Saturday, October 12, 2024
Google search engine
Homeಇ-ಪತ್ರಿಕೆಅಮಿತ್ ಶಾ ಭೇಟಿ ಮಾಡಿ ಅಭಿನಂದಿಸಿದ  ಬಿ.ವೈ.ವಿಜಯೇಂದ್ರ

ಅಮಿತ್ ಶಾ ಭೇಟಿ ಮಾಡಿ ಅಭಿನಂದಿಸಿದ  ಬಿ.ವೈ.ವಿಜಯೇಂದ್ರ

ದಿಲ್ಲಿ: ದೇಶದ ಸುಭದ್ರತೆಗಾಗಿ ದಿಟ್ಟ ಹೆಜ್ಜೆಗಳನ್ನಿಟ್ಟು ಇತಿಹಾಸ ನಿರ್ಮಿಸಿ ಮೋದಿ ಜೀ ಅವರ ಸಂಪುಟಕ್ಕೆ ಮತ್ತೆ ಸೇರ್ಪಡೆಗೊಂಡ ಗೃಹ ಸಚಿವ  ಅಮಿತ್ ಶ ಅವರನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ಅವರು  ನವದೆಹಲಿಯ ಅವರ ಕಛೇರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.

 ಇದೇ ಸಂದರ್ಭದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕರ್ನಾಟಕದ ಫಲಿತಾಂಶದ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು

 ರಾಜ್ಯದ ಜನತೆಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸಿದರು.

 ರಾಜ್ಯದಲ್ಲಿ ಜನವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ  ಹೋರಾಟ ರೂಪಿಸಿರುವ  ಕುರಿತು ವಿವರ ನೀಡಲಾಯಿತಲ್ಲದೇ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅವರಿಂದ ಮಾರ್ಗದರ್ಶನ ಕೊರಿದರು.

RELATED ARTICLES
- Advertisment -
Google search engine

Most Popular

Recent Comments