Tuesday, October 8, 2024
Google search engine
Homeಅಂಕಣಗಳುಲೇಖನಗಳುವಿಧಾನಸಭೆ ಚುನಾವಣೆ : ೨೦೧೮

ವಿಧಾನಸಭೆ ಚುನಾವಣೆ : ೨೦೧೮

ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಲಾಗುವ ಶಿವಮೊಗ್ಗ ನಗರವು ಸಾಹಿತ್ಯಿಕವಾಗಿ, ಐತಿಹಾಸಿಕವಾಗಿ, ಸಾಂಸ್ಕೃತಿಕ ಹಾಗೂ ರಾಜಕೀಯ ವಾಗಿ ವಿಶಿಷ್ಟ ಸ್ಥಾನಮಾನ ಪಡೆದುಕೊಂಡಿದೆ.
ಇಲ್ಲಿನ ಪ್ರಮುಖ ನದಿಯಾದ ತುಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿರುವಂತೆಯೇ, ಶಿವಮೊಗ್ಗ ವಿಧಾನಸಭಾ ಕ್ಷೇತ್ರವು ರಾಜಕೀಯವಾಗಿ ಹಲವು ಸ್ಥಿತ್ಯಂತರ ಗಳನ್ನು ಪಡೆದುಕೊಂಡಿದೆ.
ಇದೀಗ ಮೇ ೧೨ರಂದು ರಾಜ್ಯ ವಿಧಾನಸಭೆಗೆ ನಡೆಯುವ ಚುನಾ ವಣೆಗೆ ಶಿವಮೊಗ್ಗ ನಗರ ಕ್ಷೇತ್ರವು ಸಜ್ಜುಗೊಳ್ಳುತ್ತಿದೆ.
ಅಖಂಡ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರವು ಶಿವಮೊಗ್ಗ ಗ್ರಾಮಾಂತರ ಹಾಗೂ ನಗರ ಕ್ಷೇತ್ರವಾಗಿ ಇಬ್ಭಾಗಗೊಂಡನಂತರ ಶಿವಮೊಗ್ಗ ನಗರ ಕ್ಷೇತ್ರದ ವ್ಯಾಪ್ತಿ ಅತ್ಯಂತ ಚಿಕ್ಕದಾಗಿದ್ದು, ಹೆಚ್ಚೆಂದರೆ ೧೦ಕಿ.ಮೀ. ಸುತ್ತಳತೆ ಹೊಂದಿದೆ.
ಆದರೆ ಮತದಾರರ ಸಂಖ್ಯೆಯಲ್ಲಿ ಕಡಿಮೆ ಏನಿಲ್ಲ. ಇಲ್ಲಿ ಪುರುಷರಿಗಿಂತ (೧.೨೨,೨೧೩) ಮಹಿಳಾ ಮತದಾರರೇ (೧.೨೪,೩೩೯) ಹೆಚ್ಚಿನ ಸಂಖ್ಯೆಯಲಿ ದ್ದಾರೆ.ಕ್ಷೇತ್ರ ಚಿಕ್ಕದಾಗಿರುವುದರಿಂದ ಅಭ್ಯರ್ಥಿಗಳ ಮತ ಪ್ರಚಾರಕ್ಕೆ ಹೇಳಿ ಮಾಡಿಸಿದಂತಿದೆ.
ಕ್ಷೇತ್ರದಲ್ಲಿ ಲಿಂಗಾಯತರು, ಮುಸ್ಲಿಮರು, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತೀ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದ್ದಾರೆ. ಇವರೊಂದಿಗೆ ಪರಿಶಿಷ್ಟರು, ಕುರುಬರು, ಈಡಿಗರು ಕೂಡಾ ಅಧಿಕ ಸಂಖ್ಯೆಯಲ್ಲಿ ಇರುವು ದರಿಂದ ಪ್ರತಿ ಚುನಾವಣೆಯಲ್ಲೂ ಫಲಿತಾಂಶವು ಕುತೂಹಲ ಕೆರಳಿಸುತ್ತಾ ಬಂದಿದೆ.
೧೯೫೨ರಿಂದ ಇಲ್ಲಿಯವರೆಗೆ ೧೪ ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್ ೯ ಬಾರಿ, ಬಿಜೆಪಿ ೫ ಬಾರಿ ಜಯ ಗಳಿಸಿದೆ.
ಪ್ರಸ್ತುತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ರಾಗಿ ರುವ ಕೆ.ಎಸ್.ಈಶ್ವರಪ್ಪ ೪ ಬಾರಿ ಆರಿಸಿ ಬಂದಿದ್ದು, ಪ್ರಸ್ತುತ ೭ನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.
ಉಳಿದಂತೆ ರತ್ನಮ್ಮ ಮಾಧವರಾವ್, ಎ.ಆರ್. ಬದರೀನಾರಾಯಣ್, ಕೆ.ಎಚ್.ಶ್ರೀನಿವಾಸ್ ತಲಾ ೨ ಬಾರಿಸಿ ಆರಿಸಿ ಬಂದಿದ್ದಾರೆ.
೧೯೫೭ ಹಾಗೂ ೧೯೬೨ರಲ್ಲಿ ಜಯ ಗಳಿಸಿದ್ದ ರತ್ನಮ್ಮ ಮಾಧವರಾವ್, ಕ್ಷೇತ್ರದಲ್ಲಿ ಜಯ ಗಳಿಸಿದ್ದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದರು. ೨೦೧೩ರ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ ಜಯ ಗಳಿಸುವ ಮೂಲಕ ಶಾರದಾ ಪೂರ‍್ಯನಾಯ್ಕ ಆ ದಾಖಲೆ ಅಳಿಸಿ ಹಾಕಿದರು.
ಎ.ಆರ್.ಬದರೀನಾರಾಯಣ್ ಅವರು ಮೊದಲು ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ೨ನೇ ಬಾರಿಗೆ ತೀರ್ಥಹಳ್ಳಿಯಲ್ಲಿ ಆರಿಸಿ ಬಂದಿದ್ದರು.
