ಅಧಿವೇಶನ ಅವಧಿಯನ್ನು ವಿಸ್ತರಿಸಿ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹ

ಶಿವಮೊಗ್ಗ : ರಾಜ್ಯದ ಜನತೆಯ ಸಮಸ್ಯೆ ಕುರಿತು ಚರ್ಚೆ ನಡೆಸಲು ಹಾಗೂ ಅದಕ್ಕೆ ಪರಿಹಾರ ಕಂಡು ಕೊಳ್ಳುವ ದೃಷ್ಟಿಯಿಂದ ವಿಧಾನ ಮಂಡಲ ಅಧಿವೇಶನವನ್ನು ಕನಿಷ್ಟ ೧೫ ದಿನ ವಿಸ್ತರಣೆ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ವಿಧಾನಮಂಡಲ ಅಧಿವೇಶನ ಜು.೨ ರಿಂದ ೧೨ರವರೆಗೆ ನಡೆಯಲಿದೆ. ಅಧಿವೇಶನ ಆರಂಭವಾಗುವ ೭ ರಿಂದ ೧೦ ದಿನಗಳ ಮುಂಚಿತವಾಗಿ ಎಲ್ಲ ಶಾಸಕರಿಗೆ ನೋಟಿಸ್ ನೀಡಲಾಗು ತ್ತದೆ. ಆದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ದಕ್ಷ ಆಡಳಿತದಲ್ಲಿ ಇಲ್ಲಿಯವರೆಗೂ ಅಧಿವೇಶನಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಿಲ್ಲ ಎಂದು ದೂರಿದರು.
ಎಷ್ಟು ದಿನ ಸದನ ನಡೆಯುತ್ತದೆ. ಕಾರ್ಯಕಲಾಪದ ವಿವರ, ಪ್ರಶ್ನೋತ್ತರ, ಪ್ರಶ್ನೆಗಳಿಗೆ ಯಾವ ಮಂತ್ರಿ ಉತ್ತರಿಸುತ್ತಾರೆ ಎಂಬ ಆಧಾರದಲ್ಲಿ ಶಾಸಕರುಗಳು ಪ್ರಶ್ನೆ ಗಳನ್ನು ಕಳುಹಿಸಿಕೊಡುತ್ತಾರೆ. ಇದಕ್ಕೆ ವೇಳಾಪಟ್ಟಿ ನಿಗದಿಗೊಳಿಸಲಾಗು ತ್ತದೆ. ಆದರೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ೧೦ ದಿನ ಅಧಿವೇಶನವಿದ್ದರೂ ಕೇವಲ ೫ ದಿನ ಕಲಾಪ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆ ಇದೆ. ಈ ಕುರಿತು ಸರ್ಕಾರದ ಗಮನ ಸೆಳೆದು ಸದನದಲ್ಲಿ ಚರ್ಚೆ ನಡೆಸಿ, ಉತ್ತರ ಪಡೆಯ ಬೇಕಿದೆ. ಆದರೆ ಇದ್ಯಾವುದಕ್ಕೂ ಅವಕಾಶ ಇಲ್ಲವಾಗಿದೆ. ಹೊಸ ಸರ್ಕಾರದಲ್ಲಿ ಶಾಸಕರ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೆಚ್.ಡಿ.ಕೆ. ನೇರವಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಾಗಿ ಆಪಾದನೆ ಮಾಡಿ ರುವಂತಿದೆ. ಇದೊಂದು ಗಂಭೀರ ವಿಚಾರ. ಹಿಟ್ ಅಂಡ್ ರನ್ ಆಗಲು ಬಿಡಬಾರದು. ರೈತರಿಗೆ ಮೋಸ, ದ್ರೋಹ ಬಗೆದವರಿಗೆ ತಕ್ಕ ಶಿಕ್ಷೆಯಾ ಗಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಶ್ರೀನಾಥ್ ನಗರಗದ್ದೆ, ಅನಿತಾ ರವಿಶಂಕರ್, ಮಧುಸೂದನ್, ರತ್ನಾಕರ ಶೆಣೈ, ಹಿರಣ್ಣಯ್ಯ ಉಪಸ್ಥಿತರಿದ್ದರು.

SHARE
Previous article28 JUNE 2018
Next article29 JUNE 2018

LEAVE A REPLY

Please enter your comment!
Please enter your name here