‘ಕೊಟ್ಟ ಮಾತಿನಂತೆ ಹೆಚ್‌ಡಿಕೆ ನಡೆಯಲಿ’ ಸಾಲ ಮನ್ನಾಕ್ಕೆ ಆಯನೂರು ಮಂಜುನಾಥ್ ಒತ್ತಾಯ

ಶಿವಮೊಗ್ಗ : ರೈತರ ಸಾಲ ಮನ್ನಾ ವಿಷಯದಲ್ಲಿ ಎಚ್.ಡಿ. ಕುಮಾರ ಸ್ವಾಮಿಯವರು ಉತ್ತರಕುಮಾರ ನಾಗದೆ, ಕೊಟ್ಟ ಮಾತಿನಂತೆ ನಡೆದು ಕೊಳ್ಳಬೇಕೆಂದು ನೈಋತ್ಯ ಪದವೀ ಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ ನೂರು ಮಂಜುನಾಥ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಭಾರತದ ಉತ್ತರ ಕುಮಾರ ಅಂತಃಪುರದಲ್ಲಿ ಪೌರುಷದ ಹೇಳಿಕೆ ನೀಡುತ್ತಿದ್ದ. ಅದೇ ರೀತಿ ಜೆಡಿಎಸ್ ಅಂತಃಪುರದಲ್ಲಿ ಕುಮಾರಸ್ವಾಮಿ ಯವರು ಹೇಳಿಕೆ ನೀಡಿ ಈಗ ಬೆನ್ನು ತೋರಿಸುವ ಕೆಲಸ ಮಾಡುತ್ತಿರು ವುದು ಬೇಡ. ನಿಮ್ಮ ಬಳಿ ಸಾಲ ಮನ್ನಾ ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟು ಇಳಿಯಿರಿ. ಜನ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಾವು ಅದನ್ನು ಮಾಡಿ ತೋರಿಸು ತ್ತೇವೆ ಎಂದು ಸವಾಲು ಹಾಕಿದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ೫೦ ಸಾವಿರದವರೆಗಿನ ಸೊಸೈಟಿ ಸಾಲ ಮನ್ನಾ ಮಾಡಿತ್ತು. ಆ ಸಾಲವನ್ನು ಇನ್ನೂ ಸೊಸೈಟಿಗಳಿಗೆ ಸರ್ಕಾರ ನೀಡಿಲ್ಲ. ಇದರಿಂದಾಗಿ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಇದೀಗ ಮಳೆ ಬಂದು ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಹಣ ಬೇಕಿದೆ. ಆದರೆ ಸೊಸೈಟಿಗಳು ಹೊಸ ಸಾಲ ನೀಡುತ್ತಿಲ್ಲ. ಈಗ ಕುಮಾರಸ್ವಾಮಿ ಯವರು ಸಾಲ ಮನ್ನಾ ಮುಂದೂ ಡಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.
ಕುಮಾರಸ್ವಾಮಿಯವರ ಬಯ ಲಾಟ ಈಗ ರೈತ ಸಂಘಟನೆಗಳಿಗೂ ಗೊತ್ತಾಗಿದೆ. ಚುನಾಣಾ ಸಂದರ್ಭ ದಲ್ಲಿ ಜನರನ್ನು ಮರಳು ಮಾಡುವ ಸಲುವಾಗಿಯೇ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿರುದ್ಧ ದಿಕ್ಕಿಗೆ ಕುಮಾರಸ್ವಾಮಿ ಹೊರಟಿದ್ದಾರೆ. ಕಾಂಗ್ರೆಸ್ ಹೆಗಲ ಮೇಲೆ ಬಂದೂಕು ಇಟ್ಟು ರೈತರನ್ನು ಹೊಡೆಯಲು ಜೆಡಿಎಸ್ ಹವಣಿಸುತ್ತಿದೆ ಎಂದು ಟೀಕಿಸಿದರು.
ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮಾತ್ರವಲ್ಲದೆ, ಖಾಸಗಿ ಲೇವಾದೇವಿ ಗಾರರ ಬಳಿ ಮಾಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿ ದ್ದರು. ಈಗ ಬಹುಮತವಿಲ್ಲವೆಂದು ಓಡಿ ಹೋಗುವ ಯತ್ನ ಮಾಡು ತ್ತಿರುವುದು ಸರಿಯಲ್ಲ ಎಂದರು.
ಸಣ್ಣ, ಅತೀ ಸಣ್ಣ, ದೊಡ್ಡ ರೈತರು, ಸಾಲ ಇರುವ, ಸಾಲ ಇಲ್ಲದ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ, ಸಹಕಾರ ಬ್ಯಾಂಕ್‌ಗಳಲ್ಲಿ, ಖಾಸಗಿಯವರ ಬಳಿ ಸಾಲ ಇರುವ ರೈತರೆಂದು ವಿಂಗಡಣೆ ಮಾಡಿ ರೈತರನ್ನು ಒಡೆಯಲಾ ಗುತ್ತಿದೆ. ಕಾಫಿ ಪ್ಲಾಂಟರ್, ಶಾಸಕರು, ಸಂಸದರು, ಬೇರೆ ಉದ್ಯೋಗ ಮಾಡುತ್ತಿರುವವರನ್ನು ಹೊರಗಿಟ್ಟು ನಿಜವಾದ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ|| ಗಣೇಶ್ ಕಾರ್ಣಿಕ್, ಎಸ್.ದತ್ತಾತ್ರಿ, ಬಿಳಕಿ ಕೃಷ್ಣಮೂರ್ತಿ, ಪವಿತ್ರಾ ರಾಮಯ್ಯ, ಎನ್.ಜೆ.ರಾಜಶೇಖರ್ ಮೊದಲಾ ದವರಿದ್ದರು.