ಶಿವಮೊಗ್ಗ : ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.೩೦ರಷ್ಟು ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರು ಏ.೧ರಿಂದಲೇ ಅನ್ವಯ ವಾಗುವಂತೆ ವೇತನ ಪಡೆಯಲು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಂದಕ್ಕೆ ಹೋಗುವ ಆತಂಕವಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಚುನಾವಣಾ ದೃಷ್ಟಿ ಯಿಂದಾಗಿ ರಾಜ್ಯ ಸರ್ಕಾರ ಸರ್ಕಾರಿ ನೌಕರರ ಮೂಲಭೂತ ಬೇಡಿಕೆಯಾದ ವೇತನ ಹೆಚ್ಚಳವನ್ನು ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಜಾರಿ ಮಾಡಿದೆ ಎಂದು ದೂರಿದರು.
ಮೇ ಮೊದಲ ವಾರದಲ್ಲಿ ಪರಿಷ್ಕೃತ ವೇತನ ಪಡೆಯಲು ಸರ್ಕಾರಿ ನೌಕರರ ಸಮುದಾಯವು ಕೇಂದ್ರ ಚುನಾವಣಾ ಆಯೋಗದ ಹಸಿರುನಿಶಾನೆಗೆ ಕಾಯು ವಂತಾಗಿದೆ. ಹೊಸ ವೇತನ ಶ್ರೇಣಿ ಏ.೧ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಮಾ.೧ರಂದು ತರಾತುರಿಯಲ್ಲಿ ಆದೇಶ ಹೊರಡಿಸಿದೆ ಎಂದರು.
ವೇತನದ ಫಿಟ್‌ಮೆಂಟ್ ಬುಕ್ ಸಹಿತ ಅಧಿಸೂಚನೆ ಹೊರಡಿಸುವುದು ವಿಳಂಬ ವಾಗಿದ್ದರಿಂದ ಇದೀಗ ಹಣಕಾಸು ಇಲಾಖೆ ಮಾದರಿ ನೀತಿ ಸಂಹಿತೆ ಹಿನ್ನೆಲೆ ಯಲ್ಲಿ ಚುನಾವಣಾ ಆಯೋಗದ ಅನು ಮತಿ ಕೋರಿದೆ. ಆಯೋಗ ಅನುಮತಿ ಸಿಗುವುದು ವಿಳಂಬವಾಗುವ ಸಾಧ್ಯತೆ ಇರುವುದರಿಂದ ಹಾಗೂ ವಿಧಾನಸಭಾ ಚುನಾವಣೆ ಮುಗಿದ ನಂತರ ವಿಧಾನ ಪರಿಷತ್ ಚುನಾವಣೆಗಳಿಗೆ ಅಧಿಸೂಚನೆ ಹೊರಡಲಿದ್ದು, ಸರ್ಕಾರಿ ನೌಕರರು ಪರಿಷ್ಕೃತ ವೇತನ ಪಡೆಯಲು ಸಾಕಷ್ಟು ತಿಂಗಳು ಕಾಯಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮಂಜೇಗೌಡರು ಪರಿಷ್ಕೃತ ವೇತನ ಜಾರಿಯಲ್ಲಿ ಸಾಕಷ್ಟು ನ್ಯೂನತೆಗಳಿ ದ್ದರೂ ಸಹ ರಾಜಕೀಯದ ಆಮಿಷಕ್ಕೆ ಒಳಗಾಗಿ ಪರಿಷ್ಕೃತ ವೇತನದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಅನುಮಾನವಿದೆ. ಸಹಿ ಹಾಕಿರುವುದರಿಂದ ಮಂಜೇಗೌಡರು ರಾಜ್ಯ ಸರ್ಕಾರಿ ನೌಕರರ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ಧರಾಮಯ್ಯ ಅವರು ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಹಚ್ಚಿ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಮುಖ್ಯ ಮಂತ್ರಿಗಳು ಸರ್ಕಾರಿ ನೌಕರರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಎಸ್. ದತ್ತಾತ್ರಿ, ಬಿ.ಆರ್. ಮಧು ಸೂದನ್, ರತ್ನಾಕರ ಶಣೈ, ದೇವರಾಜ್ ಹಿರಣ್ಣಯ್ಯ ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ವೇತನ ಏರಿಕೆ ವಿಳಂಬ ಸಾಧ್ಯತೆ : ಆಯನೂರು ಮಂಜುನಾಥ್ ಆರೋಪ
RELATED ARTICLES