ದರ್ಶನ್ ಬಂಧನ: ವಿಚಾರಣೆ ನಂತರ ಸತ್ಯ ಹೊರಬೀಳಲಿದೆ-ಗೃಹ ಸಚಿವ ಜಿ.ಪರಮೇಶ್ವರ್‍

ಬೆಂಗಳೂರು: ಕೊಲೆ ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ಚಿತ್ರ ನಟ ದರ್ಶನ ಅವರನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು  ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.

ಅವರು ಇಂದು ಕೋರಮಂಗಲದ ಆರ್..ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ ನಡೆದ  ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಹಾಗೂ ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಚಾರಣೆಯ ನಂತರ ಸಂಬಂಧ ಸತ್ಯ ಹೊರಬೀಳಲಿದೆ ಎಂದು ತಿಳಿಸಿದರು

.