ಶಿವಮೊಗ್ಗ : ನಗರದಲ್ಲಿ ಆಟೋ ಚಾಲಕರುಗಳು ಆಟೋ ಮೀಟರ್‍ಗಳನ್ನು ಬಳಸದೆ, ಹೆಚ್ಚಿನ ದರವನ್ನು ಕೇಳುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು.
ಸಾರ್ವಜನಿಕರು ಪ್ರಯಾಣಿಸುವ ಸಮಯದಲ್ಲಿ ಆಟೋಗಳಲ್ಲಿ ಮೀಟರ್ ಬಳಕೆ ಮಾಡುತ್ತಿರುವ ಬಗ್ಗೆ ತಪಾಸಣೆ ಮಾಡಿ, ಮೀಟರ್ ಬಳಕೆ ಮಾಡದೇ ಇದ್ದ ಆಟೋ ಚಾಲಕರ ವಿರುದ್ದ ಐಎಂವಿ ಕಾಯ್ದೆಯಡಿ ಒಟ್ಟು 100 ಪ್ರಕರಣಗಳನ್ನು ದಾಖಲಿಸಿ, 20 ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್.ಜಿ.ಕೆ ಐಪಿಎಸ್, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ-1 ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಪೆÇಲೀಸ್ ಅಧೀಕ್ಷಕರು-2 ಕಾರಿಯಪ್ಪ.ಎ.ಜಿ ಇವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ–ಬಿ ಡಿವೈಎಸ್‍ಪಿ ಸುರೇಶ್, ಉಪ ವಿಭಾಗ ಮೇಲ್ವಿಚಾರಣೆಯಲ್ಲಿ ಸಂತೋμï, ಪೆÇಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ಇವರ ನೇತೃತ್ವದಲ್ಲಿ, ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೆÇಲೀಸ್ ಠಾಣೆಯ ಪಿಎಸ್‍ಐ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
ಆಟೋ ಚಾಲಕರು ಕಡ್ಡಾಯವಾಗಿ ಆಟೋ ಮೀಟರ್‍ನ್ನು ಬಳಕೆ ಮಾಡುವಂತೆ ಅನುμÁ್ಠನ ಮಾಡುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯವಾಗಿದ್ದು, ಯಾವುದೇ ಆಟೋ ಚಾಲಕರು ಆಟೋ ಮೀಟರ್‍ನ್ನು ಬಳಕೆ ಮಾಡದೇ ಇದ್ದಲ್ಲಿ ಅಥವಾ ನಿರಾಕರಿಸಿದ್ದಲ್ಲಿ ಸಾರ್ವಜನಿಕರು ಪೆÇಲೀಸ್ ಇಲಾಖೆಗೆ ದೂರು ನೀಡುವುದು. ಸಾರ್ವಜನಿಕರ ದೂರಿನ ಮೇರೆಗೆ, ಆಟೋ ಮೀಟರ್ ಬಳಕೆ ಮಾಡದ ಆಟೋ ಚಾಲಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.