಗಮವು ಉನ್ನತ ಸಾಧನೆ ಮಾಡಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನವದೆಹಲಿ ಮಾರುಕಟ್ಟೆ ವಿಭಾಗದ ನಿರ್ದೇಶಕ ಆರ್.ಕೆ.ಮಿತ್ತಲ್, ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್, ರಾಜ್ಯವಲಯದ ಪ್ರಧಾನ ವ್ಯವಸ್ಥಾಪಕ ಆರ್.ಮಣಿ, ಚೀಫ್ ಜನರಲ್ ಪೋಸ್ಟ್ ಮಾಸ್ಟರ್ ಚಾರ್ಲ್ ಲೋಬೊ ಹಾಗೂ ಸೌತ್ ವೆಸ್ಟ್ರನ್ ರೈಲ್ವೇಯ ಜನರಲ್ ಮ್ಯಾನೇಜರ್ ಎ.ಕೆ.ಗುಪ್ತಾ ಸೇರಿದಂತೆ ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments