ಶಿವಮೊಗ್ಗ: ಹೊಳೆ ಸೇತುವೆ ಮೇಲೆ ಆಟೋ ಮತ್ತು ಬೈಕ್ ಡಿಕ್ಕಿ ಸಂಭವಿಸಿ ಯುವಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಚೆನ್ನಗಿರಿ ತಾಲೂಕಿನ ಬಸವನಹಳ್ಳಿ ಗ್ರಾಮದ ಯುವಕ ಅನಿಲ್ ಎಂದು ಗುರುತಿಸಲಾಗಿದೆ.
ಘಟನೆಯು ತಡರಾತ್ರಿ ಸಂಭವಿಸಿದ್ದು, ಯುವಕನ ತಲೆಗೆ ತೀವ್ರತರನಾದ ಪೆಟ್ಟು ಬಿದ್ದಿದೆ. ಆಟೋ ವಿದ್ಯಾನಗರದಿಂದ ಬರುತ್ತಿದ್ದರೆ, ಗಾಯಗೊಂಡ ಬೈಕ್ ಸವಾರ ಚೆನ್ನಗಿರಿಯಿಂದ ವಿದ್ಯಾನಗರದ ಕಡೆ ಹೊರಟಿದ್ದ ಸಂಚಾರಿಸುತ್ತಿದ್ದನು.
ಯುವಕನನ್ನು ನಗರದ ಮ್ಯಾಕ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.