ಸೊರಬ: ತಾಲ್ಲೂಕಿನ ಜೋಳದ ಗುಡ್ಡ, ಹೆಚ್ಚೆ, ಕಡಸೂರು, ತಟ್ಟಿಕೆರೆ, ಹಿರೇನಲ್ಲೂರು, ಸೈದೂರು ಸೇರಿದಂತೆ ವಿವಿಧೇಡೆ ಪ್ರವಾಹ ಉಂಟಾದ ಪ್ರದೇಶಕ್ಕೆ ಗುರುವಾರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಕುಮಾರ ಬಂಗಾರಪ್ಪ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ತಾಲ್ಲೂಕಿನ ಮಂಡಗಳಲೇ ಮತ್ತು ತಾಳಗುಪ್ಪ ಭಾಗಗಳಲ್ಲಿ ವ್ಯಾಪಕ ಮಳೆಯಿಂದ ಗ್ರಾಮದ ತಗ್ಗು ಪ್ರದೇಶಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದನ್ನು ಖುದ್ದು ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೇ ಜಲಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ರಾಜ್ಯ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಸಿದರು.
ಈ ಸಮಯದಲ್ಲಿ ಪ್ರಮುಖರಾದ ಪ್ರಕಾಶ್ ತಲಕಾಲಕೊಪ್ಪ, ಹಕ್ಕರೆ ಮಲ್ಲಿಕಾರ್ಜುನ್, ದೇವೇಂದ್ರಪ್ಪ ಮಲ್ಲಿಕಾರ್ಜುನ್, ಆಗಸಹಳ್ಳಿ ಪ್ರಕಾಶ್, ಶಿವಕುಮಾರ್, ಗುರುಗೌಡ ಪಾಟೀಲ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದರು.
ನೆರೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ ಬಿ.ವೈ.ರಾಘವೇಂದ್ರ-ಕುಮಾರ ಬಂಗಾರಪ್ಪ: ನೊಂದ ಕುಟುಂಬಕ್ಕೆ ಶೀಘ್ರ ಪರಿಹಾರ
RELATED ARTICLES