ಬೆಂಗಳೂರು: ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಸೆಲೆಬ್ರಿಟಿಗಳು, ಗಣ್ಯವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಶಾಲೆಗಳಲ್ಲಿ ಒಂದೇ ತೆರೆನಾದ ಮಕ್ಕಳು ಇರುವುದಿಲ್ಲ. ಪೋಷಕರಿಂದ ತಿರಸ್ಕರಿಸಲ್ಪಟ್ಟ, ತಾಯಿ ಅಥವಾ ತಂದೆ ಇಲ್ಲದ ಇತ್ಯಾದಿ ಮಕ್ಕಳು ದಾಖಲು ಮಾಡಲಾಗಿರುತ್ತದೆ. ಈ ಮಕ್ಕಳು ಮನನೊಂದವರಾಗಿರುವುದರಿಂದ ಇವರ ಮನಸ್ಸಿಗೆ ಘಾಸಿಯುಂಟಾಗುತ್ತದೆ ಎಂಬುದು ಇದರ ಹಿನ್ನೆಲೆಗೆ ಕಾರಣವಾಗಿದೆ.
ಎಲ್ಲ ಮಕ್ಕಳ ಮನಸ್ಸಿಗೆ ಖುಷಿ ತರುವಂತಹ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಮನಸ್ಸನ್ನು ಸಧೃಡ ಹಾಗೂ ಆಹ್ಲಾದಕರವಾಗುವಂತೆ ಪ್ರೋತ್ಸಾಹಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.