ಈ ಎರಡೂ ಕ್ಷೇತ್ರಗಳಲ್ಲಿ ಬದರೀನಾರಾಯಣ್‌ಗೆ ಎದುರಾಳಿಯಾಗಿದ್ದವರು ಸಮಾಜವಾದಿ ನಾಯಕ ಶಾಂತವೇರಿಗೋಪಾಲಗೌಡರು.
ಆ ನಂತರದಲ್ಲಿ ಶಿವಮೊಗ್ಗಕ್ಕೆ ವಲಸೆ ಬಂದ ಬದರೀನಾರಾಯಣ್ ಸತತ ಎರಡು ಬಾರಿ (೧೯೬೭ ಹಾಗೂ ೧೯೭೨) ಜಯ ಗಳಿಸಿದ್ದರು.
ವಿಶೇಷ ಎಂದರೆ ಸಾಗರದಲ್ಲಿ ಪ್ರಥಮ ಪ್ರಯತ್ನದಲ್ಲೇ ಕಾಗೋಡು ತಿಮ್ಮಪ್ಪರನ್ನು ಸೋಲಿಸಿದ್ದ ಕೆ.ಎಚ್.ಶ್ರೀನಿವಾಸ್ ನಂತರ ಶಿವಮೊಗ್ಗಕ್ಕೆ ವಲಸೆ ಬಂದರು. ಎರಡು ಬಾರಿ ಜಯ ಗಳಿಸಿದ ಶ್ರೀನಿವಾಸ್ ದೇವರಾಜ ಅರಸರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.
೧೯೮೯ರಲ್ಲಿ ಸಚಿವರಾಗಿದ್ದ ಶ್ರೀನಿವಾಸರನ್ನು ತಾವು ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಸೋಲಿಸಿದ್ದರು. ೧೯೯೯ರಲ್ಲಿ ಬಂಗಾರಪ್ಪ ಅಲೆಯಿಂದಾಗಿ ೨೦೧೩ರಲ್ಲಿ ಯಡಿಯೂರಪ್ಪ ಬಿಜೆಪಿ ತ್ಯಜಿಸಿದ್ದರಿಂದ ಈಶ್ವರಪ್ಪ ೨ ಬಾರಿ ಸೋಲುಂಡಿದ್ದರು.
ಕೆಜೆಪಿ ಹಾಗೂ ಬಿಜೆಪಿ ತಿಕ್ಕಾಟದ ನಡುವೆ ಕೆಜೆಪಿಯ ಎಸ್.ರುದ್ರೇಗೌಡರನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಬಿ.ಪ್ರಸನ್ನಕುಮಾರ್ ಕೇವಲ ೨೮೫ ಮತಗಳಿಂದ ಮಣಿಸಿ ಅದೃಷ್ಟದ ಅಲೆಯ ಮೇಲೆ ವಿಧಾನಸಭೆ ಪ್ರವೇಶಿಸಿದ್ದರು. ಈ ಬಾರಿ ಯಡಿಯೂರಪ್ಪ ಪಕ್ಷಕ್ಕೆ ಮರಳಿರುವುದು ಹಾಗೂ ಅವರದೇ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಯ ಹಾಗೂ ಕೆ.ಎಸ್.ಈಶ್ವರಪ್ಪ ಅವರಿಗೆ ಆನೆಬಲ ಮರು ಕಳಿಸಿದಂತಾಗಿದೆ.
ಹೀಗಾಗಿ ಅವರು ಹೆಚ್ಚು ಉತ್ಸಾಹದಿಂದ ಚುನಾವಣಾ ಕಣದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಹಾಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ , ಈಶ್ವರಪ್ಪ ಅವರ ಎದುರಾಳಿಯಾಗಿದ್ದು, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಹಾಗೂ ಬ್ರಾಹ್ಮಣರ ಮತಗಳ ಜೊತೆಗೆ ಸಿದ್ಧರಾಮಯ್ಯ ಕಾರಣಕ್ಕಾಗಿ (ಧರ್ಮ ವಿಭಜನೆ) ಲಿಂಗಾಯತ ಮತಗಳ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದ ಜೆಡಿಎಸ್‌ನ ಎಂ.ಶ್ರೀಕಾಂತ್ ಈ ಬಾರಿ ಕಣದಲ್ಲಿಲ್ಲ. ಕಳೆದ ಚುನಾವಣೆಯಲ್ಲಿ ೨೧ ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದ ಶ್ರೀಕಾಂತ್ ಬಗ್ಗೆ ಕ್ಷೇತ್ರದಲ್ಲಿ ಅನುಕಂಪದ ಅಲೆ ಇತ್ತು. ಆದರೆ ಜೆಡಿಎಸ್ ವರಿಷ್ಠರು ಜೆಡಿಎಸ್ ಜಾತಿ ಲೆಕ್ಕಾಚಾರದ ಮೇಲೆ ಲಿಂಗಾಯತ ಕೋಮಿಗೆ ಸೇರಿದ ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ ಅವರನ್ನು ಕಣಕ್ಕಿಳಿಸಿದ್ದಾರೆ. ಜೆಡಿಎಸ್ ವರಿಷ್ಠರ ಲೆಕ್ಕಾಚಾರ ಫಲಿಸುವುದೇ ಕಾದು ನೋಡಬೇಕಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಕುತೂಹಲ ಕೆರಳಿಸಿದೆ.

RELATED ARTICLES
- Advertisment -
Google search engine

Most Popular

Recent Comments