ಭದ್ರಾವತಿ: ಭಾನುಪ್ರಕಾಶ್ ಭಾವಚಿತ್ರಕ್ಕೆ ಬಿಜೆಪಿ ಭದ್ರಾವತಿ ಮಂಡಲದ ಪ್ರಮುಖರು ಪುಷ್ಪ ನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡಲದ ಅಧ್ಯಕ್ಷ ಧರ್ಮಪ್ರಸಾದ್ ಅವರು, ಭಾನುಪ್ರಕಾಶ್ ಕರ್ನಾಟಕದ ಪ್ರತಿಯೊಬ್ಬ ಕಾರ್ಯಕರ್ತರ ಪ್ರೀತಿಯ ಬಾನುಜಿ ಇಂದು ನಮ್ಮನ್ನು ಅಗಲಿದ್ದು ನೋವಿನ ಸಂಗತಿ ಎಂದು ಹೇಳಿದರು.
ಬಾನುಜಿಯವರಲ್ಲಿದ್ದ ಸರಳತೆ, ಪ್ರತಿಯೊಬ್ಬ ಕಾರ್ಯಕರ್ತನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ರೀತಿ, ಯಾವುದೇ ಸಂಘಟನೆಯ ಕೆಲಸವಿರಲಿ ಅವರು ಅಚ್ಚುಕಟ್ಟಾಗಿ ಯೋಜನಾ ಬದ್ಧವಾಗಿ ಮಾಡುತ್ತಿದ್ದ ರೀತಿ ಎಲ್ಲ ಕಾರ್ಯಕರ್ತರಿಗೂ ಮಾದರಿ ಎಂದರು.
ಸಂಘಟನೆಯ ವೈಚಾರಿಕ ಬದ್ಧತೆ ಮತ್ತು ಸ್ಪಷ್ಟತೆ ಬಾನುಜಿ ಅವರಲ್ಲಿ ಇದ್ದಂತಹ ಅತಿ ದೊಡ್ಡ ಶಕ್ತಿ. ಬಿಜೆಪಿಯ ಹಿರಿಯ ಕಾರ್ಯಕರ್ತರಿಂದ ಇತ್ತೀಚಿನ ಬೂತ್ ಮಟ್ಟದ ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸುತ್ತಿದ್ದಂತಹ ಸಹೃದಯರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಂಡಲದ ಹಿರಿಯ ಪ್ರಮುಖ ಕಾರ್ಯಕರ್ತ ಎಸ್ಎನ್ ಬಾಲಕೃಷ್ಣ, ವಿಧಾನಸಭಾ ಅಭ್ಯರ್ಥಿಯಾಗಿದ್ದ ಮಂಗೋಟೆ ರುದ್ರೇಶ್. ನಗರಸಭಾ ಸದಸ್ಯ ವಿ. ಕದಿರೇಶ್. ಜಿ. ಆನಂದ್ ಕುಮಾರ್. ಕೂಡ್ಲಿಗೆರೆ ಹಾಲೇಶ್. ತೀರ್ಥಯ್ಯ. ರಾಮಲಿಂಗಯ್ಯ. ಸಿಮೆಂಟ್ ಮಂಜುನಾಥ್. ವೆಂಕಟೇಶ್, ನರಸಿಂಹಾಚಾರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್, ಅಣ್ಣಪ್ಪ, ಹಾಗೂ ಪಕ್ಷದ ಹಾಗೂ ಸಂಘ ಪರಿವಾರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.