ಭದ್ರಾ ಜಲಾನಯನ ಪ್ರದೇಶದಲ್ಲಿ ಮರ ಬೆಳೆಸಿ : ಕೆ.ಟಿ. ಗಂಗಾಧರಪ್ಪ

ಶಿವಮೊಗ್ಗ : ಭದ್ರಾ ಜಲಾಶಯದಿಂದ ೯ ಜಿಲ್ಲೆಗಳಿಗೆ ನೀರನ್ನು ನೀಡಲಾಗುತ್ತಿದೆ. ಆದರೆ ನೀರನ್ನು ಅನುಭವಿಸುತ್ತಿದ್ದಾರೆಯೇ ಹೊರತು ಅದರ ಉತ್ಪಾದನೆ ಬಗ್ಗೆ ಯಾರೂ ಕೂಡಾ ಚಿಂತಿಸುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರಪ್ಪ ಹೇಳಿದರು.
ಇಂದು ಕಾಡಾ ಕಛೇರಿಯ ಆವರಣ ದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಏರ್ಪಡಿಸಿದ್ದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಸಸಿ ವಿತರಿಸಿ ಮಾತನಾ ಡಿದ ಅವರು, ಭದ್ರಾ ಜಲಾನಯನ ಪ್ರದೇಶ ಇಂದು ಬರಡಾಗಿದೆ. ಜಲಾಶ ಯಕ್ಕೆ ನೀರು ಬರಬೇಕಾದರೆ ಮರಗಳ ಅವಶ್ಯಕತೆ ಇದೆ. ಆದ್ದರಿಂದ ನಾಲೆ ಹಾದು ಹೋಗಿರುವಂತಹ ಇಕ್ಕೆಲಗಳಲ್ಲಿ ಮರ ಗಳನ್ನು ಬೆಳೆಸುವಂತಹ ಕಾರ್ಯವಾ ಗಬೇಕು. ಮರ ಇದ್ದರೆ ಮಳೆ ಹೆಚ್ಚಾಗುತ್ತದೆ. ಇದನ್ನು ಅರಿತು ಮರಗಳನ್ನು ಬೆಳೆಸಬೇಕೆಂದರು.
ಕೇವಲ ನಾಲೆಯ ಏರಿ ಮೇಲೆ ಮರಗಳನ್ನು ಬೆಳೆಸಿದರೆ ಸಾಲದು, ಶಾಲೆಯ ಆವರಣದಲ್ಲಿ ಆಸ್ಪತ್ರೆಗಳ ಆವರಣದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚು ಹೆಚ್ಚು ಮರವನ್ನು ಬೆಳೆಸಬೇಕು. ಕಾವೇರಿ ನದಿ ಪಾತ್ರದಲ್ಲಿ ಮರಗಳನ್ನು ಬೆಳೆಸಿರುವಂತೆ ಇಲ್ಲಿಯೂ ಸಹ ಮರಗಳನ್ನು ಬೆಳೆಸ ಬೇಕೆಂದು ಸಲಹೆ ನೀಡಿದರು.
ಬರ ಉಂಟಾಗಲು ನೀಲಗಿರಿಯೂ ಸಹ ಒಂದು ಕಾರಣವಾಗಿದೆ. ಆದರೂ ಸಹ ಇಂದಿಗೂ ಅರಣ್ಯ ಇಲಾಖೆ ನರ್ಸರಿಗಳಲ್ಲಿ ನೀಲಗಿರಿ ಸಸಿಗಳು ಇವೆ ಎಂದ ಅವರು, ನೀಲಗಿರಿಯಿಂದ ಮಳೆ ಕಡಿಮೆಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ೪೦ ವರ್ಷಗಳು ಬೇಕಾಯಿತು. ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ನೀಲಗಿರಿಯನ್ನು ಬ್ಯಾನ್ ಮಾಡಿದೆ. ಸಾಂಪ್ರದಾಯಿಕ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕೆಂದರು.
ಹಣ್ಣು, ಹಂಪಲುಗಳು ಸಿಗುವಂತಹ ಮರಗಳನ್ನು ಬೆಳೆಸುವುದರಿಂದ ಕಾಡು ಪ್ರಾಣಿಗಳೂ ಕೂಡಾ ನಾಡಿನೆಡೆ ಮುಖ ಮಾಡುವುದಿಲ್ಲ. ಇದನ್ನು ಎಲ್ಲರೂ ಅರಿ ಯಬೇಕಾಗಿದೆ. ಮರಗಳನ್ನು ಬೆಳೆಸಲು ಜನತೆ ಮುಂದೆ ಬರಬೇಕೆಂದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ವೇದಾ ವಿಜಯ್‌ಕುಮಾರ್,ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್. ಬಸವ ರಾಜಪ್ಪ, ಹೆಚ್.ಸಿ. ಬಸವರಾಜಪ್ಪ, ಅಂಬಾಡಿ ಮಾಧವ್, ಅರಕೆರೆ ವಿಶ್ವ ನಾಥ್, ಕೆ.ರಂಗನಾಥ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